ವಾಷಿಂಗ್ಟನ್ ಡಿಸಿ: ಹಾಲಿವುಡ್ ನಟಿ, ನಿರ್ಮಾಪಕಿ ಒಲಿವಿಯಾ ವೈಲ್ಡ್ ಅವರು ಸೋನಿ ಪಿಕ್ಚರ್ಸ್ ಸ್ಟುಡಿಯೋದಲ್ಲಿ ನಿರ್ಮಾಣವಾಗಲಿರುವ ಮಹಿಳಾ ಪ್ರಧಾನ ಮಾರ್ವೆಲ್ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿ ಸಹಿ ಹಾಕಿದ್ದಾರೆ.
ಸ್ಪೈಡರ್ - ವುಮನ್ ಎಂಬ ಶೀರ್ಷಿಕೆಯಲ್ಲಿ ಸೋನಿ ಪಿಕ್ಷರ್ಸ್ ಸಿನಿಮಾ ನಿರ್ಮಿಸಲು ಮುಂದಾಗಿದೆ. ಈ ಹಿಂದೆ 1970ರ ದಶಕದಲ್ಲಿ ಹಲವಾರು ಮಾರ್ವೆಲ್ ಕಾಮಿಕ್ಸ್ಗಳು ತೆರೆಮೇಲೆ ಬಂದಿದ್ದವು. ಅವುಗಳಲ್ಲಿ ಮೇರಿ - ಜೇನ್ ವ್ಯಾಟ್ಸನ್ ಮತ್ತು ಗ್ವೆನ್ ಸ್ವೇಸಿ ಕೂಡ ಇದರ ಭಾಗವಾಗಿತ್ತು.
- " class="align-text-top noRightClick twitterSection" data="
">
ಇನ್ನು ಹೊಸ ಮಹಿಳಾ ಪ್ರಧಾನ ಚಿತ್ರವನ್ನು ಆಮಿ ಪ್ಯಾಸ್ಕಲ್ ಬ್ಯಾಂಕ್ರೊಲ್ ನಿರ್ಮಾಣ ಮಾಡಲಿದ್ದು, ಕೇಟೀ ಸಿಲ್ಬರ್‌ಮ್ಯಾನ್ ಚಿತ್ರಕಥೆ ಬರೆಯಲಿದ್ದಾರೆ ಎಂದು ವೆರೈಟಿ ವರದಿ ಮಾಡಿದೆ. ಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ರಾಚೆಲ್ ಒ'ಕಾನ್ನರ್ ಕೆಲಸ ಮಾಡಲಿದ್ದಾರೆ.
- " class="align-text-top noRightClick twitterSection" data="
">
ಇನ್ನು ಒಲಿವಿಯಾ ವೈಲ್ಡ್, ಬುಕ್ಸ್ಮಾರ್ಟ್ ಎಂಬ ಚಲನಚಿತ್ರದೊಂದಿಗೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಚಿತ್ರವು ಮೇ 24, 2020ರಂದು ಬಿಡುಗಡೆಯಾಗಿದ್ದು, 22 ಮಿಲಿಯನ್ ಯುಎಸ್ ಡಾಲರ್ ಕಲೆಕ್ಷನ್ ಮಾಡಿದೆ.