ಟೈಟಲ್ ಹಾಗೂ ಟ್ರೈಲರ್ನಿಂದಲೇ ಗಮನ ಸೆಳೆದಿರುವ ನ್ಯೂರನ್ ಚಿತ್ರ, ನವೆಂಬರ್ 22ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸದ್ಯ ಚಿತ್ರತಂಡ ವಿಭಿನ್ನ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ.
ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ ಬಿಡುಗಡೆ ದಿನ ಮತ್ತು ಪ್ರಮೋಷನ್ ಕುರಿತ ವಿಷಯಗಳನ್ನು ಹಂಚಿಕೊಂಡಿತು. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಮನುಷ್ಯನ ಆಲೋಚನೆ ಮತ್ತು ಮೆದುಳಿಗೆ ಸಂಬಂಧಿಸಿದ ಸೈಂಟಿಫಿಕ್ ಸೆಸ್ಪನ್ಸ್, ಥ್ರಿಲ್ಲರ್ ಸಿನಿಮಾ ಇದು.
ಸಿಂಗಲ್ ಸ್ಕ್ರೀನ್ಗಿಂತ ಹೆಚ್ಚಾಗಿ ಮಲ್ಟಿಫ್ಲೆಕ್ಸ್ಗಳಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಅಲ್ಲದೆ, ಆಸ್ಟ್ರೇಲಿಯಾ ಹಾಗೂ ಅಮೆರಿಕಾದಲ್ಲೂ ಬಿಡುಗಡೆ ಮಾಡಲು ತಯಾರಿ ನಡೆಸಿದೆ.
ಗಾಂಧಿನಗರ ಮಂದಿಗೆ ಸೆಡ್ಡು ಹೊಡೆಯುವ ರೀತಿ ಚಿತ್ರತಂಡ ವಿಭಿನ್ನ ಪ್ರಚಾರಕ್ಕೆ ಕೈ ಹಾಕಿದೆ. ಚಿತ್ರದ ಕಾಸ್ಟೂಮ್ ಅನ್ನು 6 ಜನರಿಗೆ ಹಾಕಿಸಿ ಹಾಗೂ ಕಾರಿಗೆ ಪೋಸ್ಟರ್ ಅಂಟಿಸಿ ಬೆಂಗಳೂರನ್ನು ಸುತ್ತುತ್ತಿರುವ ಚಿತ್ರತಂಡಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ.
ನಿರ್ದೇಶಕರು ಚಿತ್ರದ ಕಥೆಗಾಗಿ ಎರಡು ವರ್ಷ ಸಂಶೋಧನೆ ಮಾಡಿದ್ದಾರೆ. ಹೊಸಬರಿಗೆ ಹೆಚ್ಚು ಬೆಂಬಲ ನೀಡಬೇಕು ಎಂದು ಚಿತ್ರತಂಡ ಮನವಿ ಮಾಡಿಕೊಂಡಿತು. ಮೈಸೂರು ಟಾಕೀಸ್ ಥ್ರೂ ವಿತರಕ ಜಾಕ್ ಮಂಜು ಅವರು ಚಿತ್ರ ಬಿಡುಗಡೆ ಮಾಡ್ತಿದ್ದಾರೆ.