ಪಣಜಿ : ಜನ್ಮದಿನದಂದು ಗೋವಾದ ಬೀಚ್‌ನಲ್ಲಿ ನಗ್ನವಾಗಿ ಓಡಿದ್ದ ನಟ ಹಾಗೂ ಮಾಡೆಲ್ ಮಿಲಿಂದ್ ಸೋಮನ್ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಜಕೀಯ ಸಂಘಟನೆಯಾದ ಗೋವಾ ಸುರಕ್ಷ ಮಂಚ್ ನೀಡಿದ ದೂರಿನ ಅನ್ವಯ ಸೋಮನ್ ವಿರುದ್ಧ ಐಪಿಸಿ ಸೆಕ್ಷನ್ 294 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಪ್ರದರ್ಶನ ) ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ತನ್ನ 55 ನೇ ಹುಟ್ಟುಹಬ್ಬದಂದು ಬೀಚ್‌ನಲ್ಲಿ ನಗ್ನವಾಗಿ ಓಡಿದ್ದ ಫೋಟೋವನ್ನು ಸೋಮನ್ ತನ್ನ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದರು.
ದಕ್ಷಿಣ ಗೋವಾದ ಕೆನಕೋನಾ ಪಟ್ಟಣದ ಅಣೆಕಟ್ಟಿನಲ್ಲಿ ಸರ್ಕಾರಿ ಆಸ್ತಿಪಾಸ್ತಿಗೆ ಅತಿಕ್ರಮಣ ಮತ್ತು ಆಕ್ಷೇಪಾರ್ಹ ವಿಡಿಯೋವನ್ನು ಚಿತ್ರೀಕರಿಸಿದ ಆರೋಪದ ಮೇಲೆ ನಟಿ - ರೂಪದರ್ಶಿ ಪೂನಂ ಪಾಂಡೆ ಮತ್ತು ಅವರ ಪತಿಯನ್ನು ಪೊಲೀಸರು ಗುರುವಾರದಂದು ಬಂಧಿಸಿದ್ದರು.