ETV Bharat / sitara

'ಪೈಲ್ವಾನ್' ಹುಟ್ಟುಹಬ್ಬಕ್ಕೆ ಚಿತ್ರತಂಡ ಬಿಡುಗಡೆ ಮಾಡ್ತು ಸ್ಪೆಷಲ್ ಸಾಂಗ್​​! - Abhinaya Chakravarthi

ಇಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟಿದ ದಿನ. ಬಹುನಿರೀಕ್ಷಿತ 'ಪೈಲ್ವಾನ್​​' ಸಿನಿಮಾ ಈ ತಿಂಗಳು ಬಿಡುಗಡೆಯಾಗಲಿದೆ. ಸುದೀಪ್ ಬರ್ತಡೇ ವಿಶೇಷವಾಗಿ ಚಿತ್ರತಂಡ ಅದ್ಧೂರಿ ವೆಚ್ಚದಲ್ಲಿ ನಿರ್ಮಿಸಲಾದ ಹಾಡೊಂದನ್ನು ಬಿಡುಗಡೆ ಮಾಡಿದೆ.

ಸುದೀಪ್ ಬರ್ತಡೇ
author img

By

Published : Sep 2, 2019, 12:59 PM IST

Updated : Sep 2, 2019, 1:15 PM IST

ಸಿನಿಮಾ ನಟರ ಹುಟ್ಟುಹಬ್ಬಕ್ಕೆ ಅವರು ನಟಿಸಿರುವ ಚಿತ್ರದ ಟೀಸರ್ ಅಥವಾ ಸ್ಪೆಷಲ್ ಸಾಂಗ್ ಬಿಡುಗಡೆ ಮಾಡುವುದು ವಾಡಿಕೆ. ಅದರಂತೆ ಇಂದು ಸುದೀಪ್ ಹುಟ್ಟುಹಬ್ಬಕ್ಕಾಗಿ ವಿಶೇಷ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ.

ಸದ್ಯಕ್ಕೆ ಪೈಲ್ವಾನ್ ಆಗಿ ಅಬ್ಬರಿಸಲು ರೆಡಿಯಿರುವ ಕಿಚ್ಚನಿಗೆ, 'ಪೈಲ್ವಾನ್' ಚಿತ್ರತಂಡ ದುಬಾರಿ ಬೆಲೆಯ ಉಡುಗೊರೆ ನೀಡಿದೆ. ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ಖರ್ಚು ಮಾಡಿ, ಶೂಟಿಂಗ್ ಮಾಡಿರುವ ಚಿತ್ರದ ಹಾಡೊಂದನ್ನು ಕಿಚ್ಚನ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಲಾಗಿದೆ. ನಿರ್ದೇಶಕ ಕೃಷ್ಣ ಈ ಹಾಡನ್ನು ಮುಂಬೈನಲ್ಲಿ ಅದ್ಧೂರಿ ಸೆಟ್​​​​​​​​​ ಹಾಕಿ ಚಿತ್ರೀಕರಿಸಿದ್ದಾರೆ. ನೂರಾರು ಡ್ಯಾನ್ಸರ್​​​ಗಳ ಜೊತೆ ಸುದೀಪ್ ಹಾಗೂ ಆಕಾಂಕ್ಷ ಸಿಂಗ್ ಮಸ್ತ್ ಸ್ಟೆಪ್ ಹಾಕಿದ್ದಾರೆ. ಈ ಹಾಡಿನಲ್ಲಿ ಸುದೀಪ್ ಡ್ಯಾನ್ಸ್ ಅಭಿಮಾನಿಗಳಿಗೆ ಖಂಡಿತಾ ಇಷ್ಟ ಆಗಲಿದೆ. 'ಗಿರಗಿರ ತಿರುಗುತಿರುವ ಬುಗುರಿ ಕಣ್ಣೋಳೆ' ಎಂಬ ಈ ಹಾಡು ಸಿನಿಮಾ ಕೊನೆಯಲ್ಲಿ ಬರಲಿದೆ ಎಂದು ಚಿತ್ರತಂಡ ಹೇಳಿದೆ. ಈ ಹಾಡು ಅಭಿನಯ ಚಕ್ರವರ್ತಿ ಸಿನಿಮಾ ಕರಿಯರ್​​​​​​​​​​​​​​​​​​​​​​​​​​​​​​​​​ನಲ್ಲಿ ಚಿತ್ರೀಕರಣವಾದ ದುಬಾರಿ ವೆಚ್ಚದ ಹಾಡು ಎನ್ನಲಾಗುತ್ತಿದೆ.

Intro:ಪೈಲ್ವಾನ್ ಹುಟ್ಟು ಹಬ್ಬಕ್ಕೆ ಚಿತ್ರತಂಡ ಕೊಡ್ತು ಒಂದುವರೆ ಕೋಟಿಯ ಸ್ಪೆಷಲ್ ಸಾಂಗ್!!

ಸ್ಯಾಂಡಲ್​ವುಡ್ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನ ಟ್ಯಾಲೆಂಟ್‌, ಫ್ರೂವ್ ಮಾಡಿರೋ ನಟ ಕಿಚ್ಚ ಸುದೀಪ್.. ಗೌರಿ ಗಣೇಶ ಹಬ್ಬದ ದಿನದೊಂದು, ಸುದೀಪ್ 46ನೇ ಹುಟ್ಟು ಹಬ್ಬವನ್ನ ತಮ್ಮ ಅಭಿಮಾನಿಗಳ ಜೊತೆ ಸೆಲೆಬ್ರೆಟ್ ಮಾಡುತ್ತಿದ್ದಾರೆ.ಸದ್ಯ ಪೈಲ್ವಾನ್ ಆಗಿ ಅಬ್ಬರಿಸೊಕ್ಕೆ ರೆಡಿಯಾಗಿರೋ ಕಿಚ್ಚನಿಗೆ, ಪೈಲ್ವಾನ್ ಚಿತ್ರತಂಡ ದುಬಾರಿ ಬೆಲೆಯ ಉಡುಗೊರೆಯನ್ನ ನೀಡಿದೆ..ಬರೋಬ್ಬರಿ ಒಂದುವರೆ ಕೋಟಿ ಖರ್ಚು ಮಾಡಿ, ಶೂಟಿಂಗ್ ಮಾಡಿರೋ ಪೈಲ್ವಾನ್ ಚಿತ್ರದ ಹಾಡನ್ನ ಕಿಚ್ಚನ ಹುಟ್ಟು ಹಬ್ಬಕ್ಕೆ ಬಿಡುಗಡೆ ಮಾಡಲಾಗಿದೆ..ನಿರ್ದೇಶಕ ಕೃಷ್ಟ ಈ ಹಾಡನ್ನ, ಮುಂಬಯಿನಲ್ಲಿ ಅದ್ದೂರಿ ಸೆಟ್ಟು ಹಾಕಿ, ನೂರಾರು ಡ್ಯಾನ್ಸರ್ ಜೊತೆ ಸುದೀಪ್ ಹಾಗು ಆಕಾಂಕ್ಷ ಸಿಂಗ್ ಕೈಯಲ್ಲಿ ಮಸ್ತ್ ಸ್ಟೆಪ್ ಹಾಕಿಸಿದ್ದಾರೆ..

Body:ಈ ಹಾಡಿನಲ್ಲಿ ಸುದೀಪ್ ಬೊಂಬಾಟ್ ಆಗಿ ಡ್ಯಾನ್ಸ್ ಮಾಡಿದ್ದು, ಕಿಚ್ಚನ ಫ್ಯಾನ್ಸ್ ಗೆ ಇಷ್ಟ ಆಗುತ್ತೆ..ಆದ್ರೆ ಈ ಹಾಡು ಈ ಸಿನಿಮಾದಲ್ಲಿ ಇರುವುದಿಲ್ಲ, ಬದಲಾಗಿ ಸಿನಿಮಾ ಮುಗಿದ ನಂತ್ರ ಈ ಹಾಡು ಬರುತ್ತೆ ಅನ್ನೋದು ಚಿತ್ರತಂಡದ ಮಾತು..ಸದ್ಯ ಈ ಹಾಡು ಅಭಿನಯ ಚಕ್ರವರ್ತಿ ಸಿನಿಮಾ ಕೆರಿಯರ್ ನಲ್ಲಿ ಚಿತ್ರೀಕರಣವಾದ ದುಬಾರಿ ವೆಚ್ಚದ ಹಾಡು ಎನ್ನಲಾಗುತ್ತಿದೆ..Conclusion:ರವಿಕುಮಾರ್ ಎಂಕೆ
Last Updated : Sep 2, 2019, 1:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.