ಹೈದರಾಬಾದ್: ಸಮಂತಾ-ನಾಗಚೈತನ್ಯ ವಿಚ್ಛೇದನ ವಿಚಾರವಾಗಿ ತಮ್ಮ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಹಾಗೂ ಇತರೆ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ ಸ್ಪಷ್ಟಪಡಿಸಿದ್ದಾರೆ.
ಅವರ ನಡುವಿನ ವಿಚ್ಛೇದನದ ವಿಚಾರದ ಕುರಿತು ತಾನು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದಿರುವ ನಾಗಾರ್ಜುನ, ನನ್ನ ಹೆಸರಿನಲ್ಲಿ ಬರುತ್ತಿರುವ ಸುದ್ದಿಗಳೆಲ್ಲವೂ ಸುಳ್ಳು. ಇಂತಹ ವದಂತಿಗಳನ್ನು ಸುದ್ದಿಯಾಗಿ ಪರಿವರ್ತಿಸಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
ಸಮಂತಾ ಕೋರಿಕೆಯ ಮೇರೆಗೆ ನಾಗಚೈತನ್ಯ ವಿಚ್ಛೇದನಕ್ಕೆ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಇಂದು ಬೆಳಗ್ಗೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಬಗ್ಗೆ ನಾಗಾರ್ಜುನ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿ, ಇದು ಸುಳ್ಳು. ಮಾಧ್ಯಮಗಳು ಸುದ್ದಿಗಳನ್ನು ನೀಡಬೇಕೆ ಹೊರತು, ವದಂತಿಗಳನ್ನು ಅಲ್ಲ ಎಂದಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ವಿಚ್ಛೇದನವನ್ನು ಮೊದಲು ಬಯಸಿದ್ದೇ ಸಮಂತಾ. ಹೀಗಾಗಿ ಅವರೇ ಮೊದಲು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅವರ ನಿರ್ಧಾರಕ್ಕೆ ನಾಗ ಚೈತನ್ಯ ಒಪ್ಪಿಕೊಂಡ ಎಂದು ಸಂದರ್ಶನವೊಂದರಲ್ಲಿ ನಟ ನಾಗಾರ್ಜುನ ಹೇಳಿಕೊಂಡಿದ್ದಾರೆ ಎಂಬ ಇತ್ಯಾದಿ ಸುದ್ದಿಗಳು ಹರಿದಾಡುತ್ತಿವೆ. ಇದನ್ನೇ ಅವರು ವದಂತಿ ಎಂದಿದ್ದಾರೆ.
ಇದನ್ನೂ ಓದಿ: ಕಿಚ್ಚನ ಅಭಿಮಾನಿಗಳಿಗೆ ನಿರಾಸೆ: 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ