ETV Bharat / sitara

ಬಿಗ್​ ಬಾಸ್​ ಸೀಸನ್‌-7: ಶಿವರಾಜ್​ ಕೆ.ಆರ್​ ಪೇಟೆ, ಸರಿಗಮಪ ಹನುಮಂತ ಬರ್ತಾರಾ? - ಬಿಗ್​ ಬಾಸ್​ ಸೀಸನ್​ 7

ಈ ಬಾರಿ ಬಿಗ್​ ಬಾಸ್​-7 ನಲ್ಲಿ ಜನಸಾಮಾನ್ಯರಿಗೆ ಅವಕಾಶ ಇರೋದಿಲ್ಲ. ಮೊದಲ ಸೀಸನ್ ರೀತಿ 17 ಜನ ಸಿನಿಮಾ ಹಾಗೂ ವಿವಿಧ ಕ್ಷೇತ್ರಗಳ ಸ್ಪರ್ಧಿಗಳಿರ್ತಾರೆ ಎಂದು ಪರಮೇಶ್ವರ್​ ಗುಂಡ್ಕಲ್​​​ ತಿಳಿಸಿದ್ದಾರೆ. ರಿಯಾಲಿಟಿ ಶೋ ಅಕ್ಟೋಬರ್ 13ರಿಂದ ಆರಂಭವಾಗಲಿದ್ದು, ಸಾಕಷ್ಟು ಅಚ್ಚರಿಯ ಟ್ವಿಸ್ಟ್​​ನೊಂದಿಗೆ ಆರಂಭವಾಗಲಿದೆ ಎಂದು ಅವರು ತಿಳಿಸಿದ್ರು

ಬಿಗ್​ ಬಾಸ್ ಸೀಸನ್​ 7
author img

By

Published : Oct 10, 2019, 9:13 PM IST

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್. ಬಿಗ್‌ಬಾಸ್ ಆರು ಸೀಸನ್​​ಗಳಲ್ಲಿ ವಿಭಿನ್ನ ಮ್ಯಾನರಿಸಂ ಇರುವ ಕಂಟೆಸ್ಟೆಂಟ್ಸ್‌ ಬಂದು ಹೋಗಿದ್ದಾರೆ. ಇದೀಗ ಬಿಗ್ ಬಾಸ್ ಸೀಸನ್-7 ಶುರು ಆಗೋದಕ್ಕೆ ದಿನಗಣನೆ ಆರಂಭವಾಗಿದೆ. ಈ ಬಗ್ಗೆ ಕಿಚ್ಚ ಸುದೀಪ್ ಹಾಗೂ ಕಲರ್ಸ್ ಕನ್ನಡ ಎಂಟರ್‌ಟೈನ್‌ಮೆಂಟ್ ಕ್ಲಸ್ಟರ್​​ ಬ್ಯುಸಿನೆಸ್‌ ಹೆಡ್ ಪರಮೇಶ್ ಗುಂಡ್ಕಲ್ ಹಲವಾರು ವಿಷ್ಯಗಳನ್ನು ಹಂಚಿಕೊಂಡಿದ್ದಾರೆ.

ಸದ್ಯ ಹರಿದಾಡುತ್ತಿರುವ ಊಹಾಪೋಹಗಳಂತೆ ಬಿಗ್​ ಬಾಸ್​ಗೆ ಶಿವರಾಜ್ ಕೆ.ಆರ್.ಪೇಟೆ, ನಟಿ ರಾಗಿಣಿ, ವಿಜಯಲಕ್ಷ್ಮಿ, ಪಾರುಲ್ ಯಾದವ್, ಕುರಿ ಪ್ರತಾಪ್, ಗಾಯಕ ಹನುಮಂತ ಸೇರಿದಂತೆ ಹಲವು ಹೆಸರುಗಳು ಕೇಳಿಬರುತ್ತಿದೆ. ಸದ್ಯ ಬಿಗ್ ಬಾಸ್ ಸೀಸನ್ 7 ಪ್ರೋಮೋಗಳು ವಿಭಿನ್ನವಾಗಿ ಮೂಡಿ ಬಂದಿದ್ದು ಈ ಸೀಸನ್ ಹಲವಾರು ವಿಶೇಷತೆಗಳಿಂದ ಕೂಡಿರುತ್ತೆ ಎನ್ನಲಾಗಿದೆ.

ಸುದೀಪ್ ಯಾಕೆ ಬಿಗ್ ಬಾಸ್ ಸೀಸನ್ 7ರಲ್ಲೂ ಮುಂದುವರೆಯುತ್ತಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಪರಮೇಶ್ ಗುಂಡ್ಕಲ್, ಏಳು ಕಾರಣಗಳನ್ನ ಕೊಟ್ಟಿದ್ದಾರೆ. ಹಾಗೆಯೇ ಸುದೀಪ್​ಗೂ ಕೂಡ ಬಿಗ್ ಬಾಸ್ ಶೋ, ಸಿನಿಮಾಗಿಂತ ಹೆಚ್ಚಾಗಿ ಖುಷಿ‌ ಕೊಟ್ಟಿದೆಯಂತೆ.

ಬಿಗ್ ಬಾಸ್ ಸೀಸನ್ 7ರ ಹೈಲೆಟ್ಸ್ ಅಂದ್ರೆ, ಬೆಂಗಳೂರು, ಮೈಸೂರು, ಬೆಳಗಾವಿ, ಉಡುಪಿಯ ಮಲ್ಟಿಪ್ಲೆಕ್ಸ್‌ಗಳಲ್ಲಿ ಕಾರ್ಯಕ್ರಮದ ಭರ್ಜರಿ ಓಪನಿಂಗ್​ ನೋಡಬಹುದಾಗಿದೆ.

Intro:ವೀಕ್ ಎಂಡ್ ನಲ್ಲಿ ನಿಮ್ಮ ಮನೆಯಲ್ಲಿ ಸಿಗಲಿದ್ದಾರೆ ಕಿಚ್ಚ ಸುದೀಪ್!!

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್..ಬಿಗ್ ಬಾಸ್ ಆರು ಸೀಸನ್ ಗಳಲ್ಲಿ ವಿಭಿನ್ನ ಮ್ಯಾನರಸಂ ಇರುವ ಕಾಂಟೆಸ್ಟ್ ಗಳು ಬಂದು ಹೋಗಿದ್ದಾರೆ..ಇದೀಗ ಬಿಗ್ ಬಾಸ್ ಸೀಸನ್ 7 ಸ್ಟಾರ್ಟ್ ಆಗೋದಿಕ್ಕೆ ದಿನಗಣನೆ ಆರಂಭವಾಗಿದೆ.ಈ ಬಗ್ಗೆ ಮಾತನಾಡೋದಿಕ್ಕೆ ಕಿಚ್ಚ ಸುದೀಪ್ ಹಾಗು ಕಲರ್ಸ್ ಕನ್ನಡ ಎಂಟರ್ ಟೈನ್ ಮೆಂಟ್ ಕ್ಲಸ್ಟರ್ ನ ಬ್ಯುಸಿನೆಸ್‌ ಹೆಡ್ ಪರಮೇಶ್ ಗುಂಡ್ಕಲ್ ಈ ಬಾರಿಯ ಬಿಗ್ ಬಾಸ್ ಸೀಸನ್ 7 ರ ಹಲವಾರು ವಿಷ್ಯಗಳನ್ನ ಹಂಚಿಕೊಂಡ್ರು...ಮೊದಲಿಗೆ ಮಾತನಾಡಿದ ಪರಮೇಶ್ ಗುಂಡ್ಕಲ್ ಈ ಬಾರಿ ಕಾಮನ್ ಮ್ಯಾನ್ ಗಳಿಗೆ ಅವಕಾಶ ಇರೋದಿಲ್ಲ, ಹಾಗೇ ಮೊದಲ ಸೀಸನ್ ತರ 17 ಜನ ಕಾಂಟೆಸ್ಟ್ ಗಳು ಸಿನಿಮಾ ಹಾಗೂ ಬೇರ ಕ್ಷೇತ್ರದ ಸ್ಪರ್ಧಿಗಳು ಇರ್ತಾರೆ ಅನ್ನೋದನ್ನ ಸ್ಪಷ್ಟ ಪಡಿಸಿದ್ರು..ಅಕ್ಟೋಬರ್ 13ರಿಂದ ಆರಂಭವಾಗಲಿದ್ದು, ದೊಡ್ಡ ದೊಡ್ಡ ಟ್ವಿಸ್ಟ್ ನೊಂದಿಗೆ ಬಿಗ್ ಬಾಸ್ ಶೋ ಆರಂಭವಾಗಲಿದೆಯಂತೆ..ಸದ್ಯ ಹರಿದಾಡುತ್ತಿರುವ ಊಹಾಪೋಹಗಳಂತೆ ಶಿವರಾಜ್ ಕೆ.ಆರ್.ಪೇಟೆ, ನಟಿ ರಾಗಿಣಿ, ವಿಜಯಲಕ್ಷ್ಮಿ, ಪಾರುಲ್ ಯಾದವ್, ಕುರಿ ಪ್ರತಾಪ್, ಗಾಯಕ ಹನುಮಂತ ಸೇರಿದಂತೆ ಹಲವರು ಹೆಸರುಗಳು ಕೇಳಿಬರುತ್ತಿದೆ.ಸದ್ಯ ಬಿಗ್ ಬಾಸ್ ಸೀಸನ್ 7 ಪ್ರೋಮೋಗಳು ವಿಭಿನ್ನವಾಗಿ ಮೂಡಿ ಬಂದಿದ್ದು ಈ ಸೀಸನ್ ಹಲವಾರು ವಿಶೇಷತೆಗಳಿಂದ ಕೂಡಿರುತ್ತೆ..ಇನ್ನು ಸುದೀಪ್ ಯಾಕೇ ಬಿಗ್ ಬಾಸ್ ಸೀಸನ್ 7 ರಲ್ಲೂ ಮುಂದುವರೆಯುತ್ತಿದ್ದಾರೆ ಅನ್ನೋದಿಕ್ಕೆ,ಕಲರ್ಸ್ ಕನ್ನಡ ಎಂಟರ್ ಟೈನ್ ಮೆಂಟ್ ಕ್ಲಸ್ಟರ್ ನ ಬ್ಯುಸಿನೆಸ್‌ ಹೆಡ್ ಪರಮೇಶ್ ಗುಂಡ್ಕಲ್ ಏಳು ಕಾರಣಗಳನ್ನ ಕೊಟ್ರು.ಹಾಗೇ ಕಿಚ್ವ ಸುದೀಪ್ ಗೂ ಬಿಗ್ ಬಾಸ್ ಶೋಗೆ ಎಷ್ಟು ಬಾಂಧವ್ಯ ಹೊಂದಿದ್ದಾರೆ ಅನ್ನೋದಿಕ್ಕೆ ಸಿನಿಮಾಗಿಂತ ಹೆಚ್ಚಾಗಿ, ಬಿಗ್ ಬಾಸ್ ಶೋ ಹೆಚ್ಚು ಖುಷಿ‌ ಕೊಟ್ಟಿರೋದು..ಹೀಗೆ ಬಿಗ್ ಬಾಸ್ ಜರ್ನಿ ಬಗ್ಗೆ ಸಾಕಷ್ಟು ವಿಷ್ಯಗಳನ್ನ ಹಂಚಿಕೊಂಡ್ರು.. ಈ ಬಿಗ್ ಬಾಸ್ ಸೀಸನ್ 7ರ ಹೈಲೆಟ್ಸ್ ಅಂದ್ರೆ, ಬೆಂಗಳೂರು, ಮೈಸೂರು, ಬೆಳಗಾವಿ, ಉಡುಪಿಯ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಗ್ ಬಾಸ್ ಸೀಸನ್ 7ರ ಓಪನಿಂಗ್ ನ್ನ, ಈ ನಾಲ್ಕು ಜಿಲ್ಲೆಯ ಪ್ರಮುಖ ಮಲ್ಟಿಪ್ಲೆಕ್ಸ್ ಗಳಲ್ಲಿ ನೋಡಲು ಅವಕಾಶ ಇದೆ..Body:ಆದ್ರೆ ಈ ಶೋ ನೋಡದಿಕ್ಕೆ ಟಿಕೆಟ್ ಕೊಂಡು ಮಲ್ಟಿಪ್ಲೆಕ್ಸ್ ಸ್ಕ್ರೀನ್ ಗಳಲ್ಲಿ ಈ ಬಾರಿಯ ಬಿಗ್ ಬಾಸ್ ಸೀಸನ್ 7ರ ಶೋನ ವಿಕ್ಷೀಸಬಹುದಾಗಿದೆ...ಅಕ್ಟೋಬರ್ 13ರ ಸಂಜೆ 6 ಗಂಟೆಗೆ ಕಿಚ್ಚ ಸುದೀಪ್ ನಿಮ್ಮ ಮನೆ ಬಾಗಲಿಗೆ ಬರಲಿದ್ದಾರೆ..ಸದ್ಯ ಸಾಕಷ್ಟು ಕುತೂಹಲ ಹುಟ್ಟಿಸಿರೋ ಸೀಸನ್ 7ರ ಬಿಗ್ ಬಾಸ್ ಮನೆಗೆ, ಯಾರೆಲ್ಲ ಎಂಟ್ರಿ ಕೊಡಲಿದ್ದಾರೆ ಅನ್ನೋದು ಅಂದು ಗೊತ್ತಾಗಲಿದೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.