ಬೆಂಗಳೂರು: ಸಂಜನಾ ಗಲ್ರಾನಿ ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಗಿಣಿ ಇರುವ ಸೆಲ್ನಲ್ಲೇ ಇದ್ದಾರೆ. ಇದೀಗ ಸಿಸಿಬಿ ಅಧಿಕಾರಿಗಳು ಸಂಜನಾ ಮತ್ತೊಂದು ಮುಖವನ್ನು ಬಯಲು ಮಾಡಿದ್ದಾರೆ. ತನಿಖೆಯಲ್ಲಿ ಆರೋಪಿ 4 ಪ್ರಕಾಶ್ ರಾಂಕಾನಿಂದ ಸಂಜನಾ ಮುಖವಾಡ ಬಹಿರಂಗವಾಗಿದೆ.
ಡ್ರಗ್ಸ್ ಪ್ರಕರಣದಲ್ಲಿ ಎ14 ಆಗಿರುವ ಸಂಜನಾ ಗಲ್ರಾನಿ ಸಿಸಿಬಿ ವಿಚಾರಣೆಯಲ್ಲಿ ನನಗೆ ಏನೂ ಗೊತ್ತಿಲ್ಲ, ನಾನು ಏನೂ ತಪ್ಪು ಮಾಡಿಲ್ಲ ಎಂದಷ್ಟೇ ಹೇಳುತ್ತಿದ್ದರು. ಆದರೆ ಸಿಸಿಬಿ ತನಿಕಾಧಿಕಾರಿಗಳು ಪಟ್ಟು ಬಿಡದೆ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಸಂಜನಾ ಗಲ್ರಾನಿ ಹೈ-ಫೈ ಡ್ರಗ್ ಪಾರ್ಟಿಯಲ್ಲಿ ಭಾಗಿಯಾಗಿರುವುದು ಮಾತ್ರವಲ್ಲದೆ ಪ್ರಕರಣದಲ್ಲಿ ಬಂಧಿತರಾದ ಎ4 ಪ್ರಕಾಶ್ ರಾಂಕಾ, ರಾಹುಲ್ ಜೊತೆ ಸೇರಿ ಬೆಂಗಳೂರು, ಗೋವಾ, ಕೇರಳ, ಶ್ರೀಲಂಕಾ ಸೇರಿದಂತೆ ಹಲವೆಡೆ ಪಬ್ ಬಾರ್, ಅಪಾರ್ಟ್‌ಮೆಂಟ್ ಪಾರ್ಟಿಗಳಿಗೆ ಡ್ರಗ್ಸನ್ನು ಕೊರ್ಡ್ ವರ್ಡ್ ಮುಖಾಂತರ ಸಪ್ಲೈ ಮಾಡಿರುವುದು ಬೆಳಕಿಗೆ ಬಂದಿದೆ.
ಇಷ್ಟಲ್ಲದೆ ಹಲವಾರು ಪ್ರತಿಷ್ಠಿತ ಶ್ರೀಮಂತ ಉದ್ಯಮಿಗಳು, ಇಂಜಿನಿಯರಿಂಗ್ ಹಾಗೂ ಕೆಲವು ಮಾಡೆಲ್ಗಳಿಗೂ ಸಂಜನಾ ಡ್ರಗ್ಸ್ ರವಾನಿಸಿದ್ದಾರೆ ಎಂದು ಎ4 ಪ್ರಶಾಂತ್ ರಾಂಕಾ ಬಾಯಿ ಬಿಟ್ಟಿದ್ದು ಇದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಿಸಿಬಿ ಪೊಲೀಸರು ಸಂಜನಾ ಗಲ್ರಾನಿ ಮನೆ ಮೇಲೆ ದಾಳಿ ನಡೆಸಿ ಸುಮಾರು 9 ವಸ್ತುಗಳನ್ನು ಜಪ್ತಿ ಮಾಡಿದ್ದರು. ಈ ವಸ್ತುಗಳಲ್ಲಿ ಸಂಜನಾ ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಬೇಕಾದ ಸಾಕ್ಷ್ಯಗಳು ಇವೆ ಎನ್ನಲಾಗಿದೆ.
ಸಿಮ್ ಕಾರ್ಡ್ ಇಲ್ಲದ ಮೊಬೈಲ್, ಐಪೋನ್ , ಪ್ರೊಮ್ಯಾಕ್ಸ್ ಕಂಪ್ಯೂಟರ್, ಡಿವಿಆರ್ ಹಾಗೂ ಇನ್ನಿತರ ವಸ್ತುಗಳನ್ನು ಸಂಜನಾ ಅಪಾರ್ಟ್ಮೆಂಟ್ನಲ್ಲಿ ಜಪ್ತಿ ಮಾಡಲಾಗಿದೆ. ಇದನ್ನೆಲಾ ರಿಟ್ರೀವ್ ಮಾಡಿದಾಗ ಬಹಳ ಸಾಕ್ಷಿಗಳು ಸಿಕ್ಕಿದೆ. ಇದೆಲ್ಲಾ ಸಂಜನಾಗೆ ದೊಡ್ಡ ಕಂಟಕವಾಗಿದೆ. ನಾಳೆ ಸಂಜನಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ಈ ವೇಳೆ ತನಿಖಾ ತಂಡ ನ್ಯಾಯಾಲಯಕ್ಕೆ ಈ ಸಾಕ್ಷಿಗಳನ್ನು ನೀಡಲಿದೆ.