ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಅನೇಕ ಮಕ್ಕಳ ಸಿನಿಮಾಗಳು ಬಂದಿವೆ. ಇದೀಗ 'ಪ್ರಚಂಡ ಪುಟಾಣಿಗಳು' ಎಂಬ ಸಿನಿಮಾಗೆ ಮುಹೂರ್ತ ನೆರವೇರಿದೆ. ಸಿನಿಮಾ ಮಾರ್ಚ್ ತಿಂಗಳಲ್ಲಿ ಸೆಟ್ಟೇರಬೇಕಿತ್ತು. 1981ರಲ್ಲಿ ಇದೇ ಹೆಸರಿನ ಸಿನಿಮಾ ಬಿಡುಗಡೆಯಾಗಿ ಜಯಭೇರಿ ಬಾರಿಸಿತ್ತು.
![Prachanda Putanigalu](https://etvbharatimages.akamaized.net/etvbharat/prod-images/prachanda-putanigalu-muhurth-21592448912472-84_1806email_1592448923_96.jpeg)
ಶ್ರೀಮತಿ ಡಿ. ಸುನಿತಾ ಹಾಗೂ ಎನ್. ರಘು ಅವರ ಸಹಕಾರದಲ್ಲಿ ಡಿ ಅ್ಯಂಡ್ ಡಿ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ 'ಪ್ರಚಂಡ ಪುಟಾಣಿಗಳು' ಸೋಮವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಬಂಡಕೋಟ ಗ್ರಾಮದ ಶ್ರೀ ಸತ್ಯಮ್ಮ ದೇವಿ ದೇವಾಲಯದಲ್ಲಿ ಮುಹೂರ್ತ ಆಚರಿಸಿಕೊಂಡಿದೆ. ಜಿಲ್ಲಾ ಪಂಚಾಯತ್ ಸದಸ್ಯರಾದ ಸುನಂದಮ್ಮ ವೆಂಕಟೇಶ್ ಈ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದಾರೆ. ಸಮಾಜ ಸೇವಕರಾದ ಶ್ರೀ ಸಿದ್ದೇಪಲ್ಲಿ ಸುಬ್ಬಾರೆಡ್ಡಿ ಮೊದಲ ದೃಶ್ಯಕ್ಕೆ ಕ್ಯಾಮರಾ ಚಾಲನೆ ಮಾಡಿದ್ದಾರೆ. ಉದ್ಯಮಿ ಶ್ರೀಕಾಂತ್, ಸಮಾಜ ಸೇವಕರಾದ ವೆಂಕಟೇಶಪ್ಪನವರು ಈ ಚಿತ್ರಕ್ಕೆ ಶುಭ ಹಾರೈಸಿದರು.
![Prachanda Putanigalu](https://etvbharatimages.akamaized.net/etvbharat/prod-images/prachanda-putanigalu-muhurth-31592448912474-53_1806email_1592448923_394.jpeg)
ಮಾಸ್ಟರ್ ಧ್ರುವ, ಮಾಸ್ಟರ್ ಶ್ರೀ ಹರ್ಷ, ಮಾಸ್ಟರ್ ಕೃತನ್, ಬೇಬಿ ಅಂಕಿತ, ಬೇಬಿ ಸುಪ್ರಿತ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ಹಿರಿಯ ನಟ ಅವೈನಾಶ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೋಲಾರ್ ಬಾಬು, ಡಿ. ಕೃಷ್ಣಮೂರ್ತಿ, ನಿಡುವಲ್ಲಿ ರೇವಣ್ಣ, ತಾರೆಹಳ್ಳಿ ಹನುಮಂತಪ್ಪ, ಮದನ್ ಮಂಜು, ಶ್ರೀಕಾಂತ್, ಬುಲೆಟ್ ರಘು ಹಾಗೂ ಇತರರು ಪೋಷಕ ಪಾತ್ರಗಳಲ್ಲಿದ್ದಾರೆ.
![Prachanda Putanigalu](https://etvbharatimages.akamaized.net/etvbharat/prod-images/prachanda-putanigalu-muhurth-11592448912471-34_1806email_1592448923_169.jpeg)
ರಾಜೀವ್ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಪ್ರಮೋದ್ ಭಾರತಿ ಛಾಯಾಗ್ರಹಣ, ವಿನಯ್ ಆಲೂರು ಸಂಕಲನ, ವಿನು ಮನಸು ಸಂಗೀತ, ಸುರೇಶ್ ಕಂಬಳಿ ಚಿತ್ರಕ್ಕೆ ಸಾಹಿತ್ಯ ಒದಗಿಸುತ್ತಿದ್ದಾರೆ. ಒಂದೇ ಹಂತದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಸುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ತೀರ್ಮಾನಿಸಿದೆ.