ಇನ್ನೂ ತೆರೆ ಕಾಣಬೇಕಿರುವ 'ಬಡ್ಡಿಮಗನ್ ಲೈಫ್' ಚಿತ್ರದ ಏನ್ ಚೆಂದಾನೋ ತಕೊ.. ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿತ್ತು. ಈ ಹಾಡಿನಲ್ಲಿ ಒಕ್ಕಲಿಗ ಸಮುದಾಯದ ಹೆಣ್ಣು ಮಕ್ಕಳಿಗೆ ಅವಮಾನ ಮಾಡಲಾಗಿದೆ ಎಂದು ಅರೋಪಿಸಿ ಒಕ್ಕಲಿಗ ಸಮುದಾಯದವರು ನಿರ್ಮಾಪಕ ಭಾಮಾ ಹರೀಶ್ ನೇತೃತ್ವದಲ್ಲಿ ವಾಣಿಜ್ಯ ಮಂಡಳಿಗೆ ದೂರು ನೀಡಿ ಸಮುದಾಯದ ಕ್ಷಮೆ ಕೇಳಬೇಕು. ಜೊತೆಗೆ ಹಾಡಿನ ಸಾಹಿತ್ಯ ಬದಲಿಸಬೇಕು. ಇಲ್ಲದಿದ್ರೆ ಚಿತ್ರತಂಡದ ವಿರುದ್ದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದರು. ಈ ಬಗ್ಗೆ ನವೀನ್ ಸಜ್ಜು ಇದೀಗ ಸ್ಪಷ್ಟನೆ ನೀಡಿದ್ದಾರೆ.
ನವೀನ್ ಸಜ್ಜು ಮಾತನಾಡಿ, ಆ ಹಾಡನ್ನು ಬರೆದವರು ಯಾರೋ, ಸಂಗೀತ ನೀಡಿದವರು ಯಾರೋ, ಆ ಹಾಡನ್ನು ನಾನು ಹಾಡಿದ್ದೆ ಅಷ್ಟೆ ಎಂದಿದ್ದಾರೆ. ಅಲ್ಲದೇ ಚಿತ್ರದ ನಿರ್ದೇಶಕರು ಹಾಡಿನ ಸನ್ನಿವೇಶವನ್ನು ನನಗೆ ಹೇಳಿದ್ರು. ಜೊತೆಗೆ ಚಿತ್ರದ ಸನ್ನಿವೇಶಕ್ಕೂ, ಸಾಹಿತ್ಯಕ್ಕೂ ಹೊಂದಾಣಿಕೆ ಇತ್ತು. ಅದರೆ ಕಾಂಟ್ರವರ್ಸಿ ಅಂತ ಯಾಕನ್ನಿಸಿತೋ ಗೊತ್ತಿಲ್ಲ ಎಂದರು.
ನಾನೊಬ್ಬ ಸೆನ್ಸಿಬಲ್ ಸಿಂಗರ್ ಆಗಿದ್ದು, ಯಾವುದನ್ನು ಹಾಡಬೇಕು ಹಾಡಬಾರದು ಎಂದು ಅರ್ಥವಾಗುತ್ತೆ. ಒಂದು ವೇಳೆ ಸರಿ ಬರಲ್ಲ ಅನ್ನಿಸಿದರೆ ಸೆನ್ಸಾರ್ನವರು ಅದಕ್ಕೆ ಕತ್ತರಿ ಹಾಕುತ್ತಾರೆ. ಅದರೆ, ಇತರೆ ಯಾರಿಗೂ ಮನಸ್ಸು ನೋಯಿಸುವುದು ಬೇಡ ಎಂದು ನಿರ್ಧರಿಸಿ ಚಿತ್ರದಲ್ಲಿ ಆ ಸಾಹಿತ್ಯ ಬದಲಾವಣೆ ಮಾಡಲಾಗಿದೆ ಎಂದು ನವೀನ್ ವಿವಾದಕ್ಕೆ ತೆರೆ ಎಳೆಯೋ ಪ್ರಯತ್ನ ಮಾಡಿದ್ರು.