ETV Bharat / sitara

ಅಣ್ಣಾವ್ರ ಚಿತ್ರದಂತೆ ಕಿಚ್ಚನ ಸಿನಿಮಾ ರಿಲೀಸ್​: ಥಿಯೇಟರ್ ಸ್ವಚ್ಛಗೊಳಿಸಿ ಪೈಲ್ವಾನ್ ಸ್ವಾಗತಿಸಿದ ಫ್ಯಾನ್ಸ್! - Chamarajanagar kichha Sudeep Fans Association

ಪ್ರೇಕ್ಷಕರು ನೆಮ್ಮದಿಯಿಂದ ಮನರಂಜನೆ ಪಡೆಯಲು ಚಾಮರಾಜನಗರ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘವು ನಗರದ ಬಸವೇಶ್ವರ ಚಿತ್ರಮಂದಿರದ ಹಾಲ್, ಶೌಚಾಲಯ ಸ್ವಚ್ಛಗೊಳಿಸಿ ಅಭಿಮಾನ ಮೆರೆದಿದ್ದಾರೆ.

ಪೈಲ್ವಾನ್
author img

By

Published : Sep 12, 2019, 12:32 PM IST

ಚಾಮರಾಜನಗರ: ದೇಶದೆಲ್ಲೆಡೆ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಅದ್ಧೂರಿಯಾಗಿ ತೆರೆಕಂಡಿದೆ. ನಗರದಲ್ಲಿ ಅಭಿನಯ ಚಕ್ರವರ್ತಿಯ ಅಭಿಮಾನಿಗಳು ಚಿತ್ರಮಂದಿರ ಸ್ವಚ್ಛಗೊಳಿಸಿ ಪೈಲ್ವಾನ್​ನನ್ನು ಸ್ವಾಗತಿಸಿದ್ದಾರೆ.

ಥಿಯೇಟರ್ ಸ್ವಚ್ಛಗೊಳಿಸಿ ಪೈಲ್ವಾನ್ ಬರಮಾಡಿಕೊಂಡ ಸುದೀಪ್ ಫ್ಯಾನ್ಸ್ !

ಪ್ರೇಕ್ಷಕರು ನೆಮ್ಮದಿಯಿಂದ ಮನರಂಜನೆ ಪಡೆಯಲು ಚಾಮರಾಜನಗರ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘವು ನಗರದ ಬಸವೇಶ್ವರ ಚಿತ್ರಮಂದಿರದ ಹಾಲ್, ಶೌಚಾಲಯ ಸ್ವಚ್ಛಗೊಳಿಸಿದ್ದಲ್ಲದೆ ರೂಮ್​ ಪ್ರೆಶನರ್ ಸಿಂಪಡಿಸಿ ಅಭಿಮಾನ ಮೆರೆದಿದ್ದಾರೆ.

ಮಾರ್ನಿಂಗ್ ಶೋಗೆ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರಿಗೆ ಸಿಹಿ ವಿತರಿಸಿ, ಸುದೀಪ್ ಕಟೌಟ್ ಗೆ ಕ್ಷೀರಾಭಿಷೇಕವನ್ನೂ ಮಾಡಿ ಸಂಭ್ರಮಿಸಿದ್ದಾರೆ. ಈ ಹಿಂದೆ ಡಾ. ರಾಜ್ ಕುಮಾರ್ ಚಿತ್ರಗಳು ಬಿಡುಗಡೆಯಾದಾಗ ಅಣ್ಣಾವ್ರ ಅಭಿಮಾನಿಗಳು ಇದೇ ರೀತಿ ಥಿಯೇಟರ್​ ಸ್ವಚ್ಛಗೊಳಿಸಿ ಚಿತ್ರವನ್ನು ಬರಮಾಡಿಕೊಳ್ಳುತ್ತಿದ್ದರು. ಅದೇ ರೀತಿ ಸುದೀಪ್​ ಅಭಿಮಾನಿಗಳು ಸಹ ಇಂತಹ ಒಳ್ಳೆಯ ಕೆಲಸದ ಮೂಲಕ ಗಮನ ಸೆಳೆದಿದ್ದಾರೆ.

Intro:ಅಣ್ಣಾವ್ರ ಚಿತ್ರದಂತೆ ಕಿಚ್ಚನ ಚಿತ್ರ ಬಿಡುಗಡೆ: ಥಿಯೇಟರ್ ಸ್ವಚ್ಛಗೊಳಿಸಿ ಪೈಲ್ವಾನ್ ಬರಮಾಡಿಕೊಂಡ ಸುದೀಪ್ ಫ್ಯಾನ್ಸ್ !

ಚಾಮರಾಜನಗರ: ದೇಶದೆಲ್ಲೆಡೆ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಅದ್ದೂರಿಯಾಗಿ ತೆರೆಕಂಡಿದ್ದು ನಗರದಲ್ಲಿ ಅಭಿನಯ ಚಕ್ರವರ್ತಿಯ ಅಭಿಮಾನಿಗಳು ಚಿತ್ರಮಂದಿರ ಸ್ವಚ್ಛಗೊಳಿಸಿ ಪೈಲ್ವಾನ್ ನನ್ನು ಬರಮಾಡಿಕೊಂಡಿದ್ದಾರೆ.
Body:
ಪ್ರೇಕ್ಷಕರು ಅರಾಮದಾಯವಾದ ಮನರಂಜನೆ ಪಡೆಯಲು
ಚಾಮರಾಜನಗರ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘವು ನಗರದ ಬಸವೇಶ್ವರ ಚಿತ್ರಮಂದಿರದ ಹಾಲ್, ಶೌಚಾಲಯ ಸ್ವಚ್ಛಗೊಳಿಸಿ ರೂಂ ಪ್ರೆಶನರ್ ಸಿಂಪಡಿಸಿ ಅಭಿಮಾನ ಮೆರೆದಿದ್ದಾರೆ.

ಮಾರ್ನಿಂಗ್ ಶೋಗೆ ಕಿಕ್ಕಿರುದು ತುಂಬಿದ್ದ ಪ್ರೇಕ್ಷಕರಿಗೆ ಸಿಹಿ ವಿತರಿಸಿ, ಭಾರೀ ಎತ್ತರದ ಸುದೀಪ್ ಕಟೌಟ್ ಗೆ ಕ್ಚೀರಾಭಿಷೇಕ ಮಾಡಿ ಸಂಭ್ರಮಿಸಿದರು.

Conclusion:ಈ ಹಿಂದೆ ಡಾ.ರಾಜ್ ಕುಮಾರ್ ಚಿತ್ರಗಳು ಬಿಡುಗಡೆಯಾದಾಗ ಅಣ್ಣಾವ್ರ ಅಭಿಮಾನಿಗಳು ಥಿಯೇಟರ್ ನ್ನು ಸ್ವಚ್ಛಗೊಳಿಸಿ ಚಿತ್ರವನ್ನು ಬರಮಾಡಿಕೊಳ್ಳುತ್ತಿದುದ್ದು ಪೈಲ್ವಾನ್ ಮೂಲಕ ಮರುಕಳಿಸಿದೆ.

Bite- nagendra, sudeep fan
ETV Bharat Logo

Copyright © 2024 Ushodaya Enterprises Pvt. Ltd., All Rights Reserved.