ETV Bharat / sitara

'ಬನಾರಸ್​' ಮೂಲಕ ಸ್ಯಾಂಡಲ್​ವುಡ್​ಗೆ ಬರ್ತಿದಾರೆ ಶಾಸಕ ಜಮೀರ್ ಪುತ್ರ

ಸೈಲೆಂಟಾಗಿ ಪೂಜೆ ಮಾಡಿ, ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರೋ 'ಬನಾರಸ್' ಸಿನಿಮಾ ತಂಡ ಚಿತ್ರೀಕರಣ ಕಂಪ್ಲೀಟ್ ಮಾಡಿ ರಿಲೀಸ್ ಮಾಡೋದಿಕ್ಕೆ ಸಜ್ಜಾಗಿದೆ. ಈ ಚಿತ್ರದಲ್ಲಿ ಜೈದ್ ಖಾನ್ ಲವರ್ ಬಾಯ್ ಆಗಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಈ ರೋಮಿಯೋಗೆ, ಸೋನಾಲ್ ಮಾಂಟೆರೊ ಜೊತೆಯಾಗಿದ್ದಾರೆ.

mla-jameer-khan-son-jaidh-khan-acting-in-banaras-cinema
ಶಾಸಕ ಜಮೀರ್ ಪುತ್ರ ಜೈದ್ ಖಾನ್
author img

By

Published : Dec 14, 2020, 3:24 PM IST

ಸ್ಯಾಂಡಲ್​ವುಡ್​ಗೆ ರಾಜಕಾರಣಿಗಳ ಮಕ್ಕಳು ಬರೋದು ಕಾಮನ್ ಆಗಿದೆ. ಈಗಾಗಲೇ ಹೆಚ್​.ಡಿ. ಕುಮಾರಸ್ವಾಮಿ, ಹೆಚ್. ರೇವಣ್ಣ, ಚೆಲುವರಾಯಸ್ವಾಮಿ ಮಕ್ಕಳು ಈಗಾಗಲೇ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ಈಗ ಶಾಸಕ ಜಮೀರ್ ಅಹಮದ್ ಖಾನ್ ಪುತ್ರ‌ ಜೈದ್ ಖಾನ್, ಬೆಲ್ ಬಾಟಮ್ ಖ್ಯಾತಿಯ ನಿರ್ದೇಶಕ ಜಯತೀರ್ಥ ನಿರ್ದೇಶನದ ಬನಾರಸ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

mla-jameer-khan-son-jaidh-khan-acting-in-banaras-cinema
ಶಾಸಕ ಜಮೀರ್ ಪುತ್ರ ಜೈದ್ ಖಾನ್

ಸೈಲೆಂಟಾಗಿ ಪೂಜೆ ನೆರವೇರಿಸಿ, ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರೋ 'ಬನಾರಸ್' ಸಿನಿಮಾ ತಂಡ ಚಿತ್ರೀಕರಣ ಪೂರ್ಣಗೊಳಿಸಿ ರಿಲೀಸ್ ಮಾಡೋದಿಕ್ಕೆ ಸಜ್ಜಾಗಿದೆ. ಈ ಚಿತ್ರದಲ್ಲಿ ಜೈದ್ ಖಾನ್ ಲವರ್ ಬಾಯ್ ಆಗಿ ತೆರೆ ಮೇಲೆ ಮಿಂಚೋದಿಕ್ಕೆ ರೆಡಿಯಾಗಿದ್ದಾರೆ. ಈ ರೋಮಿಯೋಗೆ, ಸೋನಾಲ್ ಮಾಂಟೆರೊ ಜೊತೆಯಾಗಿದ್ದಾರೆ.

ವಿಭಿನ್ನ ಪ್ರೇಮಕಥೆ ಹೊಂದಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಕಾಶಿಯಲ್ಲಿ ನಡೆದಿದೆ.‌‌ ಕಾಶಿಗೂ ಚಿತ್ರದ ಕಥೆಗೂ ಸಂಬಂಧವಿದೆ. ಹಾಗಾಗಿ ಅಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ಸಹಜ ಸೌಂದರ್ಯದ ಕಾಶಿಯ ಎಲ್ಲಾ ಘಾಟ್ ನಲ್ಲೂ ಬನಾರಸ್ ಚಿತ್ರದ ಚಿತ್ರೀಕರಣ ನಡೆದಿದೆ. ಉಳಿದಂತೆ ಬೆಂಗಳೂರು, ಮೈಸೂರು, ಗೋವಾದಲ್ಲೂ ಚಿತ್ರೀಕರಣವಾಗಿದೆ.

ಜೈದ್ ಖಾನ್

ಓದಿ:'ಪಥನ್​' ಮೂಲಕ ತೆರೆ ಮೇಲೆ ಸಲ್ಲು-ಶಾರುಖ್​: ಮೋಡಿ ಮಾಡಲಿದೆಯೇ ಈ ಜೋಡಿ

ಇಲ್ಲಿಯವರೆಗೆ ಯಾವ ಕನ್ನಡ ಚಿತ್ರಗಳ ಚಿತ್ರೀಕರಣ ಸಹ ಕಾಶಿಯಲ್ಲಿ‌ ಇಷ್ಟು ದಿನ ನಡಿದಿಲ್ಲ. ಬಹುಶಃ ಇದೇ ಮೊದಲು ಎನ್ನಲಾಗ್ತಿದೆ. ಕಾಶಿಯ ಪರಂಪರೆ, ಸಂಸ್ಕೃತಿ ಹಾಗೂ ಅಲ್ಲಿನ ಪಾತ್ರಗಳನ್ನು ಬನಾರಸ್ ಚಿತ್ರದಲ್ಲಿ ಕಣ್ತುಂಬಿಕೊಳ್ಳಬಹುದು ಎಂದು ನಿರ್ದೇಶಕ ಜಯತೀರ್ಥ ತಿಳಿಸಿದ್ದಾರೆ. ಇತ್ತೀಚೆಗೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸಾಂಕೇತಿಕವಾಗಿ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿ ಕುಂಬಳಕಾಯಿ ಒಡೆಯಲಾಯಿತು. ಈ ಚಿತ್ರದಲ್ಲಿ ದೇವರಾಜ್, ಅಚ್ಯುತ‌ಕುಮಾರ್, ಸುಜಯ್ ಶಾಸ್ತ್ರಿ, ಸ್ವಪ್ನ ರಾಜ್, ಬರ್ಕತ್ ಅಲಿ, ಚಿರಂತ್, ರೋಹಿತ್ ಮುಂತಾದವರು ಬನಾರಸ್ ನ‌ ತಾರಾಬಳಗದಲ್ಲಿದ್ದಾರೆ.

'ಬನಾರಸ್' ಸಿನಿಮಾ ತಂಡ

ಚಿತ್ರದ ಸುಮಧುರ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಹರ್ಷ ನೃತ್ಯ ನಿರ್ದೇಶನ ಹಾಗೂ ವಿಜಯ್ ಮಾಸ್ಟರ್, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ. ರಶ್ಮಿ ವಸ್ತ್ರವಿನ್ಯಾಸ ಮಾಡಿದ್ದಾರೆ.

ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಿಲಕ್ ರಾಜ್ ಬಲ್ಲಾಳ್ ನಿರ್ಮಿಸಿರುವ ಈ ಚಿತ್ರಕ್ಕೆ ಮುಜಮ್ಲಿಲ್‌ ಅಹಮದ್ ಖಾನ್ ಅವರ ಸಹ ನಿರ್ಮಾಣವಿದೆ. ಬನಾರಸ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಶಾಸಕ ಜಮೀರ್ ಪುತ್ರ ಜೈದ್ ಖಾನ್ ಪ್ರೇಕ್ಷಕರ ಹೃದಯ ಗೆಲ್ಲುತ್ತಾರಾ? ಅನ್ನೋದು ಮುಂದಿನ ವರ್ಷ ಗೊತ್ತಾಗಲಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.