ಸೂಪರ್ ಹಿಟ್ ಧಾರಾವಾಹಿ ನಾಗಿನ್ನಲ್ಲಿ ಕಾಣಿಸಿಕೊಂಡು ಕೆಜಿಎಫ್ನ ಹಾಟ್ ಸಾಂಗ್ನಲ್ಲಿ ಮಿಂಚಿದ್ದ ಬೆಡಗಿ ಮೌನಿರಾಯ್ ಗೆಳೆಯ ಸೂರಜ್ ನಂಬಿಯಾರ್ ಜೊತೆ ಗೋವಾದಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿವೆ.
ಇದರೊಂದಿಗೆ ಮೌನಿರಾಯ್ ಹಳದಿ (ಅರಿಶಿನ ಶಾಸ್ತ್ರ) ಮತ್ತು ಮೆಹೆಂದಿ ಸಮಾರಂಭದಲ್ಲಿ 'ಮೆಹೆಂದಿ ಲಗಾ ಕೆ ರಖನಾ' ಹಾಡಿಗೆ ಕುಣಿದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಳದಿ ಲೆಹೆಂಗಾ ಧರಿಸಿ ಮೌನಿ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಈ ಸಮಾರಂಭದಲ್ಲಿ ಮೌನಿಯ ಆಪ್ತ ಗೆಳೆಯ ಅರ್ಜುನ್ ಬಿಜಲಾನಿ, ಸ್ನೇಹಿತ ಮಂದಿರಾ ಬೇಡಿ ಕೂಡಾ ಭಾಗವಹಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ