ನಯನಾ ನಾಗರಾಜ್ ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರೋ ನಟಿ. ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ನಯನಾ ನಾಗರಾಜ್ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ, ನಯನಾ ನಾಗರಾಜ್ ತನ್ನ ಕಣ್ಮುಂದೆನೇ ಚಿಕ್ಕಮ್ಮನ ಸಾವು ನೋಡಿ ಶಾಕ್ ಆಗಿದ್ದಾರೆ.
ಕೊರೊನಾ ಪಾಸಿಟಿವ್ ಆಗಿ ಮನೆಯಲ್ಲೇ ಕ್ವಾರಂಟೈನ್ ಆಗಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ನಯನಾ ನಾಗರಾಜ್, ಕೊರೊನಾ ಭೀಕರತೆ ಬಗ್ಗೆ ಒಂದು ವಿಡಿಯೋ ಮಾಡಿ ಈ ಕೊರೊನಾ ಎಂಬ ಹೆಮ್ಮಾರಿಯ ಕರಾಳತೆ ಬಗ್ಗೆ ಬಿಚ್ಚಿಟ್ಟಿದ್ದಾರೆ.
ನಮ್ಮ ಚಿಕ್ಕಮ್ಮಗೆ ಕೊರೊನಾ ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಬೆಡ್ ಹಾಗೂ ಆಕ್ಸಿಜನ್ ಸಿಗದೆ ಕಣ್ಮುಂದೆಯೇ ಉಸಿರು ಬಿಟ್ಟಿದ್ದಾರೆ. ತಾವು ಎಷ್ಟೇ ಪ್ರಭಾವ ಬಳಸಿದರೂ ಒಂದು ಆಕ್ಸಿಜನ್ ಸಿಗದೆ ನಮ್ಮ ಚಿಕ್ಕಮ್ಮ ಸಾವನ್ನಪ್ಪಿದರು ಅಂತ ನಯನಾ ತಮ್ಮ ನೋವನ್ನ ತೋಡಿಕೊಂಡರು.
ಅಷ್ಟೇ ಅಲ್ಲ, ಕೊರೊನಾ ಬಗ್ಗೆ ಯಾರೂ ಉದಾಸೀನ ಮಾಡಬೇಡಿ ಅಂತ ಜನರಲ್ಲಿ ಮನವಿ ಮಾಡಿದ್ದಾರೆ. ಕೊರೊನಾ ಬಂದಾಗ ಆಕ್ಸಿಜನ್ ಮತ್ತು ಬೆಡ್ ಈ ಎರಡೂ ತುಂಬಾ ಮುಖ್ಯ ಅನ್ನೋದನ್ನ ನಟಿ ನಯನಾ ನಾಗರಾಜ್ ತಮ್ಮ ನೋವಿನ ಮಾತುಗಳ ಮೂಲಕ ಹೇಳಿಕೊಂಡಿದ್ದಾರೆ.