ವೀಕೆಂಡ್ನ ಪಾರ್ಟಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ದಿಗಂತ್ ಮತ್ತು ಐಂದ್ರಿತಾ ರೇ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದು ಡ್ರಗ್ಸ್ ಸರಬರಾಜು ಆರೋಪ ಹೊತ್ತಿರುವ ಶೇಕ್ ಫಾಜಿಲ್ ಜೊತೆಗೆ ಐಂದ್ರಿತಾ ರೇ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ಇದೀಗ ರಿವೀಲ್ ಆಗಿವೆ.

ಐಂದ್ರಿತಾ ರೇ ಒಂದು ಕಡೆ ರಾಗಿಣಿ ಸ್ನೇಹಿತೆ. ಇನ್ನು ಈ ಡ್ರಗ್ಸ್ ಜಾಲದಲ್ಲಿ ದಿಗಂತ್ ಮತ್ತು ಐಂದ್ರಿತಾ ರೇ ಹೆಸರು ಇರುವುದನ್ನು ಪೆಡ್ಲರ್ಗಳು ಮೊದಲೇ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಿಸಿಬಿ ಅಧಿಕಾರಿಗಳು ಇಬ್ಬರಿಗೂ ನೋಟಿಸ್ ನೀಡಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಈ ಬಗ್ಗೆ ಮಾಹಿತಿ ಕೇಳಲು ಯತ್ನಿಸಲಾಗುತ್ತಿದ್ದು ದಿಗಂತ್ ಮತ್ತು ಐಂದ್ರಿತಾ ರೇ ಫೋನ್ ಕರೆ ಸ್ವೀಕರಿಸುತ್ತಿಲ್ಲ. ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಲಿದ್ದಾರೆ ಎಂಬ ಮಾಹಿತಿ ಮೊದಲೇ ಗೊತ್ತಿರುವುದರಿಂದ ಗಂಡ ಹೆಂಡತಿ ಇಬ್ಬರು ಬೆಂಗಳೂರು ಬಿಟ್ಟು ಹೊರಗಡೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ನಾಳೆ ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದು ಏನಾಗಲಿದೆ ಅನ್ನೋದನ್ನು ಕಾದುನೋಡಬೇಕಿದೆ.

ಮತ್ತೊಂದು ಮಾಹಿತಿ ಪ್ರಕಾರ ಈ ಬಗ್ಗೆ ಗಂಡ ಹೆಂಡತಿ ಇಬ್ಬರು ಪ್ರತಿಕ್ರಿಯೆ ನೀಡಿದ್ದಾರೆ ಎಂಬ ಸುದ್ದಿ ಸಹ ಬಂದಿದೆ. ನಾವು ಎಲ್ಲಿಯೂ ಓಡಿ ಬಹೋಗಲ್ಲ, ನಾಳೆ ಬೆಳಗ್ಗೆ ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುತ್ತೇವೆ ಎಂದು ದಿಗಂತ್ ವಾಟ್ಸಪ್ ಮಾಡಿದರೆ, ಐಂದ್ರಿತಾ ಟ್ವೀಟ್ ಮಾಡಿದ್ದಾರೆ.
-
We have received a telephonic notice from the Central Crime Branch for an ongoing enquiry at 11am tomorrow. We will be present and fully cooperate with the CCB.
— Aindrita Ray (@AindritaR) September 15, 2020 " class="align-text-top noRightClick twitterSection" data="
">We have received a telephonic notice from the Central Crime Branch for an ongoing enquiry at 11am tomorrow. We will be present and fully cooperate with the CCB.
— Aindrita Ray (@AindritaR) September 15, 2020We have received a telephonic notice from the Central Crime Branch for an ongoing enquiry at 11am tomorrow. We will be present and fully cooperate with the CCB.
— Aindrita Ray (@AindritaR) September 15, 2020
