ETV Bharat / sitara

ಡ್ರಗ್ಸ್​​​ ಕೇಸ್​: ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್​ ಸೇರಿ ಅನೇಕರಿಗೆ ಸಮನ್ಸ್​ ಜಾರಿ

ನಟ ಸುಶಾಂತ್ ಸಿಂಗ್ ರಜಪೂತ್​ ಸಾವಿನ ಪ್ರಕರಣದಲ್ಲಿ ಡ್ರಗ್ಸ್​​ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಎನ್‌ಸಿಬಿ ಇದೀಗ ಮತ್ತಷ್ಟು ಜನರ ವಿಚಾರಣೆ ನಡೆಸಲು ಮುಂದಾಗಿದೆ.

NCB  issues summons to Deepika Padukone
NCB issues summons to Deepika Padukone
author img

By

Published : Sep 23, 2020, 6:31 PM IST

ಮುಂಬೈ: ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣ ಹಾಗೂ ಡ್ರಗ್ಸ್​​ ಕೇಸ್​ಗೆ ಸಂಬಂಧಿಸಿದಂತೆ ಇದೀಗ ಬಾಲಿವುಡ್ ನಟಿ ದೀಪಿಕಾ ಪಡುಕೊಣೆ, ಸಾರಾ ಅಲಿ ಖಾನ್​, ಶ್ರದ್ಧಾ ಕಪೂರ್​ ಮತ್ತು ರಕುಲ್​ ಪ್ರೀತಿ ಸಿಂಗ್​ಗೆ ನೋಟಿಸ್​ ಜಾರಿಯಾಗಿದೆ.

ಈಗಾಗಲೇ ದೀಪಿಕಾ ಪಡುಕೊಣೆ ಮ್ಯಾನೇಜರ್​ ಕರಿಷ್ಮಾ ಪ್ರಕಾಶ್​ ಅವರನ್ನ ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ(ಎನ್​ಸಿಬಿ) ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಇದರ ಬೆನ್ನಲ್ಲೇ ಇದೀಗ ಸ್ಟಾರ್​ ನಟಿ ದೀಪಿಕಾ ಜೊತೆಗೆ ಶ್ರದ್ಧಾ ಕಪೂರ್​, ಸಾರಾ ಅಲಿಖಾನ್​, ಟಾಲಿವುಡ್ ನಟಿ ರಕುಲ್​ ಪ್ರೀತ್​ ಸಿಂಗ್​ಗೂ ಸಮನ್ಸ್​ ಜಾರಿಯಾಗಿದೆ.

ಸೆಪ್ಟೆಂಬರ್​ 25ರಂದು ದೀಪಿಕಾ ಹಾಗೂ ಸೆ.26ರಂದು ಉಳಿದ ನಟಿಯರು ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ನಟ ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣ ಹಾಗೂ ಡ್ರಗ್ಸ್​​ ಕೇಸ್​​ ವಿಚಾರವಾಗಿ ಈಗಾಗಲೇ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಎನ್​​ಸಿಬಿ ಕಸ್ಟಡಿಯಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.