ETV Bharat / sitara

ಖದರ್‌ ತೋರಿಸೋಕೆ ಬರ್ತಿದೆ 'ಪೊಗರು', ಚಿತ್ರದ ರಿಲೀಸ್​​​​ ಡೇಟ್ ಫಿಕ್ಸ್?​​​ - druva sarja

ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಪೊಗರು’ ಚಿತ್ರ  ಡಿಸೆಂಬರ್ 24 ಅಥವಾ ಜನವರಿ 16, 2020ರಂದು ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ.

ಪೊಗರು ಚಿತ್ರದ ರಿಲೀಸ್​ ಡೇಟ್​ ಫೀಕ್ಸ್​​
author img

By

Published : Oct 15, 2019, 3:57 PM IST

ಕನ್ನಡದಲ್ಲಿ ಹ್ಯಾಟ್ರಿಕ್ ಬಾರಿಸಿ ಮುನ್ನುಗ್ಗುತ್ತಿರುವ ನಾಯಕ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಪೊಗರು’ ಚಿತ್ರ ಡಿಸೆಂಬರ್ 24 ಅಥವಾ ಜನವರಿ 16, 2020ರಂದು ತೆರೆಗೆ ಬರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಎಸ್‌ಆರ್‌ವಿ ಸಭಾಂಗಣಕ್ಕೆ ‘ಮುತ್ತುಕುಮಾರ’ ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದ ನಿರ್ದೇಶಕ ನಂದ ಕಿಶೋರ್ ಚಿತ್ರದ ಬಗ್ಗೆ ಮಾತಾನಾಡಿದರು.

ಈ ವೇಳೆ ತಮ್ಮ ಮೊಬೈಲ್​​​ನಲ್ಲಿ ಡೈಲಾಗ್‌ ಟ್ರೈಲರ್ ತೋರಿಸಿ​​, ಧ್ರುವ ಸರ್ಜಾ 40 ಕೆಜಿ ತೂಕ ಕಡಿಮೆ ಮಾಡಿಕೊಂಡು 16 ವರ್ಷದ ಹುಡುಗನ ರೀತಿ ಕಾಣುತ್ತಿದ್ದಾರೆ. 40 ಕೆಜಿ ತೂಕ ಇಳಿಸಿಕೊಂಡ ಮೇಲೆ ಸದ್ಯದ ಲುಕ್ಕಿಗೆ ತಲುಪಲು ಅವರು ಬಹಳ ಕಷ್ಟಪಟ್ಟಿದ್ದಾರೆ ಎಂದು ಹೇಳಿದ್ರು.

‘ಪೊಗರು’ ಚಿತ್ರದ ಕೆಲಸಗಳು ತ್ವರಿತಗತಿಯಲ್ಲಿ ಸಾಗುತ್ತಿವೆ. ಚಿತ್ರದ ಎರಡೂವರೆ ನಿಮಿಷದ ಡೈಲಾಗ್ ಟ್ರೈಲರ್ 24 ರಂದು ಬಿಡುಗಡೆಯಾಗುತ್ತಿದ್ದು, ಅದರಲ್ಲಿ ಚಿತ್ರದ ಕೆಲವು ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ರು.

ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. 1970 ದಶಕದ ‘ನಾಗರಹಾವು’ ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರರ (ಡಾ.ಕೆ ಎಸ್ ಅಶ್ವಥ್) ರೀತಿ ಕಾಣುವ ಅವರ ಪಾತ್ರ ವಿಶೇಷವಾಗಿದೆ ಎಂದು ಹೇಳುತ್ತಾ ಕುತೂಹಲ ಹೆಚ್ಚಿಸಿದ್ರು.

ಪೊಗರು ಬಿಡುಗಡೆ ಡಿಸೆಂಬರ್ 24 ಅಥವಾ ಜನವರಿ 16

ಕನ್ನಡದಲ್ಲಿ ಹ್ಯಾಟ್ ಟ್ರಿಕ್ ಭಾರಿಸಿ ಮುನ್ನುಗ್ಗುತಿರುವ ನೆಚ್ಚಿನ ನಾಯಕ ಧ್ರುವ ಸರ್ಜಾ, ರಶ್ಮಿಕ ಮಂದನ್ನ ಅಭಿನಯದ ನಂದ ಕಿಶೋರ್ ನಿರ್ದೇಶನದ ಚಿತ್ರ ಪೊಗರು ಚಿತ್ರ ಈ ವರ್ಷದ ಡಿಸೆಂಬರ್ 24 ಅಥವಾ ಜನವರಿ 16, 2020 ರಂದು ಬಿಡುಗಡೆ ಎಂದು ನಿಶ್ಚಯ ಆಗಿದೆ.

ನಿನ್ನೆ ರಾತ್ರಿ ಎಸ್ ಆರ್ ವಿ ಸಭಾಂಗಣಕ್ಕೆ ಮುತ್ತುಕುಮಾರ ಹಾಡುಗಳ ಬಿಡುಗಡೆ ಸಂರಂಭಕ್ಕೆ ಅತಿಥಿ ಆಗಿ ಆಗಮಿಸಿದ್ದ ನಂದ ಕಿಶೋರ್ ಒಂದೆರಡು ನಿಮಿಷದ ಮಾತುಕತೆಯಲ್ಲಿ ಕೆಲವು ಪತ್ರಕರ್ತರ ಬಳಿ ಪೊಗರು ಸಿನಿಮಾದ ಬಗ್ಗೆ ವಿವರ ನೀಡಿದ್ದಾರೆ. ಹಾಗೆ ಅವರ ಮೊಬೈಲ್ ಅಲ್ಲಿ ಸಂಭಾಷಣೆ ಟ್ರೈಲರ್ ಬಗ್ಗೆ ತೋರಿಸಿ ಧ್ರುವ ಸರ್ಜಾ 40 ಕೆಜಿ ತೂಕ ಕಡಿಮೆ ಮಾಡಿಕೊಂಡು 16 ವರ್ಷದ ಹುಡುಗನ ಹಾಗೆ ಕಾಣುವುದನ್ನು ಸಹ ತೋರಿಸಿ ಖುಷಿ ಪಟ್ಟುಕೊಂಡಿದ್ದಾರೆ. ನಂದ ಕಿಶೋರ್ ಹೇಳುವ ಪ್ರಕಾರ ತೂಕ ಹೆಚ್ಚಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸ ಅಲ್ಲ. 40 ಕೆಜಿ ತೂಕ ಧ್ರುವ ಸರ್ಜಾ ಇಳಿಸಿಕೊಂಡ ಮೇಲೆ ಸಧ್ಯದ ಲುಕ್ ಹಾಗೂ ಪೆರ್ಸನಾಲಿಟಿ ತಲುಪಲು ಬಹಳ ಕಷ್ಟ ಪಟ್ಟಿದ್ದಾರೆ.

ನಂದ ಕಿಶೋರ್ ಪ್ರಕಾರ ಪೊಗರು ಚಿತ್ರದ ಎಲ್ಲ ಕೆಲಸಗಳು ತ್ವರಿತ ಗತಿಯಲ್ಲಿ ಸಾಗುತ್ತಿದೆ. ಕಳೆದ ತಿಂಗಳ 24 ರಂದು ಡೈಲಾಗ್ ಟ್ರೈಲರ್ ಬಿಡುಗಡೆ ಮಾಡುವುದರಲ್ಲಿ ಏನಿದೆ.... ಧ್ರುವ ಸರ್ಜಾ ಹೇಳ್ತಾರ ಎದೆ ಗಟ್ಟಿಗೈತೆ ಅಂತ ಟಚ್ ಮಾಡೋಕೆ ಹೋಗಬೇಡ, ನನ್ನ ಮೈಯಾಗೆ ಎಷ್ಟು ಪೊಗರು ಐಟಿ ಅಂತ ಚೆಕ್ ಮಾಡೋಕ್ ಬರಬೇಡ...ಶೇಕ್ ಆಗೋಗ್ತೀಯಾ... ;’ಪೊಗರು ಚಿತ್ರದ ಮತ್ತೊಂದು ಎರಡೂವರೆ ನಿಮಿಷದ ಡೈಲಾಗ್ ಟ್ರೈಲರ್ ಇದೆ 24 ರಂದು ಬಿಡುಗಡೆ ಮಾಡಲಿದ್ದಾರೆ. ಅದರಲ್ಲಿ ಚಿತ್ರದ ಕೆಲವು ಕಲಾವಿದರು ಸಹ ಕಾಣಿಸಿಕೊಳ್ಳಲಿದ್ದಾರೆ.

ನಂದ ಕಿಶೋರ್ ಪೊಗರು ಸಿನಿಮಾ ಕನ್ನಡ ಅಲ್ಲದೆ ತೆಲುಗು ಭಾಷೆಯಲ್ಲೂ ಸಹ ಬಿಡುಗಡೆ ಅಂತ ಅಂದುಕೊಂಡಿದ್ದಾರೆ. ಇದೆ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಸಹ ಒಂದು ಮುಖ್ಯ ಪಾತ್ರದಲ್ಲಿ ಇದ್ದಾರೆ. 1970 ದಶಕದ ನಾಗರಹಾವು ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರು (ಡಾ ಕೆ ಎಸ್ ಅಶ್ವಥ್) ಇದ್ದ ಹಾಗೆ ರಾಘವೇಂದ್ರ ರಾಜಕುಮಾರ್ ಪಾತ್ರ ಈ ಪೊಗರು ಚಿತ್ರದಲ್ಲಿ ಇರುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.