ETV Bharat / sitara

ಯುವರಾಜನ 'ರೈಡರ್' ಸಿನಿಮಾಗೆ ಸಿಕ್ತು ಅವಧೂತ ವಿನಯ್ ಗೂರೂಜಿ ಆಶೀರ್ವಾದ - ಕನ್ನಡ ಸಿನಿಮಾ ಸುದ್ದಿ

ಇಂದು ಅವಧೂತ ವಿನಯ್​ ಗುರೂಜಿ ಅವರನ್ನು ನಿಖಿಲ್​ ಕುಮಾರಸ್ವಾಮಿ ಭೇಟಿಯಾಗಿ ರೈಡರ್​ ಚಿತ್ರದ ಯಶಸ್ಸಿಗಾಗಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಶರವಣ ಕೂಡ ನಿಖಿಲ್ ಕುಮಾರಸ್ವಾಮಿಗೆ ಸಾಥ್ ನೀಡಿದರು. ಇತ್ತೀಚೆಗೆ ರೈಡರ್​​ ಚಿತ್ರತಂಡ 'ಡವ್ವ ಡವ್ವ' ಎಂಬ ರೊಮ್ಯಾಂಟಿಕ್ ಹಾಡನ್ನ ಬಿಡುಗಡೆ ಮಾಡಿತ್ತು.

nikhil-kumaraswamy-met-vinay-guruji
ನಿಖಿಲ್​ ಕುಮಾರಸ್ವಾಮಿ
author img

By

Published : Oct 19, 2021, 7:30 PM IST

ಕನ್ನಡ ಚಿತ್ರರಂಗದಲ್ಲಿ ಜಾಗ್ವಾರ್ ಹಾಗು ಸೀತಾರಾಮ ಕಲ್ಯಾಣ ಸಿನಿಮಾಗಳ ಬಳಿಕ ಯುವರಾಜ ನಿಖಿಲ್ ಕುಮಾರಸ್ವಾಮಿ ಅಭಿನಯಿಸುತ್ತಿರೋ ಚಿತ್ರ 'ರೈಡರ್'. ಚಿತ್ರದ ಶೀರ್ಷಿಕೆ ಹಾಗು ಅದ್ದೂರಿ ಮೇಕಿಂಗ್ ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ 'ರೈಡರ್' ಟಾಕ್​ ಕ್ರಿಯೇಟ್​ ಮಾಡಿದೆ. ಇಂದು ಅವಧೂತ ವಿನಯ್​ ಗುರೂಜಿ ಅವರನ್ನು ಭೇಟಿಯಾದ ನಿಖಿಲ್​ ಕುಮಾರಸ್ವಾಮಿ ಚಿತ್ರದ ಯಶಸ್ಸಿಗೆ ಆಶೀರ್ವಾದ ಪಡೆದರು.

nikhil kumaraswamy met vinay guruji
ಯುವರಾಜನ 'ರೈಡರ್' ಸಿನಿಮಾಗೆ ಸಿಕ್ತು ಅವಧೂತ ವಿನಯ್ ಗೂರೂಜಿ ಆಶೀರ್ವಾದ

ಈ ಸಂದರ್ಭದಲ್ಲಿ ಜೆಡಿಎಸ್ ಎಂಎಲ್​ಸಿ ಶರವಣ ಕೂಡ ನಿಖಿಲ್ ಕುಮಾರಸ್ವಾಮಿಗೆ ಸಾಥ್ ನೀಡಿದರು. ಇತ್ತೀಚೆಗೆ ರೈಡರ್​​ ಚಿತ್ರತಂಡ 'ಡವ್ವ ಡವ್ವ' ಎಂಬ ರೊಮ್ಯಾಂಟಿಕ್ ಹಾಡನ್ನ ಬಿಡುಗಡೆ ಮಾಡಿತ್ತು. ಈ ಹಾಡನ್ನ ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ಗಟ್ಟಲೆ ಜನ ವೀಕ್ಷಿಸಿದ್ದಾರೆ.

nikhil kumaraswamy met vinay guruji
ಅವಧೂತ ವಿನಯ್ ಗೂರೂಜಿ ಆಶೀರ್ವಾದ ಪಡೆದ ನಿಖಿಲ್​ ಕುಮಾರಸ್ವಾಮಿ

ಕ್ರೀಡಾ ಆಧಾರಿತ ರೈಡರ್​ ಚಿತ್ರವನ್ನು ವಿಜಯ್​​ ಕುಮಾರ್ ಕೊಂಡ ನಿರ್ದೇಶನ ಮಾಡಿದ್ದಾರೆ. ನಿಖಿಲ್​ ಕುಮಾರಸ್ವಾಮಿ ಜೊತೆ ಕಶ್ಮೀರ ಪರದೇಶಿ ಎಂಬ ಯುವ ನಟಿ ಮೊದಲ ಬಾರಿಗೆ ಕನ್ನಡ ಚಿತ್ರಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಎರಡನೇ ನಾಯಕಿಯಾಗಿ ಸಂಪದ ಕಾಣಿಸಿಕೊಂಡಿದ್ದಾರೆ.

nikhil kumaraswamy met vinay guruji
ವಿನಯ್​ ಗೂರೂಜಿ ಆಶೀರ್ವಾದ ಪಡೆದ ನಿಖಿಲ್​ ಕುಮಾರಸ್ವಾಮಿ, ಎಂಎಲ್​ಸಿ ಶರವಣ

ದತ್ತಣ್ಣ, ಅಚ್ಯುತ ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್ ಪೇಟೆ, ರಾಜೇಶ್ ನಟರಂಗ, ಶೋಭರಾಜ್, ನಿಹಾರಿಕ ಮತ್ತು ಅನುಶಾ ಸೇರಿದಂತೆ ಸಾಕಷ್ಟು ತಾರಗಣ ಈ ಚಿತ್ರದಲ್ಲಿದೆ.

ಅರ್ಜುನ್ ಜನ್ಯ ಸಂಗೀತ, ಶ್ರೀಶ ಕುಡುವಳ್ಳಿ ಛಾಯಾಗ್ರಹಣ ಇರುವ ಚಿತ್ರವನ್ನು, ಚಂದ್ರ ಮನೋಹರನ್ ಹಾಗು ಸುನೀಲ್ ಗೌಡ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

nikhil kumaraswamy met vinay guruji
'ರೈಡರ್'​​ ನಿಖಿಲ್​ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.