66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಾಲಿನಲ್ಲಿ ಕನ್ನಡ ಚಿತ್ರರಂಗ ಈ ವರ್ಷ ಅತೀ ಹೆಚ್ಚು ರಾಷ್ಟ್ರೀಯ ಪ್ರಶಸ್ತಿಗಳನ್ನ ಪಡೆಯುವ ಮೂಲಕ ಹೊಸ ದಾಖಲೆ ಬರೆದಿತ್ತು. ಇಂದು 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನ ವಿತರಿಸಲಾಗಿದ್ದು, ಸ್ಯಾಂಡಲ್ವುಡ್ ನಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಸ್ಟಂಟ್ ಮಾಸ್ಟರ್ ವಿಜಯ್ ಮೋರೆ, ನಿರ್ಮಾಪಕ ಉಮಾಪತಿ ಸೇರಿದಂತೆ ಸಾಕಷ್ಟು ಸ್ಯಾಂಡಲ್ ವುಡ್ ತಾರೆಯರು ಸ್ವರ್ಣ ಕಮಲ ಪದಕ ಪಡೆದಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಚಿತ್ರಕ್ಕಾಗಿ ನಿರ್ದೇಶಕ ರಿಷಬ್ ಶೆಟ್ಟಿ ಸ್ವರ್ಣ ಕಮಲ ಪ್ರಶಸ್ತಿಯನ್ನ ಪಡೆದ ಖುಷಿಯಲ್ಲಿದ್ದಾರೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದಲ್ಲಿ ಅದ್ಭುತ ಸಾಹಸ ಸಂಯೋಜನೆಗೆ ಸ್ಟಂಟ್ ಮಾಸ್ಟರ್ ವಿಜಯ್ ಮೋರ್ ಪದಕ ಮುಡಿಗೇರಿಸಿಕೊಂಡರು.
ಇನ್ನು ಮಕ್ಕಳ ಸಿನಿಮಾ 'ಒಂದಲ್ಲಾ ಎರಡು' ಚಿತ್ರಕ್ಕಾಗಿ ನಿರ್ಮಾಪಕ ಉಮಾಪತಿ ಈ ರಾಷ್ಟ್ರೀಯ ಪ್ರಶಸ್ತಿಯನ್ನ ಪಡೆದು ಸಂಭ್ರಮದಲ್ಲಿದ್ದಾರೆ. ಪ್ರಶಸ್ತಿ ಗೆದ್ದವರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿದ್ರು.
-
Feeling Honoured to receive the 'Swarna Kamala - Best Children's Film' at #NationalAward ceremony for our film #SHPSK . Thank you all for the love. pic.twitter.com/kqXBquIx19
— Rishab Shetty (@shetty_rishab) December 23, 2019 " class="align-text-top noRightClick twitterSection" data="
">Feeling Honoured to receive the 'Swarna Kamala - Best Children's Film' at #NationalAward ceremony for our film #SHPSK . Thank you all for the love. pic.twitter.com/kqXBquIx19
— Rishab Shetty (@shetty_rishab) December 23, 2019Feeling Honoured to receive the 'Swarna Kamala - Best Children's Film' at #NationalAward ceremony for our film #SHPSK . Thank you all for the love. pic.twitter.com/kqXBquIx19
— Rishab Shetty (@shetty_rishab) December 23, 2019
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಅವನೇ ಶ್ರೀಮನ್ನಾರಾಯಣ ತಂಡ ಮಗ ಕಂಗ್ರಾಜುಲೇಷನ್ಸ್ ಎಂದಿದೆ. ಇನ್ನು ಹಲವು ನಟ ನಟಿಯರು ರಿಷಬ್ ಶೆಟ್ಟಿ ಸೇರಿದಂತೆ ಪ್ರಶಸ್ತಿ ಪಡೆದವರಿಗೆ ಶುಭಾಶಯ ತಿಳಿಸಿದ್ದಾರೆ.