ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಆಸ್ಟ್ರೇಲಿಯಾ ಮೂಲದ ಬ್ಯುಸಿನೆಸ್ ಮ್ಯಾನ್ ಗೌತಮ್ ಜೊತೆ ಸಪ್ತಪದಿ ತುಳಿದಿದ್ದಾರೆ. ರಚಿತಾ ರಾಮ್ ಅಕ್ಕನ ಮದುವೆಗೆ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸಿ ಶುಭ ಹಾರೈಯಿಸಿದ್ದಾರೆ.
![Nikhil is involved in Nithya Ram's wedding](https://etvbharatimages.akamaized.net/etvbharat/prod-images/kn-bng-01-rachitha-ram-sister-marriagenale-nikhil-photos-7204735_07122019135646_0712f_1575707206_109.jpg)
![Nikhil is involved in Nithya Ram's wedding](https://etvbharatimages.akamaized.net/etvbharat/prod-images/kn-bng-01-rachitha-ram-sister-marriagenale-nikhil-photos-7204735_07122019135646_0712f_1575707206_305.jpg)
ಇದೀಗ ನಿತ್ಯಾ ರಾಮ್ ಮದುವೆಗೆ ನಿಖಿಲ್ ಕುಮಾರಸ್ವಾಮಿ ಕೂಡ ಭಾಗವಹಿಸಿದ್ರು. ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ಜೊತೆ ರಚಿತಾ ರಾಮ್ ಒಟ್ಟಿಗೆ ಸ್ಕ್ರೀನ್ ಹಂಚಿಕೊಂಡಿದ್ರು.
ಇವರಿಬ್ಬರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಆದ್ರೆ ಗಾಂಧಿನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ರಚಿತಾ ರಾಮ್ ಡೇಟಿಂಗ್ ಮಾಡುತ್ತಿದ್ದಾರೆ ಅಂತಾ ಬಿಸಿ ಬಿಸಿ ಚರ್ಚೆ ಕೂಡ ನಡೆದಿತ್ತು. ಈ ಮಾತಿಗೆ ಪೂರಕವಾಗಿ ರಚಿತಾ ರಾಮ್ ನಾನು ಮದುವೆ ಆದ್ರೆ ಗೌಡರ ಕುಟುಂಬದಲ್ಲಿ ಮದುವೆ ಆಗ್ತೀನಿ ಅಂತಾ ಹೇಳಿದ್ರು. ಈಗ ರಚಿತಾ ರಾಮ್ ಅಕ್ಕನ ಮದುವೆಗೆ ನಿಖಿಲ್ ಕುಮಾರಸ್ವಾಮಿ ಬಂದಿರೋದು ಈ ಮಾತಿಗೆ ರೆಕ್ಕೆ ಪುಕ್ಕ ಬಂದಂತಾಗಿದೆ.