ETV Bharat / sitara

ನಿಖಿಲ್‌ ಎಲ್ಲಿದೀಯಪ್ಪಾ.. ಅನ್ನೋದೇ ವರವಾಯ್ತು, ಅದೇ ಹೆಸರಿನಲ್ಲಿ ಚಿತ್ರ ಮಾಡ್ತೇನೆ- ನಿಖಿಲ್‌ - etv bhart.

ನಿಖಿಲ್​ ಎಲ್ಲಿದೀಯಪ್ಪಾ ಸಿನಿಮಾವನ್ನು ತಾವೇ ಮಾಡುವುದಾಗಿ ಹೇಳಿರುವ ನಟ ಕಮ್ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ​, ಇದರ ನಿರ್ಮಾಣದ ಜವಾಬ್ದಾರಿಯನ್ನು ಪುಟ್ಟರಾಜು ವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ನಿಖಿಲ್​ ಎಲ್ಲಿದ್ಯಪ್ಪಾ
author img

By

Published : May 11, 2019, 10:54 AM IST

ಮಂಡ್ಯ: ನಿಖಿಲ್​ ಎಲ್ಲಿದೀಯಪ್ಪಾ... ಇದು ಭಾರತ ಸೇರಿ ಪ್ರಪಂಚದ ನಾನಾ ಕಡೆ ಅತಿ ಹೆಚ್ಚು ಟ್ರೋಲ್‌​ ಆಗಿದೆ. ನಿಖಿಲ್‌ಕುಮಾರಸ್ವಾಮಿ ಮೊದಲ ಚಿತ್ರ ಜಾಗ್ವಾರ್​ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸಿಎಂ ಕುಮಾಸ್ವಾಮಿ ಹೇಳಿದ ಮಾತು ನಿಖಿಲ್ ಎಲ್ಲಿದೀಯಪ್ಪಾ. ಆದರೆ, ಲೋಕಸಭಾ ಚುನಾವಣೆಯಲ್ಲಿ ಅದು ಟ್ರೋಲಿಗರಿಂದಾಗಿ ಸಿಕ್ಕಾಪಟ್ಟೆ ಫೇಮಸ್​ ಆಗಿತ್ತು.

ಇದೀಗ ಇದೇ ಟೈಟಲ್​ನಲ್ಲಿ ಸಿನಿಮಾ ಮಾಡಲು ನಿಖಿಲ್​ ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ಹೆಸರನ್ನು ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಲು ಕೆಲವರು ಉತ್ಸುಕತೆ ತೋರಿದ್ದರು. ಆದರೆ, ಈ ಬಗ್ಗೆ ಚುನಾವಣೆ ಫಲಿತಾಂಶದ ಬಳಿಕ ತೀರ್ಮಾನ ಮಾಡಲಾಗುತ್ತೆ ಎಂದು ನಿಖಿಲ್​ ಹೇಳಿದ್ದಾರೆ.

ನಿಖಿಲ್​ ಎಲ್ಲಿದೀಯಪ್ಪಾ ಸಿನಿಮಾವನ್ನು ತಾವೇ ಮಾಡುವುದಾಗಿ ಹೇಳಿರುವ ನಿಖಿಲ್​, ಇದರ ನಿರ್ಮಾಣದ ಜವಾಬ್ದಾರಿಯನ್ನು ಪುಟ್ಟರಾಜು ವಹಿಸಲಿದ್ದಾರೆ ಎಂದು ಹೇಳಿದ್ದಾರೆ. ನಿಖಿಲ್‌ ಎಲ್ಲಿದೀಯಪ್ಪಾ ಅಂತಾ ದೇಶದಲ್ಲೆಡೆ ಈ ಟ್ರೋಲ್​ ಸಖತ್​ ಕ್ಲಿಕ್​ ಆಗಿದೆ. ಇದು ನನ್ನ ಹೆಸರಿನಲ್ಲಿಯೇ ಇರುವುದರಿಂದ ಇದನ್ನು ನಾನೇ ಸಿನಿಮಾ ಮಾಡ್ತೇನೆ ಎಂದಿದ್ದಾರೆ ನಿಖಿಲ್‌.​ ನಿನ್ನೆ ಮಂಡ್ಯದಲ್ಲಿ ಮಾತನಾಡಿದ ನಿಖಿಲ್​ ಕುಮಾರಸ್ವಾಮಿ, ಈ ನಿಖಿಲ್​ ಎಲ್ಲಿದೀಯಪ್ಪಾ ಎನ್ನುವುದು ನನಗೆ ವರವಾಗಿದೆ ಎಂದು ಖುಷಿಯಿಂದಲೇ ಹೇಳಿಕೊಂಡಿದ್ದಾರೆ.

ನಿಖಿಲ್ ಎಲ್ಲಿದಿಯಪ್ಪ ನಾನೇ ಸಿನಿಮಾ ಮಾಡ್ತಾನೆ ನಿಖಿಲ್ ಕುಮಾರಸ್ವಾಮಿ

ಸಾಮಾಜಿಕ ಜಾಲತಾನದಲ್ಲಿ ದೊಡ್ಡ ಮಟ್ಟದಲಿ ಟ್ರೋಲ್ ಆಗಿರುವ ನಿಖಿಲ್ ಎಲ್ಲಿದಿಯಪ್ಪ ಈಗ ಸ್ವತಃ ನಿಖಿಲ್ ಕುಮಾರಸ್ವಾಮಿ ಅವರಿಗೆ ಅದೇ ಹೆಸರಿನಲ್ಲಿ ಸಿನಿಮಾ ಮಾಡಲು ಉತ್ಸಾಹ ಬಂದಿದೆ. ಇದೆ ಹೆಸರಿನಲ್ಲಿ ವಾಣಿಜ್ಯ ಮಂಡಳಿ ಅಲ್ಲಿ ಅನೇಕರು ಶೀರ್ಷಿಕೆ ನೋಂದಾಯಿಸಲು ಹೋಗಿದ್ದರು. ಚುನಾವಣೆ ಫಲಿತಾಂಶದ ತನಕ ಯಾವುದೇ ತೀರ್ಮಾನ ಇಲ್ಲ ಎಂದು ಹೇಳಲಾಯಿತು.

ನನ್ನ ವಿರೋಧಿಗಳು ಹಿಯ್ಯಾಳಿಸಲು ಬಳಸಿದ್ದ ಅಸ್ತ್ರ ನಿಖಿಲ್ ಎಲ್ಲಿದಿಯಪ್ಪ (ಅಸಲಿಯಾಗಿ ಈ ಮಾತು ಜಾಗುವಾರ್ ಧ್ವನಿ ಸಾಂದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಹೇಳಿದ ಮಾತು, ನಿಖಿಲ್ ಜನರ ಮಧ್ಯೆ ಇಂದ ಇದ್ದು ಆಮೇಲೆ ವೇದಿಕೆ ಏರಿದರು) ಈಗ ಹೊರ ದೇಶಗಳಲ್ಲೂ ಸಹ ಇದು ಸಕ್ಕತ್ ಕ್ಲಿಕ್ ಆಗಿದೆ. ನನ್ನ ಹೆಸರಿನಲ್ಲಿ ಇರೋದು ಯಾರಿಗೂ ಕೊಡಬೇಡಿ ನಾನೇ ಸಿನಿಮಾ ಮಾಡುತ್ತೇನೆ ಹಾಗೂ ಪುಟ್ಟರಾಜು ಅವರೇ ನಿರ್ಮಾಣ ಮಾಡುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಖುಷಿಯಿಂದಲೇ ಹೇಳಿಕೊಂಡಿದ್ದಾರೆ. ನಿಖಿಲ್ ಎಲ್ಲಿದಿಯಪ್ಪ ಈಗ ನನಗೆ ವರವೇ ಆಯಿತು ಎನ್ನುತ್ತಾರೆ ನಿಖಿಲ್.

ನಿನ್ನೆ ಮಂಡ್ಯದಲ್ಲಿ ಮಾತನಾಡುತ್ತಾ ನಿಖಿಲ್ ಕುಮಾರಸ್ವಾಮಿ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.