ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಅನೇಕ ಹಾಡುಗಳು, ಕಾರ್ಟೂನ್ ಫೋಟೋ ಎಡಿಟಿಂಗ್ ಆ್ಯಪ್’ಗಳು ಟ್ರೆಂಡಿಂಗ್ ಆಗಿವೆ. ಸದ್ಯ ಟ್ರೆಂಡಿಂಗ್ ಆಗಿರುವ ಈ ಹಾಡಿಗೆ ನಟಿಯರು, ನಿರೂಪಕಿಯರು ಹೆಜ್ಜೆ ಹಾಕುತ್ತಿರುವುದನ್ನು ನೀವು ನೋಡಿರಬಹುದು.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಟಿಯರಾದ ಮೇಘಾ ಶೆಟ್ಟಿ, ನಿವೇದಿತ ಗೌಡ ಮುಂತಾದವರು ಟ್ರೆಂಡಿಂಗ್ ಆಗಿರುವ ಹಾಡಿಗೆ ಹೆಜ್ಜೆ ಹಾಕಿದ್ದು, ಇದು ಅಭಿಮಾನಿಗಳಿಗೂ ಇಷ್ಟವಾಗಿದೆ.
ಮೇಘಾ ಶೆಟ್ಟಿ ತಮ್ಮ ಸಹೋದರಿ ಜೊತೆ ಸಖತ್ ಆಗಿಯೇ ಹಾಡಿಗೆ ಮೈ ಬಳುಕಿಸಿದ್ದು, ಆ ವಿಡಿಯೋ ಈಗ ವೈರಲ್ ಆಗಿದೆ. ಈ ಹಿಂದೆಯೂ ಮೇಘಾ ಶೆಟ್ಟಿ ತಮ್ಮ ಸಹೋದರಿ ಜೊತೆ ಕೆಲವು ಹಾಡುಗಳಿಗೆ ಹೆಜ್ಜೆ ಹಾಕಿರುವುದನ್ನು ನೀವು ಇನ್ಸ್ಟಾಗ್ರಾಂನಲ್ಲಿ ನೋಡಬಹುದು.
ನಿವೇದಿತಾ ಗೌಡ ತಮ್ಮ ಪತಿ ಚಂದನ್ ಶೆಟ್ಟಿ ಜೊತೆ ಹಾಡಿಗೆ ನೃತ್ಯ ಮಾಡಿದ್ದು, ಅವರ ಅನುಯಾಯಿಗಳು ಹಾರ್ಟ್ ಇಮೋಜಿಗಳನ್ನು ಕಮೆಂಟ್ ಮಾಡಿದ್ದಾರೆ. ಜೊತೆಗೆ ಎಂದಿನಂತೆ ಮುದ್ದಾದ ಜೋಡಿ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನಿವೇದಿತಾ ಗೌಡ ಸಹ ತಮ್ಮ ಪತಿ ಜೊತೆ ಹೆಜ್ಜೆ ಹಾಕಿರುವ ಅನೇಕ ವಿಡಿಯೋಗಳು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದನ್ನು ನೀವು ನೋಡಬಹುದು.