ETV Bharat / sitara

ಕಾಲೇಜು ಪೋರನಾಗಿ​ ಬಂದ 'ಯುವರಾಜ'

ದೀಪಾವಳಿ ವಿಶೇಷವಾಗಿ ರೈಡರ್​​ ಚಿತ್ರದಲ್ಲಿ ನಿಖಿಲ್​ ಅವರ ಮತ್ತೊಂದು ಲುಕ್​ ಅನ್ನು ಚಿತ್ರತಂಡ ಅನಾವರಣ ಮಾಡಿದೆ. ಕಾಲೇಜ್​ ಬಾಯ್​ ಆಗಿ ನಗುಮುಖದಲ್ಲಿ ನಡೆದು ಬರುತ್ತಿರುವ ಲುಕ್​​ ನೋಡಲು ಸಖತ್ತಾಗಿದೆ.

author img

By

Published : Nov 14, 2020, 4:35 PM IST

Nikhil Kumaraswamy Rider Cinema
ಕಾಲೇಜು ಪೋರನಾಗಿ​ ಬಂದ 'ಯುವರಾಜ'

ಸೀತಾರಾಮ ಕಲ್ಯಾಣ ಸಿನಿಮಾದ ನಂತ್ರ ಕೊಂಚ ರಾಜಕೀಯದ ಕಡೆ ಮುಖ ಮಾಡಿದ್ದ ನಿಖಿಲ್​ ಕುಮಾರಸ್ವಾಮಿ ಇದೀಗ ಮತ್ತೆ ಸಿನಿಮಾ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ರೈಡರ್​ ಎಂಬ ಹೊಸ ಸಿನಿಮಾ ಮಾಡುತ್ತಿದ್ದು, ಈ ಚಿತ್ರದ ಫಸ್ಟ್​​ ಮೋಷನ್​ ಪೋಸ್ಟರ್​​ ಅನ್ನು ಚಿತ್ರತಂಡ ರಿಲೀಸ್​ ಮಾಡಿತ್ತು. ರೈಡರ್​ ಫಸ್ಟ್​​ ಲುಕ್​ನಲ್ಲಿ ರಗಡ್​​ ಲುಕ್​ನಲ್ಲಿ ಮಿಂಚಿದ್ದ ನಿಖಿಲ್​​ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದ್ದರು.

ಇದೀಗ ದೀಪಾವಳಿ ವಿಶೇಷವಾಗಿ ರೈಡರ್​​ ಚಿತ್ರದಲ್ಲಿ ನಿಖಿಲ್​ ಅವರ ಮತ್ತೊಂದು ಲುಕ್​ ಅನ್ನು ಚಿತ್ರತಂಡ ಅನಾವರಣ ಮಾಡಿದೆ. ಕಾಲೇಜ್​ ಬಾಯ್​ ಆಗಿ ನಗುಮುಖದಲ್ಲಿ ನಡೆದು ಬರುತ್ತಿರುವ ಲುಕ್​​ ನೋಡಲು ಸಖತ್ತಾಗಿದೆ.

ಇನ್ನು ನಿಖಿಲ್​ ಕುಮಾರಸ್ವಾಮಿ ನಟಿಸುತ್ತಿರುವ ರೈಡರ್​ ಸಿನಿಮಾಕ್ಕೆ ವಿಜಯ್​ ಕುಮಾರ್​ ಕೊಂಡ ಆಕ್ಷನ್​​ ಕಟ್​ ಕೇಳುತ್ತಿದ್ದಾರೆ. ಈ ಚಿತ್ರವು ನಿಜ ಜೀವನದ ಕಥೆಯನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಸಿನಿಮಾ ಎಂದು ಹೇಳಲಾಗುತ್ತಿದೆ. ಸಿನಿಮಾಕ್ಕೆ ಅರ್ಜುನ್​ ಜನ್ಯ ಸಂಗೀತವಿದ್ದು, ಚಿಕ್ಕಣ್ಣ, ದತ್ತಣ್ಣ, ಶಿವರಾಜ್​ ಕೆ.ಆರ್​ ಪೇಟೆ ಸೇರಿದಂತೆ ಹಲವರ ತಾರಾಗಣವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.