ETV Bharat / sitara

ಇಲ್ಲಸಲ್ಲದ ಕಮೆಂಟ್​​​ ಮಾಡಿ ಕಲಾವಿದರಿಗೆ ನೋವು ಮಾಡಬೇಡಿ: ನಿತ್ಯಾ ಮೆನನ್​​​

ಇತ್ತೀಚೆಗೆ ಬಿಡುಗಡೆಯಾದ 'ಮಿಷನ್ ಮಂಗಳ್​​' ಚಿತ್ರದಲ್ಲಿ ನಿತ್ಯಾ ಮೆನನ್ ಅವರನ್ನು ನೋಡಿದ ಜನರು ಅವರ ಬಗ್ಗೆ ಟ್ರೋಲ್ ಮಾಡುತ್ತಲೇ ಇದ್ದಾರೆ. ನಿತ್ಯಾ ಮೆನನ್ ತಿಂದು ತಿಂದು ದಪ್ಪ ಆಗಿದ್ಧಾರೆ. ಅದಕ್ಕೆ ಅವರಿಗೆ ಅವಕಾಶಗಳು ಸಿಗುತ್ತಿಲ್ಲ ಎಂದು ನಿತ್ಯಾ ಅವರ ಬಗ್ಗೆ ಕಮೆಂಟ್ ಮಾಡುತ್ತಿದ್ದು, ಈ ಬಗ್ಗೆ ನಿತ್ಯಾ ಬೇಸರ ವ್ಯಕ್ತಪಡಿಸಿದ್ದಾರೆ.

author img

By

Published : Aug 24, 2019, 6:05 PM IST

ನಿತ್ಯಾ ಮೆನನ್

ಪ್ರತಿಭಾನ್ವಿತ ನಟಿಯರನ್ನು ಅಭಿಮಾನಿಗಳು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ಇದಕ್ಕೆ ಇತ್ತೀಚಿನ ಉದಾಹರಣೆ ನಿತ್ಯಾ ಮೆನನ್. ಮಲಯಾಳಂ ಕುಟ್ಟಿ ನಿತ್ಯಾ ಮೆನನ್​​​ ಇತ್ತೀಚೆಗೆ ದಪ್ಪ ಆಗಿದ್ದು, ಇದೇ ವಿಷಯಕ್ಕೆ ಟ್ರೋಲ್ ಆಗುತ್ತಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಲೇ ಇದೆ.

nitya menon
ಕೋಟಿಗೊಬ್ಬ-2 ಚಿತ್ರದಲ್ಲಿ ಸುದೀಪ್ ಜೊತೆ ನಿತ್ಯಾ ಮೆನನ್​​

'ನಿತ್ಯಾ ಮೆನನ್ ಬಹಳ ಸೋಮಾರಿ. ಅವರು ತುಂಬಾ ತಿಂದು ದಪ್ಪ ಆಗಿದ್ದಾರೆ. ದಪ್ಪ ಇರುವುದರಿಂದಲೇ ಅವಕಾಶಗಳು ಕಡಿಮೆ ಆಗುತ್ತಿವೆ' ಎಂದು ಕೆಲವರು ಕಮೆಂಟ್ ಮಾಡಿದ್ಧಾರೆ. ಆದರೆ ಈ ಕಮೆಂಟ್​​​​ಗಳ​​ ಬಗ್ಗೆ ಇದೀಗ ನಿತ್ಯಾ ತುಟಿ ಬಿಚ್ಚಿದ್ಧಾರೆ. ನನ್ನ ಬಗ್ಗೆ ಈ ರೀತಿ ಕಮೆಂಟ್ ಮಾಡಿದ ವ್ಯಕ್ತಿಗಳು ದಡ್ಡರೆಂದು ನಿತ್ಯಾ ಮೆನನ್ ಜರಿದಿದ್ದಾರೆ. ಅನೇಕರಲ್ಲಿ ತೂಕದ ಸಮಸ್ಯೆ ಇರುತ್ತದೆ. ಆದರೆ ನಟಿಯರು ಯಾವ ಕಾರಣಕ್ಕೂ ಸೋಮಾರಿಗಳಾಗಲು ಸಾಧ್ಯವೇ ಇಲ್ಲ. ಸಿನಿಮಾ ಶೂಟಿಂಗ್​ನಲ್ಲಿ ಪಾಲ್ಗೊಳ್ಳುವುದು ಸುಲಭದ ಮಾತಲ್ಲ. ಪ್ರತಿದಿನ ಸುಮಾರು 8 ಗಂಟೆಗಳ ಕಾಲ ನಿಂತುಕೊಂಡೇ ಇರುತ್ತೇವೆ. ಹಾರ್ಮೋನ್ ಸಮಸ್ಯೆ ಇದ್ದರೆ ತೂಕ ಕಡಿಮೆ ಮಾಡಿಕೊಳ್ಳುವುದು ಕಷ್ಟ. ಚಿತ್ರ ನೋಡಿದ ಪ್ರೇಕ್ಷಕರು ಹೀಗೆಲ್ಲಾ ಕಮೆಂಟ್ ಮಾಡಿದರೆ ಕಲಾವಿದರಿಗೆ ಮತ್ತಷ್ಟು ನೋವು ಉಂಟಾಗುತ್ತದೆ ಎಂದು ಸಹ ಹೇಳಿಕೊಂಡಿದ್ದಾರೆ ನಿತ್ಯಾ.

nitya
ನಿತ್ಯಾ ಮೆನನ್​​

ನಿತ್ಯಾ ಮೆನನ್​ 10 ವರ್ಷದ ಬಾಲಕಿ ಆಗಿದ್ದಾಗಲೇ 'ಮಂಕಿ ಹೂ ನ್ಯೂ ಟೂ ಮಚ್​​​​ ಸಿನಿಮಾದಿಂದ' ಚಿತ್ರರಂಗಕ್ಕೆ ಬಂದವರು. 2006ರಲ್ಲಿ ಬಿಡುಗಡೆಯಾದ 'ಸೆವೆನ್ ಓ ಕ್ಲಾಕ್​​​' ಚಿತ್ರದ ಮೂಲಕ ಕನ್ನಡಕ್ಕೆ ಬಂದರು. ಜೋಶ್, ಮೈನಾ, ಕೋಟಿಗೊಬ್ಬ-2 ಸೇರಿ ಬಹಳಷ್ಟು ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಕೂಡಾ ನಿತ್ಯಾ ನಟಿಸಿದ್ದಾರೆ. ಅಲ್ಲದೆ ಇತ್ತೀಚೆಗೆ ಬಿಡುಗಡೆಯಾದ ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಮಿಷನ್ ಮಂಗಳ್​​​​​​​​' ಚಿತ್ರದ ಮೂಲಕ ಅವರು ಬಾಲಿವುಡ್​​​ಗೆ ಕಾಲಿರಿಸಿದ್ದಾರೆ.

ನಿತ್ಯ ಮೆನನ್ ದಪ್ಪ ಇರುವುದಕ್ಕೆ ಆಕ್ಷೇಪ ನಟಿಯಿಂದ ಖಡಕ್ ಉತ್ತರ

ಪ್ರತಿಭಾನ್ವಿತ ನಟಿಯರನ್ನು ಅಭಿಮಾನಿಗಳು ಸೂಕ್ಷ್ಮವಾಗಿ ಗಮನಿಸುತ್ತಾ ಇರುತ್ತಾರೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ಲೇಟೆಸ್ಟ್ ಉದಾಹರಣೆ ಅಂದರೆ ಹಿಂದಿಯ ಸೂಪರ್ ಹಿಟ್ ಚಿತ್ರ ಮಿಷನ್ ಮಂಗಲ್ ನೋಡಿ ಕೆಲವು ಅಭಿಮಾನಿಗಳು ಅದರಲ್ಲಿ ಮೊದಲ ಬಾರಿಗೆ ನಟಿಸಿರುವ ನಿತ್ಯ ಮೆನನ್ ಅವರು ದಪ್ಪ ಇರುವುದಕ್ಕೆ ಆಕ್ಷೇಪ ವ್ಯಕ್ತ ಮಾಡಿದ್ದಾರೆ. ಇದು ಈಗ ಸಾಮಾಜಿಕ ಜಾಲತಾನದಲ್ಲಿ ಬಹಳ ಚರ್ಚೆ ಸಹ ಆಗುತ್ತಿದೆ.

ನಿತ್ಯ ಮೆನನ್ ದಪ್ಪ ಆಗಿರುವುದರ ಬಗ್ಗೆ ಅವರು ತುಂಬಾ ಸೋಮಾರಿ, ತುಂಬಾ ತಿಂದು ತಿಂದು ದಪ್ಪ ಆಗಿದ್ದಾರೆ ಎಂದು ಸಹ ಟ್ರೋಲ್ ಮಾಡಲಾಗಿದೆ. ಅವರು ದಪ್ಪ ಇರುವುದಕ್ಕೆ ಅವಕಾಶ ಸಹ ಕಡಿಮೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಹಾಗೆ ಹೇಳಿದ ವ್ಯಕ್ತಿಗಳು ದಡ್ಡರೆಂದು ನಿತ್ಯ ಮೆನನ್ ಜರದಿದ್ದಾರೆ. ತೂಕದ ಸಮಸ್ಯೆ ಹಲವರಲ್ಲಿ ಇರುತ್ತದೆ. ಆದರೆ ನಟಿಯರು ಸೋಮಾರಿ ಅಂತೂ ಅಲ್ಲವೇ ಅಲ್ಲ. ಸುಮಾರು ಎಂಟು ಗಂಟೆಗಳ ಕಾಲ ನಾವು ನಿಂತು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತೇವೆ. ಚಿತ್ರದಲ್ಲಿ ಅಭಿನಯಿಸೋದು ಸುಲಭದ ಮಾತಲ್ಲ.

ಹಾರ್ಮೋನ್ ಸಮಸ್ಯೆ ಇದ್ದರೆ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಕಷ್ಟ. ಚಿತ್ರ ನೋಡಿದ ಪ್ರೇಕ್ಷಕರು ಹೀಗೆಲ್ಲಾ ಕಾಮೆಂಟ್ ಪಾಸ್ ಮಾಡಿದರೆ ಕಲಾವಿದರುಗಳಿಗೆ ಮತ್ತಷ್ಟು ನೋವು ಉಂಟಾಗುತ್ತದೆ ಎಂದು ಸಹ ಹೇಳಿಕೊಂಡಿದ್ದಾರೆ ನಿತ್ಯ ಮೆನನ್.

10 ವರ್ಷದ ಬಾಲಕಿ ಆಗಿದ್ದಾಗಲೇ ಒಂದು ಆಂಗ್ಲ ಭಾಷೆಯ ಮಂಕಿ ಹೂ ನ್ಯೂ ಟೂ ಮಚ್ ಬಾಲನಟಿ ಆದ ನಿತ್ಯ ಮೆನನ್ ಈಗ 30 ನೇ ವಯಸ್ಸಿಗೆ (ಜನುಮ ದಿನ ಏಪ್ರಿಲ್ 8) ಹಲಾವಾರು ಸಿನಿಮಗಳಿಂದ ಖ್ಯಾತಿ ಪಡೆದವರು. 2006 ರಲ್ಲಿ ಕನ್ನಡ ಚಿತ್ರ ಸೆವೆನ್ ಒ ಕ್ಲಾಕ್ ಇಂದ ವೃತ್ತಿ ಪ್ರಾರಂಭಿಸಿ ತಮಿಳು, ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ಜನಪ್ರಿಯ ನಟಿ. ಮಿಷನ್ ಮಂಗಲ್ ಇಂದ ಅವರು ಹಿಂದಿ ಸಿನಿಮಕ್ಕೂ ಕಾಲಿಟ್ಟಿದ್ದಾರೆ. ಕನ್ನಡದಲ್ಲಿ ಜೋಶ್, ಐದು ಒಂದ್ಲ ಐದು , ಮೈನಾ, ಕೋಟಿಗೊಬ್ಬ 2 ನಿತ್ಯ ಮೆನನ್ ಅಭಿನಯಿಸಿದ್ದು ಬಹಳ ಹೆಸರು ಮಾಡಿದ ಸಿನಿಮಗಳು.  

ETV Bharat Logo

Copyright © 2024 Ushodaya Enterprises Pvt. Ltd., All Rights Reserved.