ETV Bharat / sitara

ಹುಟ್ಟಿದ ದಿನದಂದೇ ಬೆತ್ತಲಾಗಿ ಓಡಿದ್ದಾರೆ ಈ ನಟ.. ಫೋಟೋ ವೈರಲ್​​​ - Milind Soman news

ನಟ ಮಿಲಿಂದ್ ಸೋಮನ್ ಹುಟ್ಟುಹಬ್ಬದ ಪ್ರಯುಕ್ತ ತಮಗೆ ತಾವೇ ವಿಶ್​​ ಮಾಡಿಕೊಂಡಿದ್ದು, ಸಮುದ್ರ ತೀರದಲ್ಲಿ ಬೆತ್ತಲಾಗಿ ಓಡುತ್ತಿರುವ ಫೋಟೋವನ್ನು ಶೇರ್​​ ಮಾಡಿದ್ದಾರೆ..

Milind Soman is celebrating his 55th birthday
ಹುಟ್ಟಿದ ದಿನದಂದೇ ಬೆತ್ತಲಾಗಿ ಓಡಿದ್ದಾರೆ ಈ ನಟ : ಫೋಟೋ ವೈರಲ್​​​
author img

By

Published : Nov 4, 2020, 5:55 PM IST

ಬಿಟೌನ್​​ ಖ್ಯಾತ ಮಾಡೆಲ್​ ಹಾಗೂ ನಟ ಮಿಲಿಂದ್ ಸೋಮನ್ ಇಂದು 55ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹುಟ್ಟುಹಬ್ಬದ ಪ್ರಯುಕ್ತ ತಮಗೆ ತಾವೇ ವಿಶ್​​ ಮಾಡಿಕೊಂಡಿರುವ ನಟ, ಸಮುದ್ರ ತೀರದಲ್ಲಿ ಬೆತ್ತಲಾಗಿ ಓಡುತ್ತಿರುವ ಫೋಟೋವನ್ನು ಶೇರ್​​ ಮಾಡಿದ್ದಾರೆ.

ಮಿಲಿಂದ್ ಸೋಮನ್ ಬೆತ್ತಲಾಗಿ ಓಡುತ್ತಿರುವ ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಈ ಫೋಟೋ ತೆಗೆದಿರುವುದು ಬೇರೆ ಯಾರೂ ಅಲ್ಲದೆ ಸ್ವತಃ ಮಿಲಿಂದ್​​ ಪತ್ನಿ ಅಂಕಿತಾ.

ಫೋಟೋವನ್ನು ತಮ್ಮ ಟ್ವಿಟರ್​​​ನಲ್ಲಿ ಪೋಸ್ಟ್​​ ಮಾಡಿರುವ ನಟ ನನಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಇವರ ಮತ್ತೊಂದು ವಿಶೇಷ ಏನಂದ್ರೆ 26 ವರ್ಷದ ಕಿರಿಯ ಯುವತಿಯನ್ನು ಮಿಲಿಂದ್​ ಮದುವೆಯಾಗಿದ್ದಾರೆ.

ಮಿಲಿಂದ್​ ಈ ರೀತಿ ಮಾಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಮಾಜಿ ಮಿಸ್​ ಇಂಡಿಯಾ ಮಧು ಸಪ್ರೆ ಜೊತೆ ಬೆತ್ತಲಾಗಿ ಫೋಟೋ ಶೂಟ್​​ ಮಾಡಿಸಿಕೊಂಡಿದ್ರು. ಟಫ್​​ ಶೂ ಜಾಹೀರಾತಿಗಾಗಿ ಫೋಟೋಶೂಟ್​​ ಮಾಡಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಇವರ ಮೇಲೆ ಪ್ರಕರಣ​ ದಾಖಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.