ETV Bharat / sitara

ನೇತ್ರಾಳಾಗಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಮೇಘನಾ !

ಪ್ರತಿ ದಿನವೂ ವಿಭಿನ್ನ ತಿರುವು, ಕುತೂಹಲಗಳ ಮೂಲಕ ಸೀರಿಯಲ್ ಪ್ರಿಯರ ಮನ ಸೆಳೆಯುತ್ತಿರುವ 'ನಮ್ಮನೆ ಯುವರಾಣಿ' ಧಾರಾವಾಹಿಗೆ ನೇತ್ರಾ ಎಂಬ ಪಾತ್ರ ಎಂಟ್ರಿಯಾಗಿದ್ದು ಕುತೂಹಲ ಹೆಚ್ಚಾಗಿದೆ.

author img

By

Published : Nov 3, 2020, 4:07 PM IST

meghana playing a role in nammane yuvarani
ನೇತ್ರಾಳಾಗಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಮೇಘನಾ !

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಮ್ಮನೆ ಯುವರಾಣಿ' ಧಾರಾವಾಹಿಯು ಪ್ರತಿ ಸಂಚಿಕೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದೆ. ಪ್ರತಿ ದಿನವೂ ವಿಭಿನ್ನ ತಿರುವು, ಕುತೂಹಲಗಳ ಮೂಲಕ ಸೀರಿಯಲ್ ಪ್ರಿಯರ ಮನ ಸೆಳೆಯುತ್ತಿರುವ ಈ ಧಾರಾವಾಹಿದಲ್ಲಿ ಹೊಸ ಪಾತ್ರದ ಎಂಟ್ರಿಯಾಗಿದೆ. ಹೌದು, ನೇತ್ರಾ ಎನ್ನುವ ಹೊಸ ಪಾತ್ರ ನಮ್ಮನೆ ಯುವರಾಣಿಗೆ ಎಂಟ್ರಿಯಾಗಿದ್ದು ಇದರಿಂದ ಕುತೂಹಲ ಹೆಚ್ಚಾಗಿದೆ.

meghana playing a role in nammane yuvarani
ನಟಿ ಮೇಘನಾ

ರಾಜ್ ಗುರು ಮನೆತನದ ಮರ್ಯಾದೆಯನ್ನು ಕಳೆಯಲು ಬಂದಿರುವ ನೇತ್ರಾ ಈಗಾಗಲೇ ಅನಿಕೇತ್ ರಾಜ್ ಗುರು ಮೇಲೆ ಸುಳ್ಳು ಆರೋಪ ನೀಡಿದ್ದಾಳೆ. ಇದರಿಂದಾಗಿ ಅನಿಕೇತ್ ಜೈಲು ಸೇರಿದ್ದು, ಅವನು ಹೇಗೆ ಹೊರಬರುತ್ತಾನೆ, ನೇತ್ರಾಳ ವಿರುದ್ಧ ರಾಜ್ ಗುರು ಕುಟುಂಬ ಹೇಗೆ ತಿರುಗಿ ಬೀಳಲಿದೆ, ಅಷ್ಟಕ್ಕೂ ನೇತ್ರ ಇದ್ದಕ್ಕಿದ್ದಂತೆ ಬಂದುದು ಯಾಕೆ ಎಂಬೆಲ್ಲಾ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಾಗಿದೆ.

ಅಷ್ಟಕ್ಕೂ ಯಾರು ಈ ನೇತ್ರಾ ಪಾತ್ರಧಾರಿ!

ನೇತ್ರಾ ಆಗಿ ನಮ್ಮನೆ ಯುವರಾಣಿ ಧಾರಾವಾಹಿ ತಂಡ ಸೇರಿರುವ ಈಕೆಯ ಹೆಸರು ಮೇಘನಾ ಎಸ್ ಶಂಕರಪ್ಪ. ಅಂದ ಹಾಗೇ ಮೇಘನಾ ಅವರು ಕಿರುತೆರೆಗೆ ಹೊಸ ಮುಖವೇನಲ್ಲ. ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಮೇಘನಾ ಕಿನ್ನರಿ ಧಾರಾವಾಹಿಯ ಮೂಲಕ ಮನೆ ಮಾತಾಗಿದ್ದರು.

ಕೃಷ್ಣ ತುಳಸಿ, ರತ್ನಗಿರಿ ರಹಸ್ಯ, ದೇವಯಾನಿ, ಸಿಂಧೂರ ಹೀಗೆ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಮೇಘನಾ ಅಭಿನಯಿಸಿದ್ದರೂ, ಅವರು ನಟಿಸಿರುವಂತಹ ಪಾತ್ರಗಳು ವೀಕ್ಷಕರ ಮನ ಸೆಳೆದಿದೆ‌. ಪಾಸಿಟಿವ್ ಮತ್ತು ನೆಗೆಟಿವ್ ಎರಡು ತರಹದ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಮೇಘನಾಗೆ ಬೆಳ್ಳಿತೆರೆಯಿಂದಲೂ ಅವಕಾಶಗಳು ಬರುತ್ತಿದೆ. ಆದರೆ ವಿಭಿನ್ನ ಪಾತ್ರಗಳಲ್ಲಿ ಗುರುತಿಸಿಕೊಳ್ಳುವ ಮಹಾದಾಸೆ ಇರುವ ಈಕೆ ಅದಕ್ಕಾಗಿ ಕಾಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.