ETV Bharat / sitara

ಗ್ಲಾಮರ್​ ಬಿಟ್ಟು ಹಾರರ್​ ಹಾದಿ ಹಿಡಿದ ನಿಧಿ ಸುಬ್ಬಯ್ಯ.. ನೈಜ ಘಟನೆ ಆಧಾರಿತ ಚಿತ್ರಕ್ಕೆ ನಿರ್ದೇಶಕರು ಯಾರು? - ಲೋಹಿತ್​ ನಿರ್ಮಾಣದ ಚಿತ್ರದಲ್ಲಿ ನಿಧಿ ಸುಬ್ಬಯ್ಯ

ನಟಿ ನಿಧಿ ಸುಬ್ಬಯ್ಯ ಮತ್ತೆ ಸ್ಯಾಂಡಲ್​​ವುಡ್​​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಲೋಹಿತ್​ ನಿರ್ಮಿಸುತ್ತಿರುವ ಈ ಹೊಸ ಚಿತ್ರವು ಹಾರರ್​​​ ಅಂಶವನ್ನು ಹೊಂದಿದ್ದು, ನಿಜ ಘಟನೆಯನ್ನು ಆಧರಿಸಿದೆ ಎನ್ನಲಾಗಿದೆ.

nidhi subbaiah in horror movie
ಹಾರರ್​ ಚಿತ್ರದ ಮೂಲಕ ಹೆದರಿಸಲು ಬರ್ತಿದ್ದಾರೆ ನಿಧಿ ಸುಬ್ಬಯ್ಯ
author img

By

Published : Dec 5, 2020, 4:52 PM IST

ಶಿವರಾಜ್​ಕುಮಾರ್​ ಅಭಿನಯದ ‘ಆಯುಷ್ಮಾನ್ ಭವ’ ಚಿತ್ರದ ಮೂಲಕ ನಿಧಿ ಸುಬ್ಬಯ್ಯ ರೀಎಂಟ್ರಿ ಕೊಟ್ಟರೂ, ಅದಾಗಿ ಇನ್ನೊಂದು ಚಿತ್ರವನ್ನು ಒಪ್ಪಿಕೊಳ್ಳುವುದಕ್ಕೆ ಒಂದೂವರೆ ವರ್ಷವೇ ಬೇಕಾಗಿದೆ. ಸೂಕ್ತ ಸ್ಕ್ರಿಪ್ಟ್​ನ ಹುಡುಕಾಟದಲ್ಲಿದ್ದ ನಿಧಿಗೆ, ಈಗೊಂದು ಕಥೆ ಒಪ್ಪಿಗೆಯಾಗಿದ್ದು, ಅದರಲ್ಲಿ ನಟಿಸುವುದಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ.

ಅಂದಹಾಗೆ, ಇದೊಂದು ಹಾರರ್​​ ಚಿತ್ರವಾಗಿದ್ದು, ಹಾರರ್​ ಮತ್ತು ಥ್ರಿಲ್ಲರ್​ ಚಿತ್ರಗಳನ್ನು ನಿರ್ದೇಶಿಸುವುದಕ್ಕೆ ಜನಪ್ರಿಯರಾಗಿರುವ 'ಮಮ್ಮಿ' ಖ್ಯಾತಿಯ ಲೋಹಿತ್​ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹಾಗಂತ ಈ ಚಿತ್ರಕ್ಕೆ ಅವರೇ ನಿರ್ದೇಶಕರಲ್ಲ. ಅವರ ಫ್ರೈಡೇ ಫಿಲಂಸ್​ ಜೊತೆಗೆ ಸಿಲ್ವರ್ ಟ್ರೇನ್ ಇಂಟರ್‌ನ್ಯಾಶನಲ್ ಮತ್ತು ಸಿ.ಕೆ. ಸಿನಿ ಕ್ರಿಯೇಷನ್ಸ್‌ ಸಂಸ್ಥೆಗಳು ಸಹ ನಿರ್ಮಾಣದಲ್ಲಿ ಕೈಜೋಡಿಸಿವೆ. ಇದೊಂದು ನಾಯಕಿ ಪ್ರಧಾನ ಚಿತ್ರವಾಗಿದ್ದು, ಈ ಚಿತ್ರವನ್ನು ಪವನ್​ ಮತ್ತು ಪ್ರಸಾದ್​ ಜೊತೆಯಾಗಿ ನಿರ್ದೇಶಿಸುತ್ತಿದ್ದಾರೆ.

ತೆಲುಗಿಗೆ ಹೊರಟರು 'ಆ ದಿನಗಳು' ಚೇತನ್: ಮೊದಲ ಬಾರಿ ಪೊಲೀಸ್​ ಪಾತ್ರದಲ್ಲಿ ನಟನೆ

ಈ ಚಿತ್ರದಲ್ಲಿ ನಿಧಿ ಸುಬ್ಬಯ್ಯ, ಪಿಹೆಚ್​ಡಿ ವಿದ್ಯಾರ್ಥಿನಿಯಾಗಿ ನಟಿಸುತ್ತಿದ್ದಾರೆ. ಮೆಕ್ಸಿಕೋದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ, ಅದಕ್ಕೆ ಒಂದಿಷ್ಟು ಕಾಲ್ಪನಿಕ ಅಂಶಗಳನ್ನು ಸೇರಿಸಿ ಚಿತ್ರ ಮಾಡಲಾಗುತ್ತಿದೆ. ಬೆಂಗಳೂರು ಮತ್ತು ಕೊಡಗಿನಲ್ಲಿ ಚಿತ್ರೀಕರಣ ನಡೆಯಲಿದ್ದು, ಜನವರಿ 14ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಇನ್ನು ನಿಧಿ ಜೊತೆಗೆ ಯಾರೆಲ್ಲಾ ಇರುತ್ತಾರೆ, ತೆರೆಯ ಹಿಂದೆ ಯಾರೆಲ್ಲಾ ಕೆಲಸ ಮಾಡುತ್ತಾರೆ ಎಂಬ ವಿಷಯಗಳನ್ನು ಇನ್ನಷ್ಟೇ ಪಕ್ಕಾ ಆಗಬೇಕಿದೆ.

  • "Next scream you hear could be your own" yes!!! Nidhi Subaiya is coming back to haunt you and its official. she is doing our next.We Friday Films, Silver Train International & CK Cine Creations are excited to be associated with hugely talented and highly popular Nidhi subbaiah pic.twitter.com/AkxgUe1uhf

    — Lohith H (@LOHITH_director) December 5, 2020 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.