ETV Bharat / sitara

'ಸೈರಾ ನರಸಿಂಹರೆಡ್ಡಿ' ಟ್ರೇಲರ್ ಬಿಡುಗಡೆ, ಅದ್ಧೂರಿ ಮೇಕಿಂಗ್​​​​ಗೆ ಪ್ರೇಕ್ಷಕರು ಫಿದಾ! - ಅಮಿತಾಬ್ ಬಚ್ಚನ್

ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನ ಚರಿತ್ರೆ ಆಧಾರಿತ 'ಸೈ ರಾ ನರಸಿಂಹರೆಡ್ಡಿ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಕೊನಿಡೇಲ ಪ್ರೊಡಕ್ಷನ್ಸ್​​​​ ಬ್ಯಾನರ್ ಅಡಿ ಚಿರು ಪುತ್ರ ರಾಮ್​​ಚರಣ್ ತೇಜ ಸಿನಿಮಾ ನಿರ್ಮಿಸಿದ್ದು ಸುರೇಂದರ್ ರೆಡ್ಡಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಸೈ ರಾ ನರಸಿಂಹರೆಡ್ಡಿ
author img

By

Published : Sep 18, 2019, 6:10 PM IST

ತೆಲುಗಿನ ಬಹುನಿರೀಕ್ಷಿತ 'ಸೈರಾ ನರಸಿಂಹರೆಡ್ಡಿ' ಟ್ರೇಲರ್ ಬಿಡುಗಡೆಯಾಗಿದೆ. ಕೊನಿಡೇಲ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ರಾಮ್​​​ಚರಣ್ ತೇಜ ನಿರ್ಮಾಣದ ಈ ಸಿನಿಮಾದ ಟ್ರೇಲರ್ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಸೇರಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

  • " class="align-text-top noRightClick twitterSection" data="">

ಸ್ವತಂತ್ಯ್ರ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನ ಚರಿತ್ರೆ ಆಧಾರಿತ ಈ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಹಳ ಅದ್ಧೂರಿಯಾಗಿ ಮೂಡಿಬಂದಿರುವುದು ಈ ಟ್ರೇಲರ್​ ನೋಡಿದಾಗಲೇ ತಿಳಿಯುತ್ತದೆ. ಚಿತ್ರತಂಡ ಮೊದಲೇ ಹೇಳಿದಂತೆ ಇಂದು ಸಂಜೆ 5.31 ಕ್ಕೆ ಸರಿಯಾಗಿ ಚಿತ್ರದ ಟ್ರೇಲರನ್ನು ಬಿಡುಗಡೆ ಮಾಡಿದೆ. ಕೊನಿಡೇಲ ಪ್ರೊಡಕ್ಷನ್, ತಮನ್ನಾ ಭಾಟಿಯಾ ಹಾಗೂ ಇನ್ನಿತರರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸೈ ರಾ ಟ್ರೇಲರನ್ನು ಶೇರ್ ಮಾಡಿಕೊಂಡಿದ್ದಾರೆ. ಮೊನ್ನೆ ತಾನೇ ಚಿತ್ರತಂಡ ಸಿನಿಮಾದ ಪ್ರೀ ರೀಲೀಸ್ ಕಾರ್ಯಕ್ರಮ ಜರುಗಿತ್ತು. ವಿಶೇಷ ಎಂದರೆ ಕನ್ನಡ ಟ್ರೇಲರ್​​​ನಲ್ಲಿ ಅಮಿತಾಬ್ ಬಚ್ಚನ್, ಚಿರಂಜೀವಿ, ಸುದೀಪ್, ವಿಜಯ್ ಸೇತುಪತಿ ಅವರೇ ತಮ್ಮ ಕ್ಯಾರೆಕ್ಟರ್​​​ಗಳಿಗೆ ಡಬ್ ಮಾಡಿದ್ದಾರೆ. ಅಕ್ಟೋಬರ್ 2 ಗಾಂಧಿ ಜಯಂತಿಯ ವಿಶೇಷ ದಿನದಂದು ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರವನ್ನು ಸುರೇಂದರ್ ರೆಡ್ಡಿ ನಿರ್ದೇಶಿಸಿದ್ದಾರೆ. ಟ್ರೇಲರ್ ಬಿಡುಗಡೆಯಾದ ಅರ್ಧ ಗಂಟೆಯಲ್ಲೇ ಸುಮಾರು 65 ಸಾವಿರ ಮಂದಿ ಕನ್ನಡ ಟ್ರೇಲರ್ ವೀಕ್ಷಿಸಿದ್ದಾರೆ.

Intro:Body:

sye raa trailer

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.