ನಿಖಿಲ್ ಕುಮಾರಸ್ವಾಮಿ ಸದ್ಯ ಕನ್ನಡ ಚಿತ್ರರಂಗದಲ್ಲಿ 'ಯುವರಾಜ' ಅಂತಾ ಕರೆಯಿಸಿಕೊಂಡಿರುವ ನಟ. ಇಂದು ನೂರಾರು ಅಭಿಮಾನಿಗಳ ಜೊತೆ 30ನೇ ವರ್ಷದ ಹುಟ್ಟು ಹಬ್ಬವನ್ನ ಆಚರಿಸಿಕೊಂಡ ನಿಖಿಲ್ ಕುಮಾರಸ್ವಾಮಿ, 'ಪ್ರೊಡಕ್ಷನ್ ನಂ1' ಚಿತ್ರದ ಕೆಲಸಕ್ಕೆ ಕೈ ಹಾಕಿದ್ದಾರೆ.
ಈ ಚಿತ್ರ ಲಹರಿ ಸಂಸ್ಥೆ ಸಹಯೋಗದಲ್ಲಿ ನಿರ್ಮಾಣವಾಗುತ್ತಿದ್ದು, ತೆಲುಗಿನ ವಿಜಯ್ ಕುಮಾರ್ ಕೊಂಡ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ನಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪೋರ್ಟ್ಸ್ ಮೆನ್ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು, ಹುಟ್ಟುಹಬ್ಬದ ದಿನದಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ 'ಪ್ರೊಡಕ್ಷನ್ ನಂ1' ಚಿತ್ರದ ಹಾಡುಗಳ ರೆಕಾರ್ಡಿಂಗ್ಗೆ ಚಾಲನೆ ನೀಡಿದ್ರು. ಬೆಂಗಳೂರಿನ ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ಈ ಚಿತ್ರದ ಹಾಡುಗಳ ರೆಕಾರ್ಡಿಂಗ್ ಕೆಲಸವನ್ನ ಶುರು ಮಾಡಲಾಯಿತು. ಈ ಮೂಲಕ ಹುಟ್ಟಿದ ದಿನದಂದು ನಿಖಿಲ್ ಕುಮಾರಸ್ವಾಮಿ ತಮ್ಮ ಹೊಸ ಚಿತ್ರದ ಕೆಲಸವನ್ನ ಶುರು ಮಾಡಿದ್ದಾರೆ.