ಕನ್ನಡ ಕಿರುತೆರೆಯ ಶ್ರೀಮತಿ ಎಂದೇ ಜನಪ್ರಿಯವಾಗಿರುವ ನಟಿ ಶಾಲಿನಿ ನಾಡ ಹಬ್ಬ ದಸರಾದ ಕುರಿತು ತಮ್ಮ ಸವಿ ಸವಿ ನೆನಪನ್ನು ಬಿಚ್ಚಿಟ್ಟಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಐತಿಹಾಸಿಕ ಹಬ್ಬ ದಸರಾದ ಸಂಭ್ರಮವನ್ನು ವರ್ಣಿಸಲು ಪದಗಳೇ ಸಾಲದು. 2017ರಲ್ಲಿ ತಮ್ಮ ಪತಿ ಜೊತೆ ಮೈಸೂರು ದಸರಾವನ್ನು ನೋಡಿ, ಆ ಅಂದವನ್ನು ಕಣ್ತುಂಬಿಕೊಂಡಿರುವ ಶಾಲಿನಿ, ಸುಂದರ ನೆನಪನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.
ಮೈಸೂರು ದಸರಾದಲ್ಲಿ ಶಾಲಿನಿ ಹೆಜ್ಜೆ ಹಾಕಿದ್ದು, ಇದು ನನ್ನ ಜೀವನದ ಅತ್ಯುತ್ತಮ ಕ್ಷಣ ಎಂದು ಸಂತಸದಿಂದಲೇ ಹೇಳಿದ್ದಾರೆ. "2017ರಲ್ಲಿ ಮೊದಲ ಬಾರಿಗೆ ನಾನು ದಸರಾ ನೋಡಿದ್ದು. ದಸರಾದಲ್ಲಿ ನಾನು ಮನಬಂದಂತೆ ಹೆಜ್ಜೆ ಹಾಕಿದ್ದೆ. ಯಾರು ಬೇಕಾದರೂ ನೋಡಲಿ, ಏನು ಬೇಕಾದರೂ ತಿಳಿಯಲಿ. ನನಗೇನೂ ಗೊತ್ತಿಲ್ಲ ಎಂಬಂತೆ ಮನಸ್ಸಿಗೆ ಸಂತಸವಾಗುವಷ್ಟು ನಲಿದೆ. ದಸರಾ ಹಬ್ಬವನ್ನು ಕೇವಲ ಒಂದು ಮಾತಿನಲ್ಲಿ ವಿವರಿಸಲು ಅಸಾಧ್ಯ. ಅದರ ಅಂದವನ್ನು ನೋಡಿಯೇ ಕಣ್ತುಂಬಿಕೊಳ್ಳಬೇಕು. ಚಿನ್ನದ ಅಂಬಾರಿ, ಅದು ಬರುವ ಮೊದಲು ಜನರ ಸಡಗರ ಇದೆಲ್ಲವನ್ನು ಖಂಡಿತಾ ಪದಗಳಲ್ಲಿ ಹೇಳಲು ಸಾಧ್ಯವಾಗದು. ಅದನ್ನು ಅನುಭವಿಸಿಯೇ ತೀರಬೇಕು" ಎಂದು ನೆನಪಿನ ಪುಟ ತಿರುವಿದ್ದಾರೆ.
2000ರಲ್ಲಿ ಆರಂಭವಾದ ಹಾಸ್ಯ ಧಾರಾವಾಹಿ ಪಾಪಾ ಪಾಂಡುವಿನಲ್ಲಿ ಶ್ರೀಮತಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿರುವ ಶಾಲಿನಿ ಇಂದಿಗೂ ಪಾಪಾ ಪಾಂಡು ಪಾಚು ಎಂದೇ ಪರಿಚಿತ. ಬಿಗ್ ಬಾಸ್ ಸೀಸನ್ 4ರ ಸ್ಫರ್ಧಿಯಾಗಿ ಕಾಣಿಸಿಕೊಂಡಿದ್ದ ಶಾಲಿನಿ, ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದಾರೆ. ನಟನೆಯ ಜೊತೆಗೆ ನಿರೂಪಕಿಯಾಗಿಯೂ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರೆ.