ಬೆಂಗಳೂರು: ಅಭಿಮಾನಿಗಳೇ ದೇವರು ಎಂದ ವರನಟ ಡಾ. ರಾಜ್ಕುಮಾರ್ ಅವರ ನೆನಪು ಎಂದೆಂದಿಗೂ ಅಮರ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಣ್ಣಿಸಿದ್ದಾರೆ.
ಇಂದು ಕನ್ನಡದ ಕಣ್ಮಣಿ ರಾಜ್ ಹುಟ್ಟುಹಬ್ಬದ ನಿಮಿತ್ತ ಟ್ವೀಟ್ ಮಾಡಿರುವ ಮಾಜಿ ಸಿಎಂ, ನಾಡುನುಡಿಯ ಬಗ್ಗೆ ಅವರ ನಿಲುವು ಅನುಕರಣೀಯ ಎಂದಿದ್ದಾರೆ. ಕನ್ನಡದ ಅಸ್ಮಿತೆ ಮತ್ತು ಆದರ್ಶವಾಗಿದ್ದ ರಾಜ್ ಸದಭಿರುಚಿಯ ಸಿನಿಮಾಗಳನ್ನು ನೋಡಿ ನಾನು, ನನ್ನಂತಹ ಲಕ್ಷಾಂತರ ಮಂದಿ ಬದುಕಿನಲ್ಲಿ ಸ್ಫೂರ್ತಿ ಕಂಡವರು.
ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿದ್ದ ಇಂತಹ ಮಹಾ ಚೇತನಕ್ಕೆ ನನ್ನ ಪ್ರಣಾಮಗಳು ಎಂದು ಹೆಚ್.ಡಿ ಕುಮಾರಸ್ವಾಮಿ ರಾಜ್ರನ್ನು ನೆನಪಿಸಿಕೊಂಡಿದ್ದಾರೆ.