ಕಣ್ಸನ್ನೆಯಿಂದ ಕೋಟ್ಯಂತರ ಜನರನ್ನು ತನ್ನತ್ತ ಸೆಳೆದ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಅದೇ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಎರಡು ದಿನಗಳ ಹಿಂದೆ ಪ್ರಿಯಾ ಕೆಲವು ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಅಕೌಂಟ್ನಲ್ಲಿ ಹಂಚಿಕೊಂಡಿದ್ದರು. ಡೀಪ್ ನೆಕ್ ಕುಸುರಿ ಮಾಡಿದ ಬ್ಲೌಸ್ ಹಾಗೂ ಆಭರಣ ತೊಟ್ಟ ಫೋಟೋ ಅದಾಗಿತ್ತು.
ಪ್ರಿಯಾ ಪ್ರಕಾಶ್ ವಾರಿಯರ್ ‘ಓರು ಅಡಾರ್ ಲವ್’ ಸಿನಿಮಾ ಮೂಲಕ ಮನೆಮಾತಾಗಿದ್ದರು. ಈಗ ಅವರು ‘ಪಡ್ಡೆ ಹುಲಿ’ ಶ್ರೇಯಸ್ ಮಂಜು ಅವರ ದ್ವಿತೀಯ ಚಿತ್ರ ‘ವಿಷ್ಣು ಪ್ರಿಯ’ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ.
ಈ ಹಿಂದೆ ಪ್ರಿಯಾ ಅವರು ಶೇರ್ ಮಾಡಿದ್ದ ಕೆಲವು ಫೋಟೋಗಳು ಬಹಳ ಗ್ಲಾಮರಸ್ ಆಗಿ ಮೈತುಂಬಾ ಬಟ್ಟೆ ತೊಟ್ಟಿದ್ದರು. ಆದರೆ ಈ ಫೋಟೋ ಮಾತ್ರ ಟೀಕೆಗಳಿಗೆ ಗುರಿಯಾಗಿದೆ.