ಹೈದರಾಬಾದ್(ತೆಲಂಗಾಣ): ನಟ ವಿಜಯ್ ದೇವರಕೊಂಡ ಹಾಗೂ ನಟಿ ಅನನ್ಯಾ ಪಾಂಡೆ ನಟಿಸಿರುವ ಪ್ಯಾನ್-ಇಂಡಿಯಾ 'ಲೈಗರ್' ಚಿತ್ರದಲ್ಲಿ ಬಾಕ್ಸರ್ ಮೈಕ್ ಟೈಸನ್ (Mike Tyson) ನಟಿಸಿದ್ದಾರೆ. ಬಾಕ್ಸಿಂಗ್ ಸ್ಟಾರ್ ಮೈಕ್ ಟೈಸನ್ಗೆ ಇದು ಮೊದಲ ಭಾರತೀಯ ಚಿತ್ರವಾಗಿದ್ದು, ಅವರಿಗೋಸ್ಕರ ಚಿತ್ರತಂಡ ವಿಶೇಷ ಭಾರತೀಯ ಊಟದ ವ್ಯವಸ್ಥೆ ಮಾಡಿತ್ತು.
ಮೈಕ್ ಟೈಸನ್ ಹಾಗೂ ಅವರ ಪತ್ನಿ ಕಿಕಿ ಒಟ್ಟಿಗೆ ಭಾರತೀಯ ಊಟ ಸವಿದಿದ್ದು, ಅವರಿಗೋಸ್ಕರ ಹೈದರಾಬಾದ್ನ ಗಾರ್ಲಿಕ್ಸ್ ನಾನ್, ತಂದೂರಿ ಚಿಕನ್, ಬಟರ್ ಚಿಕನ್, ಫಿಶ್ ಟಿಕ್ಕಾ ಮಸಾಲಾ ಹಾಗೂ ಮೇಕೆ ಬಿರಿಯಾನಿ ತಯಾರು ಮಾಡಲಾಗಿತ್ತು. ಈ ವೇಳೆ ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಸಾಥ್ ನೀಡಿದರು.
ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಮೈಕ್ ಟೈಸನ್ ಹೈದರಾಬಾದ್ನ ಜನಪ್ರಿಯ ಸ್ಟ್ರೀಟ್ ಫುಡ್ ಆಲೂ ಗೋಬಿ, ಸಮೋಸಾ, ಪಾಲಕ್ ಪನೀರ್ ಮತ್ತು ಕಬಾಬ್ ಕೇಳಿದ್ದರಂತೆ. ಹೀಗಾಗಿ ಚಿತ್ರತಂಡ ವಿಶೇಷ ಊಟದ ಆಯೋಜನೆ ಮಾಡಿತ್ತು.
ಅರ್ಜುನ್ ರೆಡ್ಡಿ ಖ್ಯಾತಿಯ ತೆಲುಗು ನಟ ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ 2022ರ ಆರಂಭದಲ್ಲಿ ಸೆಟ್ಟೇರಲಿದ್ದು, ನಿರೀಕ್ಷೆಗಳು ಗರಿಗೆದರಿವೆ. ಈ ಚಿತ್ರದ ಮೂಲಕ ವಿಜಯ್ ದೇವರಕೊಂಡ ಬಾಲಿವುಡ್ಗೆ ಪದಾರ್ಪಣೆ ಮಾಡ್ತಿದ್ದು, ಅನನ್ಯಾ ಪಾಂಡೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ. ಇದರ ಜೊತೆಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಟೈಸನ್ಗೆ ಇದು ಮೊದಲ ಭಾರತೀಯ ಚಿತ್ರವಾಗಿದೆ.
ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪುರಿ ಜಗನ್ನಾಥ್, ಚಾರ್ಮಿ ಕೌರ್, ಕರಣ್ ಜೋಹರ್ ಹಾಗೂ ಅಪೂರ್ವ ಮೆಹ್ತಾ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.