ಮದುವೆಯ ಮಮತೆಯ ಕರೆಯೋಲೆ ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಟ ಸೂರಜ್ ಗೌಡ. ಇದೀಗ 'ನಿನ್ನ ಸನಿಹಕೆ' ಎಂಬ ಸಿನಿಮಾದಲ್ಲಿ ನಟನೆ ಜೊತೆಗೆ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಮಾಡ್ತಿರೋ ಸೂರಜ್ ಗೌಡ ಕನ್ನಡ ಚಿತ್ರರಂಗದ ಸೌಂಡ್ ಮಾಡುತ್ತಿದ್ದಾರೆ.
ಸದ್ಯ ಟೀಸರ್ನಿಂದ ಗಮನ ಸೆಳೆಯುತ್ತಿರುವ ನಿನ್ನ ಸನಿಹಕೆ ಚಿತ್ರದ 'ದಿ ಸೌಂಡ್ ಆಫ್ ಛಾವೋಸ್' ಎಂಬ ಹಾಡು ರಿಲೀಸ್ ಮಾಡೋದಕ್ಕೆ ರೆಡಿಯಾಗಿದೆ. ಇದೇ 24ರಂದು ಈ ಹಾಡು ಅನಾವರಣ ಆಗುತ್ತಿದ್ದು, ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದಾರೆ. ರಘು ದೀಕ್ಷಿತ್ ಕಂಪೋಸ್ ಮಾಡಿ ಸ್ವತಃ ಈ ಹಾಡು ಹಾಡಿದ್ದಾರೆ.
ರಘು ದೀಕ್ಷಿತ್ ಮ್ಯೂಸಿಕ್ ಯುಟ್ಯೂಬ್ ಚಾನೆಲ್ನಲ್ಲಿ ಈ ಹಾಡು ರಿಲೀಸ್ ಆಗ್ತಿದೆ. ಈಗಾಗಲೇ ವಿಡಿಯೋ ಹಾಡುಗಳಿಂದ ದೊಡ್ಡ ನಿರೀಕ್ಷೆಯನ್ನ ಹುಟ್ಟಿಸಿರುವ ನಿನ್ನ ಸನಿಹಕೆ ಟೀಮ್ ಇದೀಗ ಇದೊಂದು ಪೋಸ್ಟರ್ ಬಿಟ್ಟು, ಇದು ಮಾಮೂಲಿ ಸಿನಿಮಾ ಅಲ್ಲ. ಇದರಲಲ್ಲಿ ಏನೋ ವಿಶೇಷತೆ ಇದೆ ಎಂದು ತೋರಿಸಲು ಹೊರಟಿದೆ.
ಸೂರಜ್ ಗೌಡ ನಟಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಧನ್ಯ ರಾಮ್ ಕುಮಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವೈಟ್ ಆ್ಯಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿದ್ದಾರೆ.
ಸದ್ಯ ಸೆನ್ಸಾರ್ ಅಂಗಳದಲ್ಲಿರೋ ನಿನ್ನ ಸನಿಹಕೆ ಸಿನಿಮಾ, ಟ್ರೈಲರ್ ರಿಲೀಸ್ ಮಾಡಿ ರಿಲೀಸ್ ಡೇಟ್ ಅನೌನ್ಸ್ ಮಾಡೋ ತಯಾರಿಯಲ್ಲಿದೆ.