ಸಾಯಿ ಪಲ್ಲವಿ ತಮಿಳು, ಮಲಯಾಳಂ ಹಾಗೂ ತೆಲುಗು ಚಿತ್ರರಂಗದ ಭರವಸೆಯ ನಟಿ. ತಮಿಳಿನ 'ಎನ್ಜಿಕೆ' ನಂತರ ಸದ್ಯ ತೆಲುಗಿನ 'ವಿರಾಟ ಪರ್ವಂ' ಸೇರಿ ಕೆಲವೊಂದು ಸಿನಿಮಾಗಳಲ್ಲಿ ಸಾಯಿ ಪಲ್ಲವಿ ಬ್ಯುಸಿ ಇದ್ದಾರೆ.
-
VirataParvam Shooting In Parakala BusStop..!#SaiPallavi #VirataParvam #VenuUdugula #Rana pic.twitter.com/RRGBsjt5nU
— Sitara (@eenadu_sitara) September 7, 2019 " class="align-text-top noRightClick twitterSection" data="
">VirataParvam Shooting In Parakala BusStop..!#SaiPallavi #VirataParvam #VenuUdugula #Rana pic.twitter.com/RRGBsjt5nU
— Sitara (@eenadu_sitara) September 7, 2019VirataParvam Shooting In Parakala BusStop..!#SaiPallavi #VirataParvam #VenuUdugula #Rana pic.twitter.com/RRGBsjt5nU
— Sitara (@eenadu_sitara) September 7, 2019
ನಟಿಯರು ಯಾವುದಾದರೂ ಕಾರ್ಯಕ್ರಮಕ್ಕೆ ಬಂದರೆ, ಕುಟುಂಬದೊಂದಿಗೆ ವೈಯಕ್ತಿಕ ಸಮಾರಂಭಗಳಿಗೆ ಹೋದರೆ ಸೆಲ್ಫಿ, ಆಟೋಗ್ರಾಫ್ಗಾಗಿ ಅಭಿಮಾನಿಗಳು ಮುಗಿಬೀಳುವುದು ಸಾಮಾನ್ಯ. ಆದರೆ ಸಾಯಿಪಲ್ಲವಿ ಬಸ್ ಸ್ಟಾಪ್ನಲ್ಲಿ ಒಬ್ಬರೇ ಕುಳಿತಿದ್ದರೂ ಕೂಡಾ ಯಾರೂ ಅವರನ್ನು ಕಂಡುಹಿಡಿಯಲಿಲ್ಲವಂತೆ. ವೇಣು ಉಡುಗುಲ ನಿರ್ದೇಶನದಲ್ಲಿ ಸಾಯಿ ಪಲ್ಲವಿ ಹಾಗೂ ರಾಣಾ ದಗ್ಗುಬಾಟಿ ಜೊತೆಯಾಗಿ ನಟಿಸುತ್ತಿರುವ 'ವಿರಾಟ ಪರ್ವಂ' ಸಿನಿಮಾ ಶೂಟಿಂಗ್ ವಾರಂಗಲ್ನಲ್ಲಿ ನಡೆಯುತ್ತಿದೆ. ಅಲ್ಲಿನ ಬಸ್ಸ್ಟ್ಯಾಂಡ್ ಒಂದರಲ್ಲಿ ಸಾಯಿ ಪಲ್ಲವಿ ಬಸ್ಗಾಗಿ ಕಾಯುತ್ತಾ ಕುಳಿತಿರುವ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಚಿತ್ರತಂಡ ಯಾರಿಗೂ ತಿಳಿಯದಂತೆ ಬಸ್ಸ್ಯಾಂಡ್ ಹೋಟೆಲೊಂದರಲ್ಲಿ ಕ್ಯಾಮರಾ ಇಟ್ಟಿದ್ದಾರೆ. ಇನ್ನು ಸಾಯಿ ಪಲ್ಲವಿ ಬ್ಯಾಗ್ ಹಿಡಿದು ಕೆಲ ಹೊತ್ತು ಬಸ್ಗಾಗಿ ಕಾದು ಕುಳಿತಂತೆ ನಟಿಸಿ ನಂತರ ಅಲ್ಲಿಂದ ಎದ್ದು ಹೋಗಿದ್ದಾರೆ. ಆಶ್ಚರ್ಯ ಎಂದರೆ ಅಲ್ಲಿ ಜನರು ಓಡಾಡುತ್ತಿದ್ದರೂ ಪಕ್ಕದಲ್ಲೇ ಇದ್ದ ಸಾಯಿ ಪಲ್ಲವಿಯನ್ನು ಮಾತ್ರ ಯಾರೂ ಕಂಡುಹಿಡಿದಿಲ್ಲ. ಇದೀಗ ಈ ವಿಡಿಯೋ ವೈರಲ್ ಆಗಿದೆ.