ಮದುವೆಯ ಮಮತೆಯ ಕರೆಯೋಲೆ ಚಿತ್ರ ಖ್ಯಾತಿಯ ಸೂರಜ್ ಗೌಡ ನಟಿಸಿ, ಮೊದಲ ಬಾರಿಗೆ ನಿರ್ದೇಶನ ಮಾಡ್ತಿರೋ ಚಿತ್ರ 'ನಿನ್ನ ಸನಿಹಕೆ 'ಯು ಟೀಸರ್ ಮತ್ತು ಹಾಡುಗಳಿಂದಲೇ ಸ್ಯಾಂಡಲ್ವುಡ್ನಲ್ಲಿ ಭಾರಿ ಸದ್ದು ಮಾಡ್ತಿದೆ. ಚಿತ್ರದಲ್ಲಿ ದೊಡ್ಮನೆ ಹುಡುಗಿ ಧನ್ಯ ರಾಮ್ ಕುಮಾರ್ ಹಾಡೊಂದನ್ನು ಹಾಡಿದ್ದಾರೆ.
- " class="align-text-top noRightClick twitterSection" data="">
ದೊಡ್ಮನೆಯ ಕುಡಿ ಧನ್ಯ ರಾಮ್‌ಕುಮಾರ್ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರೋ 'ನಿನ್ನ ಸನಿಹಕೆ' ಆಗಸ್ಟ್ 20ಕ್ಕೆ ಬಿಡುಗಡೆ ಆಗುತ್ತಿದೆ. ಇದು ದೊಡ್ಮನೆ ಹುಡುಗಿ ಧನ್ಯ ರಾಮ್ ಕುಮಾರ್ ಬೆಳ್ಳಿತೆರೆಗೆ ಎಂಟ್ರಿ ಕೊಡಲು ಸಿದ್ಧವಾಗಿರೋ ಸಿನಿಮಾ. ಈಗಾಗಲೇ ಫಿಲಂ ಇಂಡಸ್ಟ್ರಿಯಲ್ಲಿ ಭಾರಿ ಸದ್ದು ಮಾಡುತ್ತಿರುವ ಈ ಚಿತ್ರದಲ್ಲಿ ಧನ್ಯ ರಾಮ್ ಕುಮಾರ್ ಸಾಂಗನ್ನು ಹಾಡಿದ್ದಾರೆ.
ಈಗಾಗಲೇ ಸಿನಿಮಾದ ಹಾಡುಗಳಂತೂ ಸೂಪರ್ ಡೂಪರ್ ಹಿಟ್ ಆಗಿದ್ದು, ಯುವ ಮನಸ್ಸುಗಳನ್ನು ಸೆಳೆಯುತ್ತಿವೆ. ಅದ್ರಲ್ಲೂ ಮಳೆ ಮಳೆ ಮಳೆಯೇ ಹಾಗೂ ನೀ ಪರಿಚಯ ಹಾಡುಗಳು ಮಿಲಿಯನ್ಗಟ್ಟಲೇ ವೀವ್ಸ್ ಪಡೆದು ಮುನ್ನುಗ್ಗುತ್ತಿವೆ. ಇದೀಗ ನೀ ಪರಿಚಯ ಹಾಡಿಗೆ ಸಿನಿಮಾದ ನಾಯಕ - ನಾಯಕಿ ಧ್ವನಿಯಾಗಿದ್ದಾರೆ.
ಚೊಚ್ಚಲ ಚಿತ್ರದಲ್ಲೇ ದೊಡ್ಮನೆ ಹುಡುಗಿ ಧನ್ಯ ರಾಮ್ ಕುಮಾರ್ ಹಾಡುವ ಮೂಲಕ ಗಾಯಕಿಯಾಗಿದ್ದಾರೆ. ಸದ್ಯ ಸೂರಜ್ ಮತ್ತು ಧನ್ಯ ಹಾಡಿರೋ ಕವರ್ ಸಾಂಗ್ ರಿಲೀಸ್ ಆಗಿದೆ. ಇಬ್ಬರು ಹಾಡಿರೋ ಹಾಡಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗ್ತಿದೆ. ಇದರ ಅಸಲಿ ಹಾಡನ್ನು ಸಿದ್ಧಾರ್ಥ್ ಬೆಲ್ಮಣ್ಣು, ರಕ್ಷಿತ್ ಸುರೇಶ್ ಹಾಡಿದ್ದಾರೆ. ವಾಸುಕಿ ವೈಭವ್ ಈ ಅದ್ಭುತ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
ಇದನ್ನೂ ಓದಿ: ರಾಜ್ಕುಮಾರ್ ಮೊಮ್ಮಗಳು ನಟಿಸಿರೋ 'ನಿನ್ನ ಸನಿಹಕೆ' ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್
ಪೋಸ್ಟರ್ನಿಂದ ಸಿನಿಮಾ ಮೇಕಿಂಗ್ ಕ್ವಾಲಿಟಿಯಿಂದ ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಹುಟ್ಟಿಸಿದೆ. ವೈಟ್ ಆ್ಯಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿದ್ದಾರೆ. ಆಗಸ್ಟ್ 1 ರಂದು ಸಿನಿಮಾದ ಟ್ರೈಲರ್ ರಿಲೀಸ್ ಆಗ್ತಿದ್ದು, 20 ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.