ETV Bharat / sitara

ಮೊದಲ ಚಿತ್ರದಲ್ಲೇ ಸಕ್ಸಸ್​​​​​​​​​​​​​​​​​​​​​​​​​​​​​​ ಕಂಡ ಡಾ. ಕಿರಣ್​​... ತಮ್ಮ ಕಚೇರಿಗೆ ಕರೆಸಿಕೊಂಡು ಬೆನ್ನು ತಟ್ಟಿದ ಹಂಸಲೇಖ - ಕನ್ನಡ ಚಿತ್ರರಂಗ

ಕನ್ನಡ ಚಿತ್ರರಂಗದಲ್ಲಿ ಪ್ರತಿಭಾವಂತ ತಂತ್ರಜ್ಞರಿಗೇನೂ ಕೊರತೆ ಇಲ್ಲ. ಕೆಲವು ಪ್ರತಿಭಾನ್ವಿತರಿಗೆ ಅವಕಾಶ ಸಿಗದೆ ತೆರೆಮರೆಯಲ್ಲೇ ಮರೆಯಾಗಿ ಹೋಗ್ತಾರೆ. ಇನ್ನು ಕೆಲವರು ಸಿಕ್ಕಿದ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಂಥವರ ಸಾಲಿನಲ್ಲಿ ಸದ್ಯ ನಿಂತಿರುವುದು ಡಾ. ಕಿರಣ್ ತೋಟಂಬೈಲು.

ಡಾ.ಕಿರಣ್​​, ಹಂಸಲೇಖ
author img

By

Published : Jul 28, 2019, 8:50 PM IST

ವೃತ್ತಿಯಲ್ಲಿ ವೈದ್ಯರಾಗಿದ್ದರೂ ಸಂಗೀತದ ಮೇಲಿನ ಮೋಹದಿಂದ 'ಐ ಲವ್​ ಯು' ಚಿತ್ರದ ಸಂಗೀತ ನಿರ್ದೇಶಕ ಡಾ. ಕಿರಣ್ ತೋಟಂಬೈಲು ಸಂಗೀತ ಬ್ರಹ್ಮ ಹಂಸಲೇಖ ಅವರ ಹಾದಿಯಲ್ಲಿ ಸಾಗಿ ಅವರ ಹಾಡುಗಳಿಂದಲೇ ಸ್ಫೂರ್ತಿ ಪಡೆದು ಇಂದು ಸಂಗೀತ ನಿರ್ದೇಶಕರಾಗಿದ್ದಾರೆ.

ವೈದ್ಯರಾಗಿದ್ದರೂ ಕೂಡಾ ಸಂಗೀತ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಲೇಬೇಕು ಎಂಬ ಹಠದೊಂದಿಗೆ ಕಿರಣ್ ತನ್ನದೇ ಆದ ಒಂದು ಪುಟ್ಟ ಸ್ಟುಡಿಯೋ ನಿರ್ಮಾಣ ಮಾಡಿಕೊಂಡು ಟ್ಯೂನ್ ಕಂಪೋಸ್ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಆದರೆ ಅದೇ ವೇಳೆ ಹೊಸ ಸಂಗೀತ ನಿರ್ದೇಶಕರನ್ನು ಹುಡುಕುತ್ತಿದ್ದ ಆರ್.ಚಂದ್ರು, ಕಿರಣ್ ಪ್ರತಿಭೆಯನ್ನು ಗುರುತಿಸಿ ಅವರ ಬಹುನಿರೀಕ್ಷಿತ ಹೈ ಬಜೆಟ್ 'ಐ ಲವ್ ಯು' ಚಿತ್ರಕ್ಕೆ ಸಂಗೀತ ನೀಡಲು ಆಫರ್ ನೀಡಿದ್ದಾರೆ. ಮೊದಲ ಬಾರಿಗೆ ದೊಡ್ಡ ಸಿನಿಮಾ ಸಿಕ್ಕಿದ್ದರಿಂದ ಹೆಚ್ಚು ಜವಾಬ್ದಾರಿಯುತವಾಗಿಯೇ ಡಾ. ಕಿರಣ್ 'ಐ ಲವ್ ಯು' ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದ ಗೆಲುವಿಗೆ ಶ್ರಮಿಸಿ ನಿರ್ದೇಶಕರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಡಾ. ಕಿರಣ್ ಯಶಸ್ವಿಯಾದರು. ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವೊಂದು ಮಾಹಿತಿಗಳನ್ನು ಕಿರಣ್ ಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.

ಡಾ. ಕಿರಣ್​​ ಸ್ಟುಡಿಯೋ

ಎಂಬಿಬಿಎಸ್​​​ನಲ್ಲಿ ಗೋಲ್ಡ್ ಮೆಡಲ್ ಸ್ಟೂಡೆಂಟ್ ಆದ ಡಾಕ್ಟರ್ ಕಿರಣ್​​​ಗೆ ವೈದ್ಯಲೋಕದ ಮೇಲಿರುವಷ್ಟೇ ಆಸಕ್ತಿ ಸಂಗೀತದ ಮೇಲೂ ಇದೆ. ಅದಕ್ಕಾಗಿಯೇ 'ಐ ಲವ್ ಯು' ಚಿತ್ರಕ್ಕಾಗಿ ಡಾಕ್ಟರ್ ಕಿರಣ್ ಬರೋಬ್ಬರಿ 75 ದಿನಗಳ ಕಾಲ ಟ್ಯೂನ್ ಕಂಪೋಸ್ ಮಾಡಿದರಂತೆ. ಇದು ಅವರ ಚಿತ್ರದ ಮೇಲಿನ ಪ್ರೀತಿಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನು ಚಿತ್ರ 50 ದಿನಗಳತ್ತ ದಾಪುಗಾಲಿಟ್ಟಿದ್ದು, ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಅಲ್ಲದೆ ಕಿರಣ್ ಅವರ ಹಾಡುಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಲು ಸಾಲು ಚಿತ್ರಗಳು ಅವರನ್ನು ಅರಸಿ ಬಂದಿವೆ. ಈಗಾಗಲೇ ಡಾಕ್ಟರ್ ಕಿರಣ್ ಇನ್ನೂ ಸೆಟ್ಟೇರದ 'ಧೀರ ಸಾಮ್ರಾಟ್', 'ಒಲವೇ ಮಂದಾರ 2' ಚಿತ್ರಗಳಿಗೆ ಕಮಿಟ್ ಆಗಿದ್ದಾರೆ. ಅಲ್ಲದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಟಿಸಲಿರುವ 'ಜಂಗಮ' ಚಿತ್ರಕ್ಕೂ ಅವರೇ ಟ್ಯೂನ್ ಮಾಡಲಿದ್ದಾರೆ. ಅಲ್ಲದೆ ಹ್ಯಾಟ್ರಿಕ್ ಡೈರೆಕ್ಟರ್ ಪ್ರೇಮ್ ಕೂಡಾ ಈಗಾಗಲೇ ಅವರ ಮುಂದಿನ ಚಿತ್ರಕ್ಕೆ ಸಂಗೀತ ನೀಡುವಂತೆ ಡಾಕ್ಟರ್ ಕಿರಣ್​​ಗೆ ಆಫರ್ ಕೊಟ್ಟಿದ್ದಾರೆ.

ಇನ್ನು ಇವುಗಳ ಮಧ್ಯೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 54ನೇ ಸಿನಿಮಾ 'ಪಾಶುಪತಾಸ್ತ್ರ' ಚಿತ್ರತಂಡದ ಜೊತೆ ಡಾಕ್ಟರ್ ಕಿರಣ್ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾದ ಕಾರಣ ಡಾಕ್ಟರ್ ಕಿರಣ್ ಅವರು ಬಿಜಿಎಸ್ ಆಸ್ಪತ್ರೆಯಲ್ಲಿ ಕೆಲಸ ಮುಗಿಸಿ ನಂತರ ಸಂಜೆ ಮೇಲೆ ಕತ್ರಿಗುಪ್ಪೆಯಲ್ಲಿರುವ ಅವರ ಸ್ಟುಡಿಯೋದಲ್ಲಿ ಸಂಗೀತಕ್ಕಾಗಿ ದಿನಕ್ಕೆ 5-6 ಗಂಟೆಗಳ ಕಾಲ ಸಮಯ ಮೀಸಲಿಟ್ಟಿದ್ದಾರೆ. ಮದುವೆಯಾಗಿ ಎರಡು ಮುದ್ದಾದ ಮಕ್ಕಳಿರುವ ಡಾಕ್ಟರ್ ಕಿರಣ್ ಅವರಿಗೆ ಅವರ ಮಡದಿ ಸಂಗೀತದ ಆಸಕ್ತಿಗೆ ಬೆನ್ನೆಲುಬಾಗಿ ನಿಂತಿದ್ದು, ಅವರ ಕೆಲಸಕ್ಕೆ ಸದಾ ಪ್ರೋತ್ಸಾಹ ನೀಡುತ್ತಾರೆ. ಇನ್ನು ಹಂಸಲೇಖ ಅವರ ಪಕ್ಕಾ ಅಭಿಮಾನಿಯಾಗಿರುವ ಡಾಕ್ಟರ್ ಕಿರಣ್ ಅವರಿಗೆ 'ಐ ಲವ್ ಯು' ಚಿತ್ರದ ಸಕ್ಸಸ್ ಹಂಸಲೇಖ ಅವರ ಭೇಟಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆಯಂತೆ.

ಇತ್ತೀಚಿಗೆ ಕಿರಣ್​​​​ಗೆ ನಾದಬ್ರಹ್ಮ ಫೋನ್ ಮಾಡಿ ಅವರ ಕಚೇರಿಗೆ ಕರೆಸಿಕೊಂಡು ಬೆನ್ನು ತಟ್ಟಿದ್ದಾರಂತೆ. ಅಲ್ಲದೆ ಚಿತ್ರದ ಹಾಡಿಗಳನ್ನು ಕಿರಣ್​​ ಅವರ ಕೈಲಿ ಹಾಡಿಸಿ ಹಂಸಲೇಖ ಎಂಜಾಯ್ ಮಾಡಿದ್ದಾರಂತೆ. ಇದು ಕಿರಣ್ ಅವರ ಜೀವನದಲ್ಲಿ ಮರೆಯಲಾಗದ ದಿನವಂತೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ಚಿತ್ರ ನಿರ್ಮಾಣಕ್ಕೂ ಕೈ ಹಾಕುವ ಯೋಚನೆಯಲ್ಲಿರುವ ಡಾಕ್ಟರ್ ಕಿರಣ್ ಅವರು ಈಗಾಗಲೇ ಒಂದು ಅದ್ಭುತ ಲವ್ ಸ್ಟೋರಿಯನ್ನು ಬರೆದಿದ್ದಾರಂತೆ. ಇನ್ನು ಚಿತ್ರಗಳ ಕಮಿಟ್​​ಮೆಂಟ್​​ ಮುಗಿದ ತಕ್ಷಣ ಈ ಚಿತ್ರವನ್ನು ನಿರ್ಮಾಣ ಮಾಡುವ ಯೋಚನೆಯಲ್ಲಿ ಇದ್ದೀನಿ ಎಂದು ಡಾಕ್ಟರ್ ಕಿರಣ್ ಈಟಿವಿ ಭಾರತ್ ಜೊತೆ ತಮ್ಮ ಮನದಾಳದ ಇಂಗಿತವನ್ನು ಹಂಚಿಕೊಂಡರು.

Intro:ಕನ್ನಡ ಚಿತ್ರರಂಗದಲ್ಲಿ ಪ್ರತಿಭಾವಂತ ತಂತ್ರಜ್ಞರಿಗೇನು ಕೊರತೆ ಇಲ್ಲ. ಕೆಲವು ಪ್ರತಿಭಾನ್ವಿತರಿಗೆ ಅವಕಾಶ ಸಿಗದೆ ತೆರೆಮರೆಯಲ್ಲೇ ಮರೆಯಾಗಿ ಹೋಗ್ತಾರೆ. ಇನ್ನು ಕೆಲವರು ಸಿಕ್ಕಿದ ಅವಕಾಶವನ್ನು ಅದ್ಭುತವಾಗಿ ಬೆಳೆಸಿಕೊಂಡು ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಅಂಥವರ ಸಾಲಿನಲ್ಲಿ ಸದ್ಯ ನಿಂತಿರುವುದು ಡಾ ಕಿರಣ್ ತೋಟಂಬೈಲು. ಎಸ್ ವೃತ್ತಿಯಲ್ಲಿ ವೈದ್ಯರಾಗಿದ್ದರು ಸಂಗೀತದ ಮೇಲಿನ ಮೋಹದಿಂದ ಸಂಗೀತ ಬ್ರಹ್ಮ ಹಂಸಲೇಖರ ದ್ರೋಣಾಚಾರಿ ರನ್ನಾಗಿ ಮಾಡಿಕೊಂಡು ಏಕಲವ್ಯನ ರೀತಿ ಹಂಸಲೇಖ ಅವರ ಹಾದಿಯಲ್ಲಿ ಸಾಗಿ ಅವರ ಹಾಡುಗಳಿಂದಲೇ ಸ್ಪೂರ್ತಿ ಪಡೆದು ಇಂದು ಸಂಗೀತ ನಿರ್ದೇಶಕರಾಗಿದ್ದಾರೆ.

Body:ಎಸ್ ವೈದ್ಯರಾಗಿದ್ದರು ಸಹ ಸಂಗೀತ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಲೇಬೇಕು ಎಂಬ ಹಟದೊಂದಿಗೆ ಕಿರಣ್ ತನ್ನದೇ ಆದ ಒಂದು ಪುಟ್ಟ ಸ್ಟುಡಿಯೋ ನಿರ್ಮಾಣ ಮಾಡಿಕೊಂಡು ಟ್ಯೂನ್ ಕಂಪೋಸ್ ಮಾಡಿದ್ರಲ್ಲಿ ಕಾಲಕಳೆಯುತ್ತಿದ್ದರು. ಆದರೆ ಅದೇ ವೇಳೆ ಹೊಸ ಸಂಗೀತ ನಿರ್ದೇಶಕರ ಸರ್ಚ್ ಮಾಡುತ್ತಿದ್ದ ಆರ್ಚಂದ್ರು ಅವರ ಕಣ್ಣಿಗೆ ಬಿದ್ದ ಡಾ.ಕಿರಣ್ ಅವರ ಟ್ಯಾಲೆಂಟ್ ಅನ್ನು ಗುರುತಿಸಿದ ನಿರ್ದೇಶಕ ಆರ್ ಚಂದ್ರು ಅವರ ಬಹುನಿರೀಕ್ಷಿತ ಹೈ ಬಜೆಟ್‌ ನ ಮೈತ್ರಿ ಲಾಂಗ್ವೇಜ್ ಸಿನಿಮಾದ ಐ ಲವ್ ಯೂ ಚಿತ್ರಕ್ಕೆ ಸಂಗೀತ ನೀಡುವುದಕ್ಕೆ ಡಾಕ್ಟರ್ ಕಿರಣ್ ಅವರಿಗೆ ಆರ್ ಚಂದ್ರು ಅವಕಾಶ ಕೊಟ್ಟರು. ಮೊದಲ ಚಿತ್ರದಲ್ಲೇ ದೊಡ್ಡ ಸಿನಿಮಾ ಸಿಕ್ಕಿದ್ದರಿಂದ ಹೆಚ್ಚು ಜವಾಬ್ದಾರಿಯುತವಾಗಿಯೇ ಡಾಕ್ಟರ್ ಕಿರಣ್ ಐ ಲವ್ ಯೂ ಚಿತ್ರಕ್ಕೆ ಸಂಗೀತ ನೀಡಿದರು. ಅಲ್ಲದೇ ಐ ಲವ್ ಯೂ ಚಿತ್ರಕ್ಕೆ ಉತ್ತಮ ಹಾಡುಗಳನ್ನು ಕೊಟ್ಟು ಚಿತ್ರದ ಗೆಲುವಿಗೆ ಶ್ರಮಿಸಿ ನಿರ್ದೇಶಕರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಡಾಕ್ಟರ್ ಕಿರಣ್ ಯಶಸ್ವಿಯಾದರು.ಇನ್ನೂ ಡಾ ‌ಕಿರಣ್ ಅವರನ್ನ ಈಟಿವಿ‌ಭಾರತ್ ಮಾತಿಗೆಳೆದಾಗ ಅವರ ಸಂಗೀತ ಕ್ಷೇತ್ರಕ್ಕೆ ಸಂಭದಿಸಿದ ಕೆಲವು‌ ಸಂಗತಿಗಳನ್ನು ನಮ್ಮ ಹಂಚಿ ಕೊಂಡ್ರು.

Conclusion:ಎಂಬಿಬಿಎಸ್ ನಲ್ಲಿ ಗೋಲ್ಡ್ ಮೆಡಲ್ ಸ್ಟೂಡೆಂಟ್ ಆದ ಡಾಕ್ಟರ್ ಕಿರಣ್ ವೈದ್ಯಲೋಕದ ಮೇಲಿರುವಷ್ಟೇ ಆಸಕ್ತಿ ಸಂಗೀತದ ಮೇಲೂ ಇದೆ. ಅದಕ್ಕಾಗಿಯೇ ಐ ಲವ್ ಯು ಚಿತ್ರಕ್ಕಾಗಿ ಡಾಕ್ಟರ್ ಕಿರಣ್ ಬರೋಬ್ಬರಿ 75 ದಿನಗಳನ್ನು ಕಂಪೋಸ್ ಮಾಡಿದರಂತೆ . ಇದು ಅವರ ಚಿತ್ರದ ಮೇಲಿನ ಪ್ರೀತಿಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನು ಐಲವ್ಯು ಚಿತ್ರ 50 ದಿನಗಳನ್ನು ಪೂರೈಸಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಅಲ್ಲದೆ ದಟ್ಟ ಕಿರಣ್ ಅವರ ಹಾಡುಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾಲು ಸಾಲು ಚಿತ್ರಗಳು ಅವರನ್ನು ಅರಸಿ ಬಂದಿವೆ. ಈಗಾಗಲೇ ಡಾಕ್ಟರ್ ಕಿರಣ್ ಇನ್ನೂ ಸೆಟ್ಟೇರದ ಧೀರ ಸಾಮ್ರಾಟ್, ಒಲವೇ ಮಂದಾರ 2 ಚಿತ್ರಕ್ಕೆ ಕಮಿಟ್ ಆಗಿದ್ದಾರೆ .ಅಲ್ಲದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಟಿಸಲಿರುವ ಜಂಗಮ ಚಿತ್ರಕ್ಕೂ ಅವರೇ ಮಾಡಲಿದ್ದಾರೆ. ಅಲ್ಲದೆ ಹ್ಯಾಟ್ರಿಕ್ ಡೈರೆಕ್ಟರ್ ಪ್ರೇಮ್ ಕೂಡ ಈಗಾಗಲೇ ಅವರ ಮುಂದಿನ ಚಿತ್ರಕ್ಕೆ ಸಂಗೀತ ನೀಡುವಂತೆ ಡಾಕ್ಟರ್ ಕಿರಣ್ ಗೆ ಆಫರ್ ಕೊಟ್ಟಿದ್ದಾರೆ. ಇನ್ನು ಇವುಗಳ ಮಧ್ಯೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ D 54 ಸಿನಿಮಾ ಪಾಶುಪತಾಸ್ತ್ರ ಚಿತ್ರತಂಡದ ಜೊತೆ ಯು ಡಾಕ್ಟರ್ ಕಿರಣ್ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಈಗಾಗಲೇ ಕಿರಣ್ ಅವರು ಪಾಶುಪತಾಸ್ತ್ರ ಚಿತ್ರಕ್ಕೆ ನಾಲ್ಕೈದು ಇವರುಗಳನ್ನು ಸಹ ರೆಡಿ ಮಾಡಿಕೊಂಡಿದ್ದಾರೆ. ಇನ್ನು ಇದನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ಅನೌನ್ಸ್ ಮಾಡಲಿದೆಂತೆ. ವೃತ್ತಿಯಲ್ಲಿ ವೈದ್ಯರಾದ ಕಾರಣ ಡಾಕ್ಟರ್ ಕಿರಣ್ ಅವರು ಬಿಜಿಎಸ್ ಆಸ್ಪತ್ರೆಯಲ್ಲಿ ಕೆಲಸ ಮುಗಿಸಿ. ನಂತರ ಸಂಜೆಯಮೇಲೆ ಕತ್ರಿಗುಪ್ಪೆಯಲ್ಲಿರುವ ಅವರ ಸ್ಟುಡಿಯೋದಲ್ಲಿ ಸಂಗೀತಕ್ಕಾಗಿ ದಿನದಲ್ಲಿ 5.6 ಗಂಟೆಗಳ ಕಾಲ ಸಮಯ ಮೀಸಲಿಟ್ಟಿದ್ದಾರೆ. ಮದುವೆಯಾಗಿ ಎರಡು ಮುದ್ದಾದ ಮಕ್ಕಳಿರುವ ಡಾಕ್ಟರ್ ಕಿರಣ್ ಅವರಿಗೆ ಅವರ ಮಡದಿ ಕಿರಣ್ ಅವರ ಸಂಗೀತದ ಆಸಕ್ತಿಗೆ ಬೆನ್ನೆಲುಬಾಗಿ ನಿಂತಿದ್ದು. ಅವರ ಕೆಲಸಕ್ಕೆ ಸದಾ ಪ್ರೋತ್ಸಾಹ ನೀಡುತ್ತಾರೆ. ಇನ್ನು ಹಂಸಲೇಖರ ಪಕ್ಕ ಅಭಿಮಾನಿಯಾಗಿರುವ ಡಾಕ್ಟರ್ ಕಿರಣ್ ಅವರಿಗೆ ಐ ಲವ್ ಯು ಚಿತ್ರದ ಸಕ್ಸಸ್ ಕಿರಣ್ ಅವರು ಹಂಸಲೇಖ ಅವರ ಭೇಟಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆಯಂತೆ. ಇತ್ತೀಚಿಗೆ ಅವರಿಗೆ ನಾದಬ್ರಹ್ಮ ಫೋನ್ ಮಾಡಿ ಅವರ ಕಚೇರಿಗೆ ಕರೆಸಿಕೊಂಡು ಐ ಲವ್ ಯು ಚಿತ್ರಕ್ಕೆ ಅದ್ಭುತವಾದ ಹಾಡುಗಳನ್ನು ಕೊಟ್ಟಿದೆ ಎಂದು ಬೆನ್ನು ತಟ್ಟಿದಂರಂತೆ . ಅಲ್ಲದೆ ಐಲವ್ಯು ಚಿತ್ರದ ಹಾಡನ್ನು ಕಿರಣ ಅವರ ಕೈಲಿ ಹಾಡಿಸಿ ಹಂಸಲೇಖ ಎಂಜಾಯ್ ಮಾಡಿದ್ದರಂತೆ. ಇದು ಕಿರಣ್ ಅವರ ಲೈಫ್ನಲ್ಲಿ ಮರೆಯಲಾಗದ ಗಳಿಗೆ ಯಂತೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ಚಿತ್ರ ನಿರ್ಮಾಣಕ್ಕೂ ಕೈಹಾಕುವ ಯೋಚನೆಯಲ್ಲಿರುವ ಡಾಕ್ಟರ್ ಕಿರಣ್ ಅವರು ಈಗಾಗಲೇ ಅವರೇ ಒಂದು ಅದ್ಭುತ ಲವ್ ಸ್ಟೋರಿಯನ್ನು ಬರೆದಿದ್ದಾರಂತೆ. ಇನ್ನು ಚಿತ್ರಗಳ ಕಮಿಟ್ಮೆಂಟ್ ಮುಗಿದ ತಕ್ಷಣ ಈ ಚಿತ್ರವನ್ನು ನಿರ್ಮಾಣ ಮಾಡುವ ಯೋಚನೆಯಲ್ಲಿ ಇದ್ದೀನಿ ಎಂದು ಡಾಕ್ಟರ್ ಕಿರಣ್ ಈಟಿವಿ ಭಾರತ್ ಜೊತೆ ತಮ್ಮ ಮನದಾಳದ ಇಂಗಿತವನ್ನು ಹಂಚಿಕೊಂಡರು. ಅದೇನೇ ಇರಲಿ ಸಿಕ್ಕ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಂಡಿರುವ ಡಾಕ್ಟರ್ ಕಿರಣ್ ಅವರು ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಆಸ್ತಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸತೀಶ ಎಂಬಿ...

ETV Bharat Logo

Copyright © 2025 Ushodaya Enterprises Pvt. Ltd., All Rights Reserved.