ETV Bharat / sitara

ಅದೊಂದೇ ಕಾರಣಕ್ಕೆ ನವೀನ್ ಸಜ್ಜು ಇನ್ನೂ ಬಿಗ್​​ಬಾಸ್-7 ನೋಡಿಲ್ಲವಂತೆ..!

author img

By

Published : Oct 19, 2019, 7:09 PM IST

ಸೀಸನ್ 7 ಶುರುವಾಗಿ ನಾಲ್ಕು ದಿನಗಳು ಕಳೆದಿವೆ. ಆದರೆ, ನಾನು ಒಂದು ದಿನವೂ ನೋಡಿಲ್ಲ. ನಾನು ಬಿಗ್​​​​​ಬಾಸ್​​ನಲ್ಲಿದ್ದ ದಿನಗಳ ನೆನಪಿನಲ್ಲೇ ಉಳಿಯಬೇಕು ಎಂಬ ಕಾರಣದಿಂದ ಕಾರ್ಯಕ್ರಮ ನೋಡುತ್ತಿಲ್ಲ ಎಂದು ನವೀನ್ ಸಜ್ಜು ಹೇಳಿದರು.

ನವೀನ್ ಸಜ್ಜು

ಬಿಗ್​​​​​ಬಾಸ್​​​​​ಗೆ ಹೋಗಿ ಬಂದವರಲ್ಲಿ ಎಷ್ಟೋ ಮಂದಿ ಇದೀಗ ಬಹಳ ಖ್ಯಾತರಾಗಿದ್ದಾರೆ. ಈ ಮಹಾಮನೆಯಲ್ಲಿ ಉಂಟಾಗುವ ಅನುಭವ ಹೊರಗೆ ಸಿಗುವುದಿಲ್ಲ ಎನ್ನುವುದು ಇಲ್ಲಿ ಹೋಗಿ ಬಂದವರ ಅಭಿಪ್ರಾಯ. ಸಂಗೀತ ನಿರ್ದೇಶಕ, ಗಾಯಕ ನವೀನ್​ ಸಜ್ಜು ಕೂಡಾ ಅದೇ ಮಾತು ಹೇಳುತ್ತಾರೆ.

ಬಿಗ್‌ಬಾಸ್ ಬಗ್ಗೆ ತಮ್ಮ ಅನುಭವ ಹಂಚಿಕೊಂಡ ನವೀನ್ ಸಜ್ಜು..

'ಬ್ರಹ್ಮಚಾರಿ' ಚಿತ್ರದ ಲಿರಿಕಲ್ ವಿಡಿಯೋ ಬಿಡುಗಡೆ ವೇಳೆ ಬಿಗ್‌ಬಾಸ್‌ ಸೀಸನ್-7ರ ಬಗ್ಗೆ ಮಾತನಾಡಿದ ನವೀನ್ ಸಜ್ಜು, ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯ, ಶಾಲಾ ಜೀವನ, ಕಾಲೇಜು ಲೈಫ್ ಎಂಬ ನೆನಪು ಇದ್ದೇ ಇರುತ್ತದೆ. ಇವೆಲ್ಲವನ್ನೂ ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಅದೇ ರೀತಿ ನನ್ನ ಜೀವನದಲ್ಲಿ ಬಿಗ್​ಬಾಸ್ ಎಂಬುದು ಮರೆಯಲಾರದ ಅನುಭವ. ಈಗ ಸೀಸನ್ 7 ಶುರುವಾಗಿ ನಾಲ್ಕು ದಿನಗಳು ಕಳೆದಿವೆ. ಆದರೆ, ನಾನು ಒಂದು ದಿನವೂ ನೋಡಿಲ್ಲ. ನಾನು ಈಗ ಬಿಗ್​​​​​​​​​​​​ಬಾಸ್ ನೋಡಿದರೆ ನನ್ನ ಮೈಂಡ್ ಬೇರೆ ಕಡೆ ಡೈವರ್ಟ್ ಆಗುತ್ತದೆ. ನಾನು ಬಿಗ್​​​​​ಬಾಸ್​​ನಲ್ಲಿದ್ದ ದಿನಗಳ ನೆನಪಿನಲ್ಲೇ ಉಳಿಯಬೇಕು ಎಂಬ ಕಾರಣದಿಂದ ಕಾರ್ಯಕ್ರಮ ನೋಡುತ್ತಿಲ್ಲ. ಆದರೆ, ಸೋಷಿಯಲ್‌ ಮೀಡಿಯಾ ಮೂಲಕ ಅಪ್​ಡೇಟ್ ತಿಳಿದುಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಖಂಡಿತ ಬಿಗ್​ಬಾಸ್ ನೋಡುತ್ತೇನೆ ಎಂದು ನವೀನ್ ಸಜ್ಜು ಹೇಳಿದರು.

naveen sajju
ಬಿಗ್ ಬಾಸ್ ಸೀಸನ್ 6 ರಲ್ಲಿ ಸುದೀಪ್ ಜೊತೆ ನವೀನ್ ಸಜ್ಜು

ಇನ್ನು, ಈ ಬಾರಿ ಬಿಗ್​ಬಾಸ್ ವಿನ್ನರ್ ಯಾರಾಗಬಹುದು ಎಂಬ ಪ್ರಶ್ನೆಗೆ ಅದನ್ನು ಜಡ್ಜ್ ಮಾಡಲು ಇನ್ನೂ ಮೂರು ತಿಂಗಳು ಸಮಯ ಬೇಕು. ಈಗಲೇ ಯಾವುದನ್ನು ಹೇಳಲು ಸಾಧ್ಯವಿಲ್ಲ. ಈಗ ಹೋಗಿರುವವರಲ್ಲಿ ನನಗೆ ಬಹುತೇಕ ಎಲ್ಲರೂ ಗೊತ್ತು ಎಂದು ನವೀನ್ ಬಿಗ್​​ಬಾಸ್ ಸ್ಪರ್ಧಿಗಳ ಬಗ್ಗೆ ಮಾತನಾಡಿದರು.

Intro:ಬಿಗ್ ಬಾಸ್ ನಲ್ಲಿ ಯಾರಿಗೂ ಸಿಗುವ ಅನುಭವ ಬೇರೆಲ್ಲೂ ಸಿಗೋಲ್ಲ, ಅದರಲ್ಲೂ ಬಿಗ್ ಬಾಸ್ ಮನೆಯ ಲೈಟ್ ಆಫ್ ಮಾಡಿ ಬರುವ ಇಬ್ಬರಿಗೆ ಸಿಗುವ ಅನುಭವ ಮತ್ಯಾವ ಸ್ಪರ್ಧಿಗೂ ಸಿಗುವುದಿಲ್ಲ ಎಂದು ಬಿಗ್ ಬಾಸ್ ಸೀಸನ್ ೬ ರನ್ನರ್ ಅಪ್ ನವೀನ್ ಸಜ್ಜು ಹೇಳಿದ್ದಾರೆ. ಬ್ರಹ್ಮಚಾರಿ ಚಿತ್ರದ ಲಿರಿಕಲ್ ವಿಡಿಯೋ ಲಾಂಚ್ ವೇಳೆ ಬಿಗ್ ಬಾಸ್ ಸೀಸನ್ ೭ ಬಗ್ಗೆ ಮಾತನಾಡಿದ ನವೀನ್ ಸಜ್ಜು , ಪ್ರತಿಯೋಬ್ಬ ಮನುಷ್ಯನಲ್ಲೂ ಚೈಲ್ಡ್ ಹುಡ್ ಲೈಫ್, ಸ್ಕೂಲ್ ಲೈಫ್ ಹಾಗೂ ಕಾಲೇಜ್ ಲೈಫ್ ಎಂಬ ನೆನಪು ಇರುತ್ತೆ ಅತರ ಲೈಫ್ ನಲ್ಲಿ ನನಗೆ ಬಿಗ್ ಬಾಸ್ ಜರ್ನಿ ನನಗೆ ಯಾವತ್ತು ಮರೆಯೋಕೆ ಸಾಧ್ಯವಿಲ್ಲ ಅಂತ ಅನುಭವ ನನಗೆ ಬಿಗ್ ಬಾಸ್ ನಿಂದ ಸಿಕ್ಕಿದೆ.

Body:ಈಗ ಸೀಸನ್ ೭ ಶುರುವಾಗಿ ನಾಲ್ಕು ದಿನಗಳು ಕಳೆದಿವೆ,ಅದ್ರೆ ನಾನು ಒಂದು ದಿನವು ನೋಡಿಲ್ಲ.ಯಾಂಕದ್ರೆ ನಾನು ಈಗ ಬಿಗ್ ಬಾಸ್ ನೋಡಿದ್ರೆ ನನ್ನ ಮೈಂಡ್ ಬೇರೆ ಕಡೆ ಡೈವರ್ಟ್ ಆಗುತ್ತೆ .ನಾನು ಬಿಗ್ ಬಾಸ್ ನಲ್ಲಿದ್ದ ನೆನೆಪಲ್ಲೇ ಇರಬೇಕು ಎಂಬ ಕಾರಣದಿಂದ ನಾನು ಬಿಗ್ ಬಾಸ್ ನೋಡಿಲ್ಲ.ಅದರೆ ಸೋಷಿಯಲ್‌ ಮೀಡಿಯಾದಲ್ಲಿ ಬಿಗ್ ಬಾಸ್ ಅಪ್ಡೇಟ್‌ ನ ತಿಳ್ಕೋತ್ತೀದ್ದೀನಿ. ಇಷ್ಟು ದಿನ ತಕ್ಡೋಂಡಿದ್ದೀನಿ ಮುಂದಿನ ದಿನಗಳಲ್ಲಿ ನಾನು ನೋಡ್ತಿನಿ., ಅಲ್ಲದೆ ಈ ಸೀಸನ್ ಸ್ಪರ್ಧಿಗಳು ಎಲ್ಲಾ ಚೆನ್ನಾಗಿದ್ದಾರೆ‌. ಈಗಲೇ ಜಡ್ಜ್ ಮೆಂಟ್ ಕೊಡಲು ಸಾಧ್ಯವಿಲ್ಲ ,ಎರಡು ಮೂರು ವಾರ ಕಳೆದ್ರೆ ನಿಜವಾದ ರಿಯಾಲಿಟಿ ಆಚೆ ಬರುತ್ತೆ ಎಂದು ನವೀನ್ ಸಜ್ಜು ಹೇಳಿದ್ರು.

Conclusion:ಇದಲ್ಲದೆ ಬಿಗ್ ಬಾಸ್ ಫೈನಲಿಸ್ಟ್ ಯಾರಾಗ್ತಾರೆ ಅನ್ನೋದನ್ನ ನಾನು ಜಡ್ಜ್ ಮಾಡ ಬೇಕಾದ್ರೆ ಮೂರು ಟೈಂ ಬೇಕು.ಈಗಲೇ ಯಾವುದನ್ನು ಹೇಳಲು ಸಾಧ್ಯವಿಲ್ಲ, ಮೂರು ವಾರ ಟೈಂ ಕೊಟ್ಟರೆ ಸೀಸನ್ ೭ ಫೈನಲಿಸ್ಟ್ ಯಾರು ಅಂತ ಹೇಳ್ತೀನಿ. ಜೊತೆಗೆ ನನ್ನ ಫೇವರೀಟ್ ಕಂಟೆಸ್ಟೆಂಟ್ ಯಾರು ಅಂತ ಜಡ್ಜ್ ಮಾಡೋಕೆ ಮೂರು ವಾರ ಟೈಂ ಬೇಕು,ಎಲ್ಲಾ ಗೊತ್ತಿರುವವರೆ ಅವರು ಯಾವ ಸ್ಟಾಟರ್ಜುಲಿಯಲ್ಲಿ ಗೇಮ್ ಪ್ಲೇ ಮಾಡ್ತಾರೆ ಗೊತ್ತಾಗಲ್ಲ, ಎಂದು ನವೀನ್ ಸಜ್ಜು ಸೀಸನ್ ೭ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಹೇಳಿದ್ರು.

ಸತೀಶ ಎಂಬಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.