ETV Bharat / sitara

ಪರಭಾಷಾ ಚಿತ್ರಗಳ ಎದುರು ಗೆದ್ದ 'ನನ್ನ ಪ್ರಕಾರ'... ಸಿನಿಪ್ರಿಯರಿಗೆ ಧನ್ಯವಾದ ಹೇಳಿದ ಚಿತ್ರತಂಡ

ಆಗಸ್ಟ್ 23ರಂದು ಬಿಡುಗಡೆಯಾದ ಪ್ರಿಯಾಮಣಿ ಹಾಗೂ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ನನ್ನ ಪ್ರಕಾರ' ಸಿನಿಮಾ ಗೆದ್ದಿದೆ. 'ಸಾಹೋ' ಅಬ್ಬರದ ನಡುವೆಯೂ ತಮ್ಮ ಚಿತ್ರ ಯಶಸ್ವಿಯಾಗಿರುವುದಕ್ಕೆ ಚಿತ್ರತಂಡ ಸಂತೋಷ ವ್ಯಕ್ತಪಡಿಸಿದೆ.

ನನ್ನ ಪ್ರಕಾರ ಚಿತ್ರತಂಡ
author img

By

Published : Sep 4, 2019, 11:36 AM IST

ಕಮರ್ಷಿಯಲ್ ವಿಚಾರದಲ್ಲಿ ಪರಭಾಷಾ ಚಿತ್ರಗಳು ಎಷ್ಟೇ ಸವಾಲು ಒಡ್ಡಿದರೂ ಕೂಡಾ ಕನ್ನಡ ಚಿತ್ರಗಳು ಅದರ ವಿರುದ್ಧ ಹೋರಾಡಿ ಗೆಲ್ಲುತ್ತವೆ ಎಂಬ ಉದಾಹರಣೆಗಳು ಸಾಕಷ್ಟಿವೆ. ಈಗ ಇವುಗಳ ಸಾಲಿಗೆ ವಿನಯ್ ಬಾಲಾಜಿ ನಿರ್ದೇಶನದ ಬಹುಭಾಷಾ ನಟ ಕಿಶೋರ್ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಿಯಾಮಣಿ ನಟಿಸಿರುವ ನನ್ನ ಪ್ರಕಾರ ಚಿತ್ರವೂ ಸೇರಿದೆ.

'ನನ್ನ ಪ್ರಕಾರ' ಸಕ್ಸಸ್ ಮೀಟ್

ದೊಡ್ಡ ಬಜೆಟ್ ಹಾಗೂ ಸ್ಟಾರ್​​​​​ಗಳು ನಟಿಸಿರುವ 'ಸಾಹೋ' ಹಾಗೂ 'ಕುರುಕ್ಷೇತ್ರ' ಸಿನಿಮಾಗಳ ಅಬ್ಬರದ ನಡುವೆಯೂ ಆಗಸ್ಟ್ 23ರಂದು ಬಿಡುಗಡೆಯಾದ 'ನನ್ನ ಪ್ರಕಾರ' ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಅಲ್ಲದೆ 'ಸಾಹೋ' ಕಾರಣ ಮಲ್ಟಿಪ್ಲೆಕ್ಸ್​​​​ನಿಂದ ಕಾಣೆಯಾಗಿದ್ದ 'ನನ್ನ ಪ್ರಕಾರ' ಮತ್ತೆ ಮಲ್ಟಿಪ್ಲೆಕ್ಸ್​​​​ನಲ್ಲಿ ರಾರಾಜಿಸುತ್ತಿದೆ. ಈ ಖುಷಿಯನ್ನು ಹಂಚಿಕೊಳ್ಳಲು ಚಿತ್ರತಂಡ ನಿನ್ನೆ ಸಕ್ಸಸ್ ಮೀಟ್ ಕರೆದು ಮಾಧ್ಯಮಗಳ ಮುಂದೆ ಸಂತಸವನ್ನು ಹಂಚಿಕೊಂಡಿತು. ಸದ್ಯಕ್ಕೆ ಈ ಸಿನಿಮಾ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಹೌಸ್​​ಫುಲ್​​ ಪ್ರದರ್ಶನ ಕಾಣುತ್ತಿದೆ. ನಮ್ಮ ಚಿತ್ರದ ಹಿಂದಿ ರೀಮೇಕ್ ರೈಟ್ಸ್ ಮಾತುಕತೆ ನಡೆದಿದೆ. ಹಿಂದಿಯಲ್ಲಿ ಅಜಯ್ ದೇವಗನ್ ನಾಯಕರಾಗಿ ನಟಿಸುವ ಸಾಧ್ಯತೆ ಇದೆ. ಇದರ ಜೊತೆಗೆ ತೆಲುಗು, ಮಲಯಾಳಂ ಹಾಗೂ ತಮಿಳಿಗೆ ಡಬ್ಬಿಂಗ್ ರೈಟ್ಸ್ ಸಹ ಸೇಲ್ ಆಗಿದೆ ಎಂದು ನಿರ್ದೇಶಕ ವಿನಯ್ ಬಾಲಾಜಿ ಸಂತಸವನ್ನು ಹಂಚಿಕೊಂಡರು.

nanna prakara
ನಿರ್ದೇಶಕ ವಿನಯ್ ಬಾಲಾಜಿ

ಈಗಾಗಲೇ ಚಿತ್ರದ ನಿರ್ಮಾಪಕರು ಹಾಕಿದ ಬಂಡವಾಳ ವಾಪಸ್ ಪಡೆದಿದ್ದಾರೆ. ಪರಭಾಷಾ ಚಿತ್ರಗಳ ಹಾವಳಿ ಇದ್ದರೂ ಕೂಡಾ ಕನ್ನಡದಲ್ಲಿ ಒಳ್ಳೆ ಕಥೆಯನ್ನು ಕನ್ನಡಿಗರು ಇದುವರೆಗೂ ಕೈ ಬಿಟ್ಟಿಲ್ಲ. ಅದರಲ್ಲೂ ಹೊಸಬರ ಚಿತ್ರಗಳನ್ನು ಸಿನಿಪ್ರಿಯರು ಕೈ ಹಿಡಿಯುತ್ತಲೇ ಬಂದಿದ್ದಾರೆ ಎಂಬುದಕ್ಕೆ ನಮ್ಮ ಚಿತ್ರವೇ ಉದಾಹರಣೆ ಎಂದು ಇಡೀ ಚಿತ್ರತಂಡ ಕನ್ನಡ ಸಿನಿಪ್ರಿಯರಿಗೆ ಧನ್ಯವಾದ ಅರ್ಪಿಸಿತು. ಜೊತೆಗೆ ಚಿತ್ರದ ಸಕ್ಸಸ್​​​​​​​​​​​​​​​ನಲ್ಲಿ ಪ್ರಮುಖ ಪಾತ್ರ ವಹಿಸಿದ ಮಾಧ್ಯಮದವರಿಗೂ ಧನ್ಯವಾದ ಅರ್ಪಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಕೆಲವೊಂದು ಚಿತ್ರಗಳು ಥಿಯೇಟರ್​​​ನಲ್ಲಿ ಮೂರು ದಿನಗಳಿಗಿಂತ ಹೆಚ್ಚಿಗೆ ಇರುವುದಿಲ್ಲ. ಅಂತದ್ದರಲ್ಲಿ ನಮ್ಮ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ನಟ ಕಿಶೋರ್ ಕೂಡಾ ಸಿನಿಪ್ರಿಯರಿಗೆ ಕೃತಜ್ಞತೆ ಅರ್ಪಿಸಿದರು.

nanna prakara
ಕಿಶೋರ್, ಮಯೂರಿ

Intro:ಕಮರ್ಷಿಯಲ್ ವಿಚಾರದಲ್ಲಿ ಪರಭಾಷ ಚಿತ್ರಗಳು ಎಷ್ಟೇ ಸವಾಲು ಒಡ್ಡಿದರು ಸಹ ಕನ್ನಡ ಚಿತ್ರಗಳು ಅದರ ವಿರುದ್ಧ ಹೋರಾಡಿ ಗೆಲ್ಲುತ್ತವೆ ಎಂಬ ಉದಾಹರಣೆಗಳು ಸಾಕಷ್ಟಿವೆ. ಈಗ ಇವುಗಳ ಸಾಲಿಗೆ ನಿರ್ದೇಶಕ ವಿನಯ್ ಬಾಲಾಜಿ ನಿರ್ದೇಶನದ ಬಹುಭಾಷಾ ನಟ ಕಿಶೋರ್ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಿಯಾಮಣಿ ನಟಿಸಿರುವ ನನ್ನ ಪ್ರಕಾರ , ಚಿತ್ರವೂ ಸೇರಿದೆ. ಬಿಗ್ ಬಜೆಟ್ ನ ದೊಡ್ಡ ಸ್ಟಾರ್ಗಳ ಚಿತ್ರಗಳಾದ ಸಾವು ಹಾಗೂ ಕುರುಕ್ಷೇತ್ರ ಚಿತ್ರಗಳ ಅಬ್ಬರದ ನಡುವೆಯೂ ಆಗಸ್ಟ್ 23ರಂದು ಬಿಡುಗಡೆಯಾದ ನನ್ನ ಪ್ರಕಾರ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಅಲ್ಲದೆ ಸಾಹೋ ಚಿತ್ರದ ಕಲೆಗೆ ಕೊಚ್ಚಿ ಹೋಗಿ ಮಲ್ಟಿಪ್ಲೆಕ್ಸ್ ನಿಂದಾ ಗೇಟ್ ಪಾಸ್ ಪಡೆದಿದ್ದ ನನ್ನ ಪ್ರಕಾರ ಚಿತ್ರ ಮತ್ತೆ ಮಲ್ಟಿಪ್ಲೆಕ್ಸ್ ಗಳಲಿ ಪ್ರತ್ಯಕ್ಷವಾಗಿದೆ.

Body:ಇನ್ನು ಈ ಖುಷಿಯನ್ನು ಹಂಚಿಕೊಳ್ಳಲು ನನ್ನ ಪ್ರಕಾರ ಚಿತ್ರ ತಂಡ ಇಂದು ಸಕ್ಸಸ್ ಮೀಟ್ ಕರೆದು ಮಾಧ್ಯಮಗಳ ಮುಂದೆ ತಮ್ಮ ಸಂತಸವನ್ನು ಹಂಚಿಕೊಂಡರು. ಸದ್ಯ ನನ್ನ ಪ್ರಕಾರ ಚಿತ್ರ ಮಲ್ಟಿಪ್ಲೆಕ್ಸ್ ಗಳಲ್ಲಿ ಹಾಗೂ ಚಿತ್ರಮಂದಿರಗಳಲ್ಲಿ ಫುಲ್ ಹೌಸ್ ಪ್ರದರ್ಶನ ಕಾಣುತ್ತಿದೆ ಅಲ್ಲದೆ ಸಾಹೋ ಚಿತ್ರಕ್ಕಾಗಿ ನಮ್ಮ ಚಿತ್ರವನ್ನು ತೆಗೆದಿದ್ದ ಮಲ್ಟಿಪ್ಲೆಕ್ಸ್ ಗಳಲ್ಲಿ ಮತ್ತೆ ನಮ್ಮ ಚಿತ್ರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲದೆ ನಮ್ಮ ಚಿತ್ರ ಹಿಂದಿಗೆ ರಿಮೇಕ್ ರೈಟ್ಸ್ ಮಾತುಕತೆ ನಡೆದಿದೆ. ಹಿಂದಿಯಲ್ಲಿ ನನ್ನ ಪ್ರಕಾರ ಚಿತ್ರದಲ್ಲಿ ಅಜಯ್ ದೇವಗನ್ ನಾಯಕರಾಗಿ ನಟಿಸುವ ಸಾಧ್ಯತೆಗಳು ಜಾಸ್ತಿ ಇದೆ. ಇದರ ಜೊತೆಗೆ ತೆಲುಗು ಮಲಯಾಳಂ ಹಾಗೂ ತಮಿಳಿಗೆ ನಮ್ಮ ಚಿತ್ರ ಡಬ್ಬಿಂಗ್ ರೈಟ್ಸ್ ಸಹ ಸೇಲ್ ಆಗಿದೆ ಎಂದು ನಿರ್ದೇಶಕ ವಿನಯ್ ಬಾಲಾಜಿ ಸಂತಸವನ್ನು ಹಂಚಿಕೊಂಡರು.

Conclusion:ಅಲ್ಲದೆ ಈಗಾಗಲೇ ನನ್ನ ಪ್ರಕಾರ ಚಿತ್ರದ ನಿರ್ಮಾಪಕರು ಹಾಕಿದ ಬಂಡವಾಳ ವಾಪಸ್ ಪಡೆದಿದ್ದು ಲಾಭವನ್ನು ನೋಡಿದ್ದಾರೆ. ಇದೇ ಖುಷಿಯಲ್ಲಿ ನಾಯಕಿ ಪ್ರಿಯಾಮಣಿಯನ್ನು ಹೊರತುಪಡಿಸಿ ಇಡೀ ಚಿತ್ರತಂಡ ಇಂದು ಸಕ್ಸಸ್ ಮೀಟ್ ನಲ್ಲಿ ಭಾಗಿಯಾಗಿದ್ದರು. ಪರಭಾಷಾ ಚಿತ್ರಗಳ ಎಷ್ಟು ದೊಡ್ಡ ಅವಳಿ ಇದ್ದರೂ ಸಹ ಕನ್ನಡದಲ್ಲಿ ನೊಂದಿಗೆ ಬಂದಿರುವ ಯಾವುದೇ ಚಿತ್ರಗಳನ್ನು ಇದುವರೆಗೂ ಕನ್ನಡಿಗರು ಕೈ ಬಿಟ್ಟಿಲ್ಲ. ಅದ್ರಲ್ಲೂ ಹೊಸಬರ ಚಿತ್ರಗಳನ್ನು ಸಿನಿಪ್ರಿಯರು ಕೈ ಹಿಡಿಯುತ್ತಲೇ ಬಂದಿದ್ದಾರೆ ಉತ್ತಮ ಚಿತ್ರಗಳನ್ನು ಖಂಡಿತವಾಗಿಯೂ ಕನ್ನಡಿಗರು ಕೈಬಿಡುವುದಿಲ್ಲ ಎಂಬುದಕ್ಕೆ ನಮ್ಮ ಚಿತ್ರವೇ ಉದಾಹರಣೆ ಎಂದು ಇಡೀ ಚಿತ್ರತಂಡ ಕನ್ನಡ ಸಿನಿಪ್ರಿಯರಿಗೆ ಹಾಗೂ ಚಿತ್ರದ ಸಕ್ಸಸ್ ನಲ್ಲಿ ಪ್ರಮುಖ ಪಾತ್ರ ವಹಿಸಿದ ಮಾಧ್ಯಮದವರಿಗೂ ಇದೇ ವೇಳೆ ಧನ್ಯವಾದಗಳನ್ನು ಅರ್ಪಿಸಿದರು. ಅಲ್ಲದೆ ಸದ್ಯದ ಪರಿಸ್ಥಿತಿಯಲ್ಲಿ ಇರುವಂತಹ ಕಾಂಪಿಟೇಷನ್ನಲ್ಲಿ ಯಾವುದೇ ಚಿತ್ರವಾದರೂ ಸಹ ಬಿಡುಗಡೆಯಾದ ಮೂರೇ ದಿನಗಳಲ್ಲಿ ಅದರ ಅಸ್ತಿತ್ವವನ್ನು ತೋರಿಸಬೇಕು. ಮೂರು ದಿನಗಳಲ್ಲಿ ಜನರು ಬಂದು ಆ ಚಿತ್ರವನ್ನು ನೋಡದೆ ಹೋದರೆ ನಮಗೆ ತಿಳಿಯದ ಹಾಗೆ ಚಿತ್ರಮಂದಿರದ ಚಿತ್ರಗಳನ್ನು ತೆಗೆದುಬಿಡುತ್ತಾರೆ. ಇಂತಹ ಸನ್ನಿವೇಶದಲ್ಲಿ ನನ್ನ ಪ್ರಕಾರ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಹದಿಮೂರನೆಯ ವಾರಕ್ಕೂ ಕಾಲಿಟ್ಟಿದೆ. ಅಲ್ಲದೆ ನಮ್ಮ ಚಿತ್ರವನ್ನು ಕನ್ನಡಿಗರು ಗೆಲ್ಲಿಸಿದ್ದಾರೆ ಎಂದು ನಟ ಕಿಶೋರ್ ಸಿನಿಪ್ರಿಯರಿಗೆ ಕೃತಜ್ಞತೆ ಅರ್ಪಿಸಿದರು...

ಸತೀಶ ಎಂಬಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.