ತಮಿಳಿನ ಖ್ಯಾತ ನಟಿ ನಜರಿಯಾ ನಜೀಮ್ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದೆ. ಈ ಬಗ್ಗೆ ಸ್ವತಃ ನಟಿಯೇ ಮಾಹಿತಿ ನೀಡಿದ್ದು, 'ನನ್ನ ಇನ್‌ಸ್ಟಾಗ್ರಾಂ ಖಾತೆಯನ್ನು ಕೆಲ ಜೋಕರ್‌ಗಳು ಹ್ಯಾಕ್ ಮಾಡಿದ್ದಾರೆ. ನನ್ನ ಖಾತೆಯಿಂದ ಯಾರಿಗಾದರೂ ಏನಾದರೂ ಸಂದೇಶಗಳು ಬಂದರೆ ಅದನ್ನು ನಿರ್ಲಕ್ಷಿಸಿ' ಎಂದು ನಾಜರಿಯಾ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ನಜರಿಯಾ ಇನ್ಸ್ಟಾ ಖಾತೆ ಕಳೆದ ಸೋಮವಾರ(18 ರಂದು) ಹ್ಯಾಕ್ ಆಗಿದೆ. ನಜರಿಯಾ ಖಾತೆಯಿಂದ ಯಾರೋ ವಿದೇಶಿಗರು ಲೈವ್ ಬಂದಿದ್ದು, ಆ ಸಮಯದಲ್ಲಿ ರಸ್ತೆಯಲ್ಲಿ ಓಡಾಡಿರುವ ದೃಶ್ಯಗಳು ವೈರಲ್ ಆಗಿವೆ.
ಇತ್ತೀಚೆಗೆ ಸೆಲೆಬ್ರಿಟಿಗಳ ಆಕೌಂಟ್ಗಳು ಹ್ಯಾಕ್ ಆಗುವ ಪ್ರಕರಣಗಳು ಹೆಚ್ಚಿದ್ದು, ನಟಿ ಟಬು ಇನ್‌ಸ್ಟಾಗ್ರಾಂ ಕೂಡ ಖಾತೆ ಹ್ಯಾಕ್ ಆಗಿತ್ತು. ಇದಕ್ಕೂ ಮುಂಚೆ ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಇನ್‌ಸ್ಟಾಗ್ರಾಂ ಖಾತೆ ಕೂಡ ಹ್ಯಾಕ್ ಆಗಿತ್ತು. ಇಷ್ಟೇ ಅಲ್ಲದೆ ಱಪ್ ಸಿಂಗರ್ ಚಂದನ್ ಶೆಟ್ಟಿ ಖಾತೆಯೂ ಹ್ಯಾಕ್ ಆಗಿತ್ತು.