ಕನ್ನಡ ಭಾಷೆ, ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಈಗಾಗಲೇ ಸಾಕಷ್ಟು ಹಾಡುಗಳು ಹುಟ್ಟಿಕೊಂಡಿವೆ. ಇಷ್ಟೆ ಅಲ್ಲದೆ ಇದರ ಜೊತೆಗೆ ಕನ್ನಡ ಭಾಷೆಯ ಕುರಿತಾದ ಹಾಡುಗಳು ಬರುತ್ತಲೇ ಇವೆ. ನವೆಂಬರ್ 1ರಂದು ನಡೆದ ಕನ್ನಡ ರಾಜ್ಯೋತ್ಸವದ ಶುಭ ದಿನದಂದು ವಿನೂತನ ಶೈಲಿಯ ಹಾಡೊಂದು ಬಿಡುಗಡೆಯಾಗಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿಯಲ್ಲಿ ಸಾವಿತ್ರಮ್ಮ ಪಾತ್ರ ಮಾಡುತ್ತಿರುವ ಕನ್ನಡದ ಜನಪ್ರಿಯ ಹಿನ್ನೆಲೆ ಗಾಯಕ ಎಲ್.ಎನ್.ಶಾಸ್ತ್ರಿ ಅವರ ಪತ್ನಿ ಸುಮಾ ಶಾಸ್ತ್ರಿ ಕನ್ನಡ ಕುರಿತಾದ 'ಎಂತದು ಮಾರಾಯ್ರೆ' ಎಂಬ ಹಾಡನ್ನು ಸಂಯೋಜನೆ ಮಾಡಿದ್ದಾರೆ. ಈ ಹಾಡಿಗೆ ಎಲ್.ವಿ.ಲಕ್ಷ್ಮಿಕಾಂತ್ ಸಾಹಿತ್ಯ ಬರೆದಿದ್ದು, ಮಜಾ ಟಾಕೀಸ್ ಖ್ಯಾತಿಯ ರೆಮೋ ಕಂಠದಾನ ಮಾಡಿದ್ದಾರೆ. ಕನ್ನಡದ ಬಗ್ಗೆ, ಕನ್ನಡ ನಾಡ, ಸಂಸ್ಕೃತಿಯ ಬಗ್ಗೆ ಮೂಡಿಬಂದಿರುವ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿ ಮಾಡುತ್ತಿದೆ.
ಝೇಂಕಾರ್ ಮ್ಯೂಸಿಕ್ ಯೂ ಟ್ಯೂಬ್ ಚಾನೆಲ್ನಿಂದ ಈ ಹಾಡನ್ನು ಬಿಡುಗಡೆ ಮಾಡಲಾಗಿದೆ. ಎಂತದು ಮರಾಯ್ರೆ ಎಂದು ಆರಂಭವಾಗುವ ಈ ಹಾಡು ಕೇಳಲು ಸೊಗಸಾಗಿದ್ದು, ಕನ್ನಡ ರಾಜ್ಯೋತ್ಸವದ ಶುಭ ದಿನದಂದೇ ಬಿಡುಗಡೆಯಾಗಿದ್ದು ಮತ್ತೊಂದು ವಿಶೇಷವಾಗಿದೆ.
- " class="align-text-top noRightClick twitterSection" data="">