ETV Bharat / sitara

'ಮುಖವಾಡ ಇಲ್ಲದವನು 84' ಚಿತ್ರಕ್ಕೆ ಸಾಥ್ ನೀಡಿದ ನಿರ್ದೇಶಕ ರವಿ ಶ್ರೀವತ್ಸ..! - ಸ್ಯಾಂಡಲ್​ವುಡ್​​ ಸುದ್ದಿ

'ಮುಖವಾಡ ಇಲ್ಲದವನು 84' ಎಂಬ ಟೈಟಲ್​ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿರುವ ಹೊಸಬರ ಚಿತ್ರತಂಡಕ್ಕೆ ಖ್ಯಾತ ನಿರ್ದೇಶಕ ರವಿ ಶ್ರೀವತ್ಸ್​​​ ಸಾಥ್​​ ನೀಡಿದ್ದು, ಚಿತ್ರದ ಟ್ರೈಲರ್​ ಮತ್ತು ಹಾಡುಗಳನ್ನ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ..

mukhvada-eiladhvanu-kannada-film-trailer-and-song-release
ಮುಖವಾಡ ಇಲ್ಲದವನು 84 ಸಿನಿಮಾ ಟ್ರೈಲರ್​​
author img

By

Published : Nov 2, 2020, 5:06 PM IST

ಹೊಸ ಪ್ರತಿಭೆಗಳು, ಹೊಸ ಕಥೆ, ಹೊಸ ಐಡಿಯಾಗಳನ್ನ ಇಟ್ಟುಕೊಂಡು ಸ್ಯಾಂಡಲ್​​​​ವುಡ್​ಗೆ ಎಂಟ್ರಿ ಕೊಡುವ ಮೂಲಕ ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಸದ್ಯ 'ಮುಖವಾಡ ಇಲ್ಲದವನು 84' ಎಂಬ ಟೈಟಲ್‌ನೊಂದಿಗೆ ಹೊಸಬರ ಟೀಮ್​ವೊಂದು ಚಂದನವನಕ್ಕೆ ಎಂಟ್ರಿ ಕೊಟ್ಟಿದೆ.

ಬಹುತೇಕ ಚಿತ್ರೀಕರಣ ಮುಗುಸಿರೋ 'ಮುಖವಾಡ ಇಲ್ಲದವನು' ಚಿತ್ರ ರಿಲೀಸ್​ಗೆ ಸಜ್ಜಾಗಿದೆ‌. ಸದ್ಯ ಚಿತ್ರದ ಟ್ರೈಲರ್ ಹಾಗೂ ಹಾಡುಗಳನ್ನ ಡೆಡ್ಲಿ ಸೋಮ ಖ್ಯಾತಿಯ ನಿರ್ದೇಶಕ ರವಿ ಶ್ರೀವತ್ಸ ಹಾಗೂ ಜೈ ಹಿಂದ್​ ಸಿನಿಮಾದ ನಿರ್ದೇಶಕ ಶಿವಕುಮಾರ್ ಅನಾವರಣ ಮಾಡಿದ್ದು ವಿಶೇಷವಾಗಿತ್ತು.

'ಮುಖವಾಡ ಇಲ್ಲದವನು 84' ಚಿತ್ರಕ್ಕೆ ಸಾಥ್ ನೀಡಿದ ನಿರ್ದೇಶಕ ರವಿ ಶ್ರೀವತ್ಸ..!

ಸಸ್ಪೆನ್ಸ್ ಜೊತೆಗೆ ಪ್ರಕೃತಿ ಎದುರು ಮನುಷ್ಯ ಶೂನ್ಯ ಎಂಬ ಕಥೆಯನ್ನ ಹೇಳೋದಿಕ್ಕೆ ನಿರ್ದೇಶಕ ಶಿವಕುಮಾರ್ ಕಡೂರು ಹೊರಟ್ಟಿದ್ದಾರೆ. ಈ ಹಿಂದೆ ಡ್ರೆಸ್ ಕೋಡ್ ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ಶಿವಕುಮಾರ್ ನಿರ್ದೇಶನದ ಜೊತೆ ಅಭಿನಯ ಕೂಡ ಮಾಡಿದ್ದಾರೆ.

ಶಿವಕುಮಾರ್​ಗೆ ಜೊತೆಯಾಗಿ ರಚನಾ ಅಂಬಲೆ, ಕಾವ್ಯ ಗೌಡ ಎಂಬ ಇಬ್ಬರು ಯುವ ನಟಿಯರು ನಟಿಸಿದ್ದಾರೆ. ಇದರ ಜೊತೆಗೆ ಗಣಪತಿ ಪಾಟೀಲ್, ಹರೀಶ್ ಸಾರಾ, ಆನಂದ್ ಕೋರಾ, ಜಯಸೂರ್ಯ ಸೇರಿದಂತೆ ಹಲವಾರು ಕಲಾವಿದರು ಚಿತ್ರದಲ್ಲಿದ್ದಾರೆ.

ಮುಖವಾಡ ಇಲ್ಲದವನು 84 ಸಿನಿಮಾ ಟ್ರೈಲರ್​​

ಚಿತ್ರಕ್ಕೆ ಮಧು ಆರ್ಯ, ವಿನಯ್ ಗೌಡ, ಗಿರೀಶ್ ಅವರ ಛಾಯಾಗ್ರಹಣವಿದ್ದು, ದುರ್ಗಾ ಪ್ರಸಾದ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನ್ಯೂಜಿಲ್ಯಾಂಡ್​​ನ ಮೆಡಿಕಲ್ ಡಿಪಾರ್ಟ್‌ಮೆಂಟ್​ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೆಳಗಾವಿ ಮೂಲದ ಗಣಪತಿ ಪಾಟೀಲ್ ಚಿತ್ರ ನಿರ್ಮಾಣದ ಜೊತೆ ಅಭಿನಯ ಕೂಡ ಮಾಡಿದ್ದಾರೆ. ಸದ್ಯ ಸೆನ್ಸಾರ್ ಮುಗುಸಿರೋ 'ಮುಖವಾಡ ಇಲ್ಲದವನು 84' ಈ ವರ್ಷದ ಎಂಡ್​ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಿದ್ದವಾಗಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.