ETV Bharat / sitara

ಒಂದು ಕಾಲದಲ್ಲಿ ಸ್ಟಾರ್​​ ಹೀರೋ ಆಗಿ ಮಿಂಚಿದವರು ಇಂದು ಚಿತ್ರರಂಗದಿಂದ ದೂರ ..ದೂರ ! - away from the film industry

ಒಂದು ಕಾಲದಲ್ಲಿ ಸ್ಟಾರ್ ಹೀರೋ, ಸ್ಟಾರ್ ಹೀರೋಯಿನ್ ಆಗಿ ಸಿಲ್ವರ್ ಸ್ಕ್ರೀನ್‌ ಮೇಲೆ ರಾರಾಜಿಸಿದವರು, ಹೊಸ ನಟ ನಟಿಯರು ಬಂದ ಮೇಲೆ ಹಳೆ ನಟ, ನಟಿಯರಿಗೆ ಬೇಡಿಕೆ ಕಳೆದುಕೊಳ್ಳುತ್ತಾರೆ. ಈಗ ಈ ಮಾತು ಕನ್ನಡ ಚಿತ್ರರಂಗದ ಕೆಲ‌ ನಟರಿಗೆ ಅನ್ವಯ ಆಗುತ್ತೆ.

On the silver screen, the remaining Kannada actors are away from the film industry
ಒಂದು ಕಾಲದಲ್ಲಿ ಸ್ಟಾರ್​​ ಹೀರೋ ಆಗಿ ಮಿಂಚಿದವರು
author img

By

Published : May 8, 2020, 9:05 AM IST

ಹೊಸ ನೀರು ಬಂದ ಮೇಲೆ ಹಳೆ ನೀರು ಹರಿಯಬೇಕು. ಈ‌ ಗಾದೆ ಮಾತು ಭಾರತೀಯ ಚಿತ್ರರಂಗದ ಎಲ್ಲಾ ತಾರೆಯರಿಗೆ ಅನ್ವಯ ಆಗುತ್ತೆ. ಒಂದು ಕಾಲದಲ್ಲಿ ಸ್ಟಾರ್ ಹೀರೋ, ಸ್ಟಾರ್ ಹೀರೋಯಿನ್ ಆಗಿ ಸಿಲ್ವರ್ ಸ್ಕ್ರೀನ್‌ ಮೇಲೆ ರಾರಾಜಿಸಿದವರು, ಹೊಸ ನಟ ನಟಿಯರು ಬಂದ ಮೇಲೆ ಬೇಡಿಕೆ ಕಳೆದುಕೊಳ್ಳುತ್ತಾರೆ. ಈಗ ಈ ಮಾತು ಕನ್ನಡ ಚಿತ್ರರಂಗದ ಕೆಲ‌ ನಟರಿಗೆ ಅನ್ವಯ ಆಗುತ್ತೆ.

ಕನ್ನಡ ಚಿತ್ರರಂಗದಲ್ಲಿ ತನ್ನ ಡ್ಯಾನ್ಸ್ ಮೂಲಕವೇ ಕನ್ನಡಿಗರ ಮನಗೆದ್ದಿದ್ದ ನಟ ವಿನೋದ್ ರಾಜ್. ಪ್ರಸಿದ್ಧ ನಟಿ ಲೀಲಾವತಿಯವರ ಮಗನಾಗಿದ್ದ. ವಿನೋದ್ ರಾಜ್ 1987ರಲ್ಲಿ ಡ್ಯಾನ್ಸ್ ರಾಜಾ ಡ್ಯಾನ್ಸ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆ ದಿನಗಳಲ್ಲಿ ಕಾಲೇಜ್ ಹೀರೋ, ಸ್ಟಾರ್ ಹೀರೋ ಆಗಿ ಮೆರೆದಿದ್ದು ಈಗ ಇತಿಹಾಸ.

On the silver screen, the remaining Kannada actors are away from the film industry
ವಿನೋದ್ ರಾಜ್

ಎರಡು ಚಿತ್ರಗಳಿಂದ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವ್ಯಾಲ್ಯೂ ಹೆಚ್ಚಿಸಿಕೊಂಡ ವಿನೋದ್ ರಾಜ್, ಕೃಷ್ಣಾ ನೀ ಕುಣಿದಾಗ, ನಂಜುಂಡ, ಮಹಾಭಾರತ, ಶ್ರೀ ವೆಂಕಟೇಶ್ವರ ಮಹಿಮೆ, ನನಗೂ ಹೆಂಡ್ತಿ ಬೇಕು, ಯುದ್ಧಪರ್ವ, ಗಿಳಿ ಬೇಟೆ, ಕ್ಯಾಪ್ಟನ್, ಬೊಂಬಾಟ್ ರಾಜ ಬಂಡಲ್ ರಾಣಿ, ರಂಭಾ ರಾಜ್ಯದಲ್ಲಿ ರೌಡಿ, ರಾಜಣ್ಣ, ದಳವಾಯಿ, ಸ್ನೇಹಲೋಕ, ಓಂ ಶಕ್ತಿ, ಬ್ರಹ್ಮ ವಿಷ್ಣು, ವಂದೇ ಮಾತರಂ, ರಾಷ್ಟ್ರಗೀತೆ, ಶ್ರೀ ಮಂಜುನಾಥ, ನಮ್ಮ ಸಂಸಾರ ಆನಂದ ಸಾಗರ, ಪಾಂಡವ, ಕನ್ನಡದ ಕಂದ, ಶುಕ್ರ, ಯಾರದು ಹೀಗೆ 26 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದರು. ಆದರೆ ವಿನೋದ್ ರಾಜ್ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಒಂದು ದಶಕವೇ ಆಗಿದೆ. ಕಂಪ್ಲೀಟ್ ಚಿತ್ರರಂಗದಿಂದ ವಿನೋದ್ ರಾಜ್ ದೂರ ಉಳಿದಿದ್ದು ಅಭಿಮಾನಿಗಳಿಗೆ ನೋವು ಇದೆ.

ರಾಮ್ ಕುಮಾರ್

ಇನ್ನು ಹ್ಯಾಂಡ್ ಸಮ್‌ ಲುಕ್ ನಿಂದಲೇ‌ ಕನ್ನಡ ಚಿತ್ರರಂಗದಲ್ಲಿ, ಸ್ಟಾರ್ ಪಟ್ಟಗಿಟ್ಟಿಸಿದ ನಟ ರಾಮ್ ಕುಮಾರ್. ಕನ್ನಡದ ಪ್ರಖ್ಯಾತ ನಿರ್ಮಾಪಕ ಶೃಂಗಾರ ನಾಗರಾಜ್ ಮುದ್ದಿನ ಮಗನಾಗಿದ್ದ, ರಾಮ್ ಕುಮಾರ್ 1990 ರಲ್ಲಿ ತೆರೆಕಂಡ ‘ಆವೇಶ ’ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆದರೆ ಈ ಚಿತ್ರ ರಾಮ್ ಕುಮಾರ್​​ನ್ನ ಗುರುತಿಸಲಿಲ್ಲ.

1993 ರಲ್ಲಿ ಬಂದ ಗೆಜ್ಜೆನಾದ ಚಿತ್ರದಿಂದ ಪೂರ್ಣ ಪ್ರಮಾಣದ ನಾಯಕನಾಗಿ ರಾಮ್ ಕುಮಾರ್ ಕನ್ನಡಿಗರ ಹೃದಯ ಕದಿಯುವಲ್ಲಿ ಯಶಸ್ವಿಯಾದ್ರು. ಅಲ್ಲಿಂದ ಪೂಜಾ, ತವರಿನ‌ ತೊಟ್ಟಿಲು, ಹಬ್ಬ, ಸ್ನೇಹ ಲೋಕ, ಪಾಂಡವರು ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ‌ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದರು.

ರಾಮ್ ಕುಮಾರ್ ಕುಟುಂಬ

ವರನಟ ಡಾ. ರಾಜಕುಮಾರ್ ರವರ ಪುತ್ರಿ ಪೂರ್ಣಿಮಾ ಅವ್ರನ್ನ ಮದುವೆಯಾದ ರಾಮ್ ಕುಮಾರ್, 2006 ರಲ್ಲಿ ಪಾಂಡವರು ಎಂಬ ಚಿತ್ರವನ್ನು ನಿರ್ಮಿಸಿ ನಟಿಸಿದರು. ಆದರೆ ಈ ಸಿನಿಮಾ‌ ನಂತರ ರಾಮ್ ಕುಮಾರ್ ಚಿತ್ರರಂಗದಿಂದ ದೂರ ಸರಿದು 14 ವರ್ಷಗಳು ಉರುಳಿವೆ.

ಅಭಿಜಿತ್ 80ರ ದಶಕದಲ್ಲಿ ನಟ, ಖಳ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದವರು.1990ರಲ್ಲಿ ತೆರೆಕಂಡ ಕಾಲೇಜ್ ಹೀರೋ ಮತ್ತು ಚೈತ್ರದ ಪ್ರೇಮಾಂಜಲಿ ಚಿತ್ರದಲ್ಲಿ ಅಭಿಜಿತ್ ಖಳನಾಯಕನಾಗಿ ಮಿಂಚಿದರು. ಆದರೆ 1993ರಲ್ಲಿ ಬಂದ ‘ರಂಜಿತಾ’ ಚಿತ್ರದಿಂದ ಅಭಿಜಿತ್ ಹೀರೋ ಆಗಿ ಸಕ್ಸಸ್ ಕಂಡರು.

ಜಗ್ಗೇಶ್- ಅಭಿಜಿತ್

ವಿಷ್ಣುವರ್ಧನ, ಜಗ್ಗೇಶ್ ಹೀಗೆ ಕನ್ನಡದ ಸ್ಟಾರ್ ನಟರ ಜೊತೆ ಅಭಿಜಿತ್ ಹಿಟ್ ಚಿತ್ರಗಳನ್ನ ಕೊಟ್ಟಿದ್ದಾರೆ. 2005 ರಲ್ಲಿ ಸಮರ ಸಿಂಹ ನಾಯಕ ಎಂಬ ಚಿತ್ರವನ್ನು ನಿರ್ಮಿಸಿ, ನಟಿಸಿದರು. ಆದರೆ ಈ‌ ಸಿನಿಮಾ‌ ಯಶಸ್ಸು ಕಾಣಲಿಲ್ಲ. ಅಲ್ಲಿಂದ ಅಭಿಜಿತ್ ಕಳೆದ 15 ವರ್ಷಗಳಿಂದ ಚಿತ್ರರಂಗದ ತೆರೆ ಮರೆಗೆ ಸರಿದಿದಿದ್ದಾರೆ.

ಚೇತನ್

ಅಮೆರಿಕಾದಲ್ಲಿ ಉನ್ನತ್ತ ವ್ಯಾಸಂಗ ಮಾಡಿಕೊಂಡು, ಬೆಂಗಳೂರಿಗೆ ಬಂದು ಸಿನಿಮಾ ಜರ್ನಿ ಶುರು ಮಾಡಿದ ನಟ ಚೇತನ್. 2007ರಲ್ಲಿ ಆ ದಿನಗಳು ಮೂಲಕ ಚಿತ್ರರಂಗಕ್ಕೆ ಚೇತನ್ ಪಾದಾರ್ಪಣೆ ಮಾಡಿದರು. ನಂತರ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿ ಹೊಂದಿದ್ದ ಚೇತನ್, ‌ಮೈನಾ, ಬಿರುಗಾಳಿ, ಸೂರ್ಯಕಾಂತಿ, ಅತಿರಥ ಹೀಗೆ ಕೇವಲ 6 ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಚೇತನ್, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಕಂಪ್ಲೀಟ್ ಚಿತ್ರರಂಗದಿಂದ‌‌‌‌ ದೂರ ಉಳಿದಿದ್ದಾರೆ.

ಅನಿರುದ್ಧ

ಇನ್ನು ಆರ್ಕಿಟಿಕ್ಚರ್​​ನಲ್ಲಿ ಪದವಿ‌‌‌ ಪಡೆದಿದ್ದ ನಟ‌ ಅನಿರುದ್ಧ 2001 ರಲ್ಲಿ ತೆರೆಕಂಡ ‘ಚಿಟ್ಟೆ’ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಂತರ ತುಂಟಾಟ, ನೀನೇಲ್ಲೋ ನಾನಲ್ಲೆ,‌ ರಾಮ‌ ಶಾಮ‌‌ ಭಾಮ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಬೇಡಿಕೆ ಹೆಚ್ವಿಸಿಕೊಂಡಿದ್ದರು. ಆದರೆ ಹಲವು ವರ್ಷಗಳಿಂದ ಚಿತ್ರರಂಗದ ದೂರ ಉಳಿದಿದ್ದ ಅನಿರುದ್ಧ ರಾಜ ಸಿಂಹ ಚಿತ್ರದ ಮೂಲಕ ಕಮ್‌ ಬ್ಯಾಕ್ ಮಾಡಿದರು. ಆದರೆ ಈ ಚಿತ್ರ ಅಷ್ಟೊಂದು ಯಶಸ್ಸು ಕಾಣಲಿಲ್ಲ. ಇಲ್ಲಿಗೆ ಸಾಕು ಚಿತ್ರರಂಗದ ಸಹವಾಸ ಅನ್ನುವಷ್ಟರಲ್ಲಿ ಕಿರುತೆರೆಯಲ್ಲಿ ಮಿಂಚುವ ಮೂಲಕ ಅನಿರುದ್ಧ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.

ಕುಮಾರ್ ಗೋವಿಂದ -ಉಪೇಂದ್ರ

ಕುಮಾರ್ ಗೋವಿಂದ ಕನ್ನಡ ಚಿತ್ರರಂಗದಲ್ಲಿ ನಟ, ನಿರ್ಮಾಪಕ ಮತ್ತು ನಿರ್ದೇಶಕನಾಗಿ ಸಕ್ಸಸ್ ಕಂಡವರು.1993ರಲ್ಲಿ ಉಪೇಂದ್ರ ನಿರ್ದೇಶನದ ‘ಶ್’ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಕುಮಾರ್ ಗೋವಿಂದ್, ಕನ್ನಡದಲ್ಲಿ ಸ್ಟಾರ್ ಗಿರಿಯನ್ನ ಹೊಂದಿದವರು. ಒಂದು ಕಾಲದಲ್ಲಿ ಅನುರಾಗ ಸಂಗಮ ಅಂತಹ ಹಿಟ್ ಚಿತ್ರಗಳನ್ನ ಕೊಟ್ಟಿದ್ದ ಕುಮಾರ್ ಗೋವಿಂದ್ ಏನು ಮಾಡ್ತಾ ಇದ್ದಾರೆ ಅನ್ನೋ ಪ್ರಶ್ನೆ ಮೂಡುತ್ತೆ. ಕುಮಾರ್ ಗೋವಿಂದ್ ಕೂಡ ಚಿತ್ರರಂಗದಿಂದ ದೂರ ಉಳಿದು ವರ್ಷಗಳೇ ಕಳೆಯುತ್ತಿವೆ.

ಒಟ್ಟಾರೆ ಒಂದು ಕಾಲದಲ್ಲಿ ಸ್ಟಾರ್ ಗಳಾಗಿ ಬೆಳ್ಳಿ ತೆರೆ ಮೇಲೆ ರಾರಾಜಿಸಿದ ನಟರು, ಸಂಪೂರ್ಣವಾಗಿ ಈಗ ಕನ್ನಡ ಚಿತ್ರರಂಗದ ದೂರ ಉಳಿದಿರೋದು ಬೇಸರದ ಸಂಗತಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.