ಕಾಲಿವುಡ್ನ ಬಹುಬೇಡಿಕೆ ನಟ ಧನುಷ್ ಎಲ್ಲರಂತೆ ಅಲ್ಲ. ಎಲ್ಲ ನಟರು ನನ್ನ ಸಿನಿಮಾ ಗೆಲ್ಲಬೇಕು ಎಂದು ಹೊರಟರೆ ಧನುಷ್ ಮಾತ್ರ ಸ್ವಲ್ಪ ವಿಭಿನ್ನ. ಹಲವು ನಟರು ನನ್ನ ಸಿನಿಮಾ ಸೋಲದಿರಲಿ ಎಂದು ಜಪ ಮಾಡಿದರೆ ಇವರಿಗೆ ಮಾತ್ರ ಸೋಲೇ ಇಷ್ಟವಂತೆ. ಏಕೆ ಅನ್ನೋದನ್ನು ಅವರೇ ಸ್ಪಷ್ಟಪಡಿಸಿದ್ದಾರೆ.
ಒಂದು ವೈಫಲ್ಯ ಒಬ್ಬ ನಟನ ವೃತ್ತಿಜೀವನಕ್ಕೆ ಕಂಟಕ ತರಬಹುದು. ಹಾಗಾಗಿ ಸೋಲು ಅಂದ್ರೆ ಎಲ್ಲರೂ ಭಯಪಡುತ್ತಾರೆ. ಆದ್ರೆ ವೈಫಲ್ಯಕ್ಕಿಂತ ಯಶಸ್ಸು ಹೆಚ್ಚು ಭಯಾನಕವಾಗಿರುತ್ತೆ ಅಂತಾರೆ ಧನುಷ್.

ಆದರೆ, ನನ್ನ ಫಿಲ್ಮ್ ಹಿಟ್ ಬಗ್ಗೆ ನಾನು ಹೆಚ್ಚು ಹೆದರುತ್ತೇನೆ. ಏಕೆಂದರೆ ಯಶಸ್ಸು ಎದುರಿಸಲು ನನಗೆ ಕಷ್ಟವಾಗುತ್ತೆ. ಇದೇ ನಮ್ಮ ಮತ್ತು ನಮ್ಮ ಸುತ್ತಮುತ್ತಲಿನ ಸಂಬಂಧಕ್ಕೆ ಮುಳುವಾಗುತ್ತದೆ. ನೆಮ್ಮದಿಯ ಬದುಕು ಬದಲಾಯಿಸುತ್ತದೆ. ಈ ವೇಳೆ ನಾವು ಜಾಗರೂಕರಾಗಬೇಕು ಅಂತಾರೆ ಧನುಷ್. ಸಿನಿಮಾ ಹಿಟ್ ಆದಾಗ ನೀವು ಏಕೆ ನಿಮ್ಮ ಅಭಿಮಾನಿಗಳನ್ನು ಭೇಟಿಯಾಗಬಾರದು ಎಂದು ಕೇಳಿದ್ದಕ್ಕೆ ಈ ಉತ್ತರ ನೀಡಿದ್ದಾರೆ.
ಧನುಷ್ ಸದ್ಯ ಬಾಲಿವುಡ್ನಲ್ಲಿ ಬ್ಯುಸಿಯಾಗಿದ್ದು, ಅವರ 'ದಿ ಎಕ್ಸ್‌ಟಾರ್ಡಿನರಿ ಜರ್ನಿ ಆಫ್ ದಿ ಫಕೀರ್' ಇಂಗ್ಲಿಷ್ ಸಿನಿಮಾ ನಿನ್ನೆ (ಜೂ. 21ಕ್ಕೆ) ತೆರೆ ಕಂಡಿದೆ.