ನಿನ್ನೆ ಅಂದ್ರೆ ಡಿಸೆಂಬರ್ 10 ರಂದು ನಿರ್ದೇಶಕ ಪವನ್ ಒಡೆಯರ್ ಅಪ್ಪನಾಗಿದ್ದಾರೆ. ಪವನ್ - ಆಪೇಕ್ಷ ದಂಪತಿಗೆ ಮುದ್ದಾದ ಗಂಡು ಮಗು ಹುಟ್ಟಿದೆ. ಈ ಖುಷಿಯನ್ನು ಪವನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ರು.. ಮತ್ತೊಂದು ವಿಶೇಷ ಅಂದ್ರೆ ಅಪ್ಪನ ಹುಟ್ಟುಹಬ್ಬದ ದಿನವೇ ಮಗರಾಯ ಕೂಡ ಹುಟ್ಟಿದ್ದು, ನಿರ್ದೇಶಕ ಒಡೆಯರ್ಗೆ ಡಬಲ್ ಖುಷಿ ನೀಡಿದೆ.
ಮತ್ತೊಂದು ವಿಚಾರ ಅಂದ್ರೆ ಈ ಮಗು ಹುಟ್ಟಿ ಅಪ್ಪನಿಗೆ ಸರ್ಪ್ರೈಸ್ ಆಗಿದ್ದಂತೂ ನಿಜ. ಇದೀಗ ಆ ಮಗು ಕೂಡ ಅಪ್ಪನಿಗೆ ಹುಟ್ಟು ಹಬ್ಬದ ವಿಶ್ ಮಾಡಿದೆ. ಅರೇ.. ಹುಟ್ಟಿದ ಒಂದು ದಿನಕ್ಕೆ ಆ ಚಿಕ್ಕ ಮಗು ಹೇಗ್ ವಿಶ್ ಮಾಡ್ತು ಅಂದ್ರಾ.. ಆ ಮಗು ಮಾತನಾಡಿಲ್ಲ, ಬದಲಾಗಿ ತಾಯಿಯಾಗಿರುವ ಆಪೇಕ್ಷ ಪತಿಯ ಹುಟ್ಟು ಹಬ್ಬಕ್ಕೆ ಮಗನಿಂದ ವಿಶ್ ಮಾಡಿಸಿದ್ದಾರೆ.
-
Ha ha ha the last present of the day @PurohitApeksha 🥰🥰🥰😘😘😘😘😘 pic.twitter.com/7JTuo5zQnI
— Pavan Wadeyar (@PavanWadeyar) December 10, 2020 " class="align-text-top noRightClick twitterSection" data="
">Ha ha ha the last present of the day @PurohitApeksha 🥰🥰🥰😘😘😘😘😘 pic.twitter.com/7JTuo5zQnI
— Pavan Wadeyar (@PavanWadeyar) December 10, 2020Ha ha ha the last present of the day @PurohitApeksha 🥰🥰🥰😘😘😘😘😘 pic.twitter.com/7JTuo5zQnI
— Pavan Wadeyar (@PavanWadeyar) December 10, 2020
ಓದಿ : 'ದಿಯಾ' ಹೀರೋ ಜೊತೆ ನಟಿಸುತ್ತಿದ್ದಾರೆ 'ಲವ್ ಮಾಕ್‌ಟೈಲ್' ನಿಧಿಮಾ
ಚಿಕ್ಕ ಮಗುವಿಗೆ ಹೊಸದೊಂದು ಉಡುಪು ಧರಿಸಿದ್ದು, ಆ ಬಟ್ಟೆ ಮೇಲೆ 'ಹ್ಯಾಪಿ ಬರ್ತ್ ಡೇ ಡ್ಯಾಡಿ. ನಿಮ್ಮ ಈ ಹುಟ್ಟು ಹಬ್ಬಕ್ಕೆ ಸಿಕ್ಕ ಬೆಸ್ಟ್ ಪ್ರೆಸೆಂಟ್ ನಾನು. ಐ ಲವ್ ಯೂ' ಎಂದು ಬರೆದಿದೆ. ಈ ಫೋಟೋವನ್ನು ನಿರ್ದೇಶಕ ಪವನ್ ಒಡೆಯರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಖುಷಿ ಹಂಚಿಕೊಂಡಿದ್ದಾರೆ.