2010ರಲ್ಲಿ ನಿರ್ದೇಶಕ ಶಂಕರ್ ಅವರು ಆ್ಯಕ್ಷನ್, ಕಟ್ ಹೇಳಿದ್ದ ರಜನಿಕಾಂತ್, ಐಶ್ವರ್ಯಾ ರೈ ನಟನೆಯ 'ಎಂದಿರನ್' ಸಿನಿಮಾದ ಕಥೆಯನ್ನು ಕದಿಯಲಾಗಿದೆ ಎಂದು ದೂರು ದಾಖಲಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಶಂಕರ್ ಮೇಲೆ ಜಾಮೀನು ರಹಿತ ವಾರೆಂಟ್ ನೀಡಲಾಗಿದೆ.
ತಮಿಳುನಾಡನ್ ಎಂಬ ಲೇಖಕರು 'ಜಿಗುಬ' ಎಂಬ ಸಣ್ಣ ಕಥೆ ಬರೆದಿದ್ದರು. ನಂತ್ರ ಇದೇ ವಿಚಾರ ಇಟ್ಟುಕೊಂಡು'ಧಿಕ್ ಧಿಕ್ ದೀಪಿಕಾ' ಎಂಬ ಕಾದಂಬರಿಯನ್ನೂ ಪ್ರಕಟ ಮಾಡಿದ್ದರು. ಆದ್ರೆ 2010ರಲ್ಲಿ ಶಂಕರ್ ಧಿಕ್ ಧಿಕ್ ದೀಪಿಕಾ ಕಾದಂಬರಿ ಆಧರಿಸಿ ಚಿತ್ರ ಮಾಡಿದ್ದಾರೆ ಎಂದು ತಮಿಳುನಾಡನ್ ಆರೋಪ ಮಾಡಿ, ಕೋಟಿಗಟ್ಟಲೆ ಪರಿಹಾರ ಕೇಳಿದ್ದರು.
ಇದನ್ನೂ ಓದಿ : 'ಎಂದಿರನ್' ಕೃತಿಚೌರ್ಯ ವಿವಾದ...ನಿರ್ದೇಶಕ ಶಂಕರ್ಗೆ ಸುಪ್ರೀಂಕೋರ್ಟ್ನಲ್ಲೂ ಹಿನ್ನಡೆ
'ಎಂದಿರನ್' ಚಿತ್ರ ತೆರೆ ಕಂಡ ಮೇಲೆ ಸಣ್ಣ ಕಥೆಯನ್ನು ಕಾಪಿ ಮಾಡಿದ್ದಾರೆ ಎಂದು ಶಂಕರ್ ಮೇಲೆ ದೂರು ದಾಖಲಾಗಿತ್ತು. ಈ ಸಿನಿಮಾಕ್ಕೆ ಭಾರಿ ಪ್ರಮಾಣದಲ್ಲಿ ಹಣ , ಪ್ರಖ್ಯಾತಿ ಸಿಕ್ಕಿದೆ. ಆದ್ರೆ ಈ ಸಿನಿಮಾದ ಕಥೆ ನನ್ನದು ಎಂದು ತಮಿಳುನಾಡನ್ ವಾದಿಸಿದ್ದರು.
ಇಗ್ಮೋರ್ನ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ 2ರಲ್ಲಿ ನಡೆದ ವಿಚಾರಣೆಯಲ್ಲಿ ಶಂಕರ್ ಹಾಜರಾಗದ ಕಾರಣ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿ ಫೆಬ್ರವರಿ 19ಕ್ಕೆ ವಿಚಾರಣೆ ಮುಂದೂಡಲಾಗಿದೆ.