ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ, ನಿರ್ದೇಶಕ ವಿಘ್ನೇಶ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಖಚಿತಪಡಿಸಿದ್ದಾರೆ. ಹಲವು ವರ್ಷಗಳಿಂದ ಇಬ್ಬರೂ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿದ್ದು, ಮೌನವಾಗಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾರೆ.
ಸ್ಟಾರ್ ವಿಜಯ್ ಅವರ ದೂರದರ್ಶನ ಟಾಕ್ ಶೋವೊಂದರ ತುಣುಕಿನಲ್ಲಿ ನಯನತಾರಾ ಅವರು ವಿಘ್ನೇಶ್ ಶಿವನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಖಚಿತಪಡಿಸಿದರು.
-
😍😍😍 Lady SuperStar நயன்தாரா - வரும் ஞாயிறு காலை 10:30 மணிக்கு நம்ம விஜய் டிவில.. #LadySuperstarNayanthara pic.twitter.com/TmY15QeVZ9
— Vijay Television (@vijaytelevision) August 10, 2021 " class="align-text-top noRightClick twitterSection" data="
">😍😍😍 Lady SuperStar நயன்தாரா - வரும் ஞாயிறு காலை 10:30 மணிக்கு நம்ம விஜய் டிவில.. #LadySuperstarNayanthara pic.twitter.com/TmY15QeVZ9
— Vijay Television (@vijaytelevision) August 10, 2021😍😍😍 Lady SuperStar நயன்தாரா - வரும் ஞாயிறு காலை 10:30 மணிக்கு நம்ம விஜய் டிவில.. #LadySuperstarNayanthara pic.twitter.com/TmY15QeVZ9
— Vijay Television (@vijaytelevision) August 10, 2021
ಕಾಲಿವುಡ್ ಬೆಡಗಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಪ್ರೀತಿ ಮಾಡುತ್ತಿರುವ ವಿಷಯ ಹಲವು ದಿನಗಳಿಂದ ಚರ್ಚೆಯಲ್ಲಿತ್ತು. ಇದಕ್ಕೆ ಇದೀಗ ಸ್ವತಃ ನಯನತಾರಾ ಸ್ಪಷ್ಟನೆ ನೀಡಿದ್ದು, ಇಬ್ಬರೂ ಎಂಗೇಜ್ ಆಗಿದ್ದಾರೆ ಎಂದು ದೃಢಪಡಿಸಿದ್ದಾರೆ. ಇಬ್ಬರೂ ಅದಾಗಲೇ ಉಂಗುರ ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ನಿಶ್ಚಿತಾರ್ಥದ ಬಗ್ಗೆ ನಟಿ ಇದೀಗ ಟಾಕ್ ಶೋವೊಂದರಲ್ಲಿ ಖಚಿತಪಡಿಸಿದ್ದಾರೆ.
ತಮಿಳಿನ ಖಾಸಗಿ ವಾಹಿನಿಯ ಶೋವೊಂದರಲ್ಲಿ ನಟಿ ನಯನತಾರಾ ತಮ್ಮ ನಿಶ್ಚಿತಾರ್ಥದ ವಿಚಾರವನ್ನು ಹೇಳಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋ ಸದ್ಯ ಬಿಡುಗಡೆಯಾಗಿದ್ದು, ಎಂಗೇಜ್‌ಮೆಂಟ್ ರಿಂಗ್ ಬಗ್ಗೆ ನಯನತಾರಾ ಮಾತಾಡಿರುವುದು ಇದರಲ್ಲಿದೆ. ''ಇದು ಎಂಗೇಜ್‌ಮೆಂಟ್ ರಿಂಗ್'' ಎಂದು ತಮ್ಮ ಎಡಗೈ ಬೆರಳಿಗೆ ತೊಟ್ಟಿರುವ ಚಿನ್ನದ ಉಂಗುರವನ್ನು ನಟಿ ನಯನತಾರಾ ಈ ಪ್ರೋಮೋದಲ್ಲಿ ತೋರಿಸಿದ್ದಾರೆ.
ಸದ್ಯ ನಯನತಾರಾ ಮತ್ತು ವಿಘ್ನೇಶ್ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರ ಹೊರಬಿದ್ದಿದ್ದು, ಇಬ್ಬರೂ ಯಾವಾಗ ಮದುವೆ ಆಗಲಿದ್ದಾರೆ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ದಕ್ಷಿಣ ಭಾರತದ ಎಲ್ಲಾ ನಟಿಯರನ್ನು ಹಿಂದಿಕ್ಕಿದ ರಶ್ಮಿಕಾ ಮಂದಣ್ಣ