ನಿರ್ದೇಶಕ ಆರ್.ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಸಿನಿಮಾ ‘ಕಬ್ಜ’. ಈ ಸಿನಿಮಾ ಬರೋಬ್ಬರಿ ಏಳು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಇನ್ನೊಂದು ವಿಶೇಷ ಅಂದ್ರೆ ಈ ಸಿನಿಮಾಕ್ಕೆ ಹಣ ಹೂಡುತ್ತಿರುವವರು ಮಾಜಿ ಶಾಸಕ ಎಂ.ಟಿ.ಬಿ.ನಾಗರಾಜ್.
ಇನ್ನು ಎಂಟಿಬಿ ನಾಗರಾಜು ಅನರ್ಹ ಶಾಸಕರಾಗಿದ್ದಾಗಲೇ ಒಂದು ಸಿನಿಮಾ ಮಾಡುವುದಾಗಿ ಬಿ.ಸಿ.ಪಾಟಿಲ್ ಜೊತೆ ಚರ್ಚೆ ನಡೆಸಿದ್ದರಂತೆ. ಆದ್ರೆ ಕಾರಣಾಂತರಗಳಿಂದ ಆ ಸಮಯದಲ್ಲಿ ಸಿನಿಮಾ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲವಂತೆ.
ಈಗಗಲೇ ಸಿನಿಮಾಕ್ಕೆ ಬೆಂಗಳೂರಿನ ಮೀನರ್ವಮಿಲ್ನಲ್ಲಿ 9 ಸೆಟ್ಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ನಾಲ್ಕು ಸೆಟ್ ಈಗಾಗಲೇ ನಿರ್ಮಾಣವಾಗಿದ್ದು, ಒಂದೂವರೆ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆಯಂತೆ. ಕೆಜಿಎಫ್ ಸೂಪರ್ ಹಿಟ್ ಚಿತ್ರಕ್ಕೆ ಕಲಾ ನಿರ್ದೇಶನ ಮಾಡಿರುವ ಶಿವಕುಮಾರ್, ನೂರಾರು ಸಹಾಯಕರ ಜೊತೆ ಈ ಸೆಟ್ ನಿರ್ಮಾಣ ಮಾಡಿದ್ದಾರಂತೆ.