ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ 'ನನ್ನ ಪ್ರಕಾರ' ಚಿತ್ರದಲ್ಲಿ ಬಹುಭಾಷಾ ನಟ ಕಿಶೋರ್ ಇಂಟೆಲಿಜೆನ್ಸ್ ಕಾಫ್ ಆಗಿ ಆಕ್ಟ್ ಮಾಡುತ್ತಿದ್ದಾರೆ. ಬಹುಭಾಷಾ ನಟಿ ಪ್ರಿಯಾಮಣಿ, ಡಾಕ್ಟರ್ ಕ್ಯಾರೆಕ್ಟರ್ ಪ್ಲೇ ಮಾಡ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಮೋಷನ್ ಪಿಕ್ಚರ್ ಥ್ರಿಲ್ಲಿಂಗ್ ಜೊತೆ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿಯಿಂದ ಕೂಡಿದೆ.
ನಾಲ್ಕು ಕಥೆಗಳನ್ನೊಳಗೊಂಡಿರುವ 'ನನ್ನ ಪ್ರಕಾರ' ಚಿತ್ರ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತೆ ಅನ್ನೋದು ಚಿತ್ರತಂಡದ ಮಾತು. ಗ್ರಾಫಿಕ್ಸ್ ಡಿಸೈನರ್ ಹಾಗೂ ಸಹ ನಿರ್ದೇಶಕನಾಗಿ ಕೆಲಸ ಮಾಡಿರೋ ವಿನಯ್ ಬಾಲಾಜಿ, ಕಥೆ ಚಿತ್ರಕತೆ ಬರೆದು ಫಸ್ಟ್ ಟೈಮ್ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ರಾಮ್ ಸಂಗೀತ ನೀಡಿದ್ದು, ಅದ್ದೂರಿಯಾಗಿ ನಿರ್ಮಾಪಕ ಗುರುರಾಜ್ ನಿರ್ಮಾಣ ಮಾಡಿದ್ದಾರೆ. ಮಯೂರಿ, ಅರ್ಜುನ್, ನಿರಂಜನ್ ದೇಶಪಾಂಡೆ, ಅಶೋಕ್ ಹಾಗೂ ವೈಷ್ಟವಿ ಹೀಗೆ ದೊಡ್ಡ ತಾರ ಬಳಗವಿರುವ 'ನನ್ನ ಪ್ರಕಾರ' ಸಿನಿಮಾ ಮುಂದಿನ ತಿಂಗಳು ತೆರೆ ಮೇಲೆ ಬರಲಿದೆ.
- " class="align-text-top noRightClick twitterSection" data="">