ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟಿ, ನೃತ್ಯಗಾರ್ತಿ ನೋರಾ ಫತೇಹಿ ಅವರ ಕಾರು ಮುಂಬೈನಲ್ಲಿ ಅಪಘಾತಕ್ಕೀಡಾಗಿದೆ. ನಟಿಯ ಅಭಿಮಾನಿಗಳಿಗೆ ಸಿಹಿ ಸುದ್ದಿ ಏನೆಂದರೆ ಅಪಘಾತದ ಸಮಯದಲ್ಲಿ ನೋರಾ ಕಾರಿನಲ್ಲಿ ಇರಲಿಲ್ಲ.
- " class="align-text-top noRightClick twitterSection" data="
">
ಮೊನ್ನೆ ಮಂಗಳವಾರ ಸಂಜೆ ಅಪಘಾತ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಂಜಾಬಿ ಗಾಯಕ ಗುರು ರಾಂಧವಾ ಅವರ ಜೊತೆಗಿನ 'ಡ್ಯಾನ್ಸ್ ಮೇರಿ ರಾಣಿ' ಹೊಸ ಆಲ್ಬಮ್ ಹಾಡಿನ ಪ್ರಚಾರಕ್ಕೆ ನಟಿ ಮುಂಬೈಗೆ ಬಂದಿದ್ದರು. ನೋರಾ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದ ವೇಳೆ ಅವರ ಕಾಡು ಆಟೋವೊಂದಕ್ಕೆ ಗುದ್ದಿದೆ. ತಕ್ಷಣವೇ ಅಲ್ಲಿದ್ದ ಜನರು ಕಾರನ್ನು ಸುತ್ತುವರೆದು ಚಾಲಕನನ್ನು ಹೊರಗೆಳೆದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ನೃತ್ಯ, ಅಂದದ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ 'ನೋರಾ ಫತೇಹಿ' ಹಾಟ್ ಲುಕ್ಸ್
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಆಟೋಗೆ ಹಾನಿಯಾಗಿದ್ದು, ಜನರು ಆಟೋ ಚಾಲಕನಿಗೆ ಹಣ ಕೊಡುವವರೆಗೂ ಕಾರು ಚಾಲಕನನ್ನು ಬಿಟ್ಟಿಲ್ಲ ಎಂದು ತಿಳಿದು ಬಂದಿದೆ.
ಇನ್ನು ಐಟಂ ಸಾಂಗ್ಗಳ ಮೂಲಕ ಪಡ್ಡೆ ಹುಡುಗರ ಮನ ಕದ್ದಿರುವ ನೋರಾ ಫತೇಹಿ ಹೆಸರು 200 ಕೋಟಿ ರೂ.ವಂಚನೆ ಪ್ರಕರಣದಲ್ಲೂ ಕೇಳಿಬಂದಿದ್ದು, ಜಾರಿ ನಿರ್ದೇಶನಾಲಯದ(ಇಡಿ) ವಿಚಾರಣೆ ನಡೆಸುತ್ತಿದೆ.