ಬೇಸಿಗೆ ಬಂದ್ರೆ ಸಾಕು, ಯಾವುದಾದರೂ ಸುಂದರ ಪ್ರಕೃತಿ ತಾಣಗಳಿಗೆ ಟ್ರಿಪ್ ಹೋಗಬೇಕು ಎಂದು ಎಲ್ಲರಿಗೂ ಅನ್ನಿಸುತ್ತದೆ. ಇನ್ನು ಸಿನಿಮಾ ನಟರೂ ಕೂಡಾ ಬೇಸಿಗೆ ರಜೆಯಲ್ಲಿ ತಮ್ಮ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಕುಟುಂಬ ಸಹಿತ ಪ್ರವಾಸ ಹೋಗುವುದುಂಟು.
- " class="align-text-top noRightClick twitterSection" data="
">
'ಚಾರ್ಮಿನಾರ್' ಚಿತ್ರದ ಮೂಲಕ ಸ್ಟಾರ್ ಪಟ್ಟ ಅಲಂಕರಿಸಿದ್ದ ಮೇಘನಾ ಗಾಂವ್ಕರ್ ಸಿನಿಮಾಗಳಿಗಿಂತ ಹೆಚ್ಚಾಗಿ ಫ್ಯಾಷನ್, ಟ್ರಾವೆಲಿಂಗ್, ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. 'ಸಿಂಪಲ್ಲಾಗಿ ಇನ್ನೊಂದ್ ಲವ್ಸ್ಟೋರಿ' ನಂತರ ಜಗ್ಗೇಶ್ ಜೊತೆ 'ಕಾಳಿದಾಸ ಕನ್ನಡ ಮೇಷ್ಟ್ರು' ಎಂಬ ಸಿನಿಮಾದಲ್ಲಿ ಮೇಘನಾ ನಟಿಸುತ್ತಿದ್ದಾರೆ. ಈ ಚಿತ್ರೀಕರಣದ ಮಧ್ಯೆ ಕೊಂಚ ಬಿಡುವು ಮಾಡಿಕೊಂಡು ಮೇಘನಾ ಫಾರಿನ್ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ.
- " class="align-text-top noRightClick twitterSection" data="
">
ಸದ್ಯಕ್ಕೆ ಇಂಡೋನೇಷ್ಯಾದಲ್ಲಿರುವ ಕಾಳಿದಾಸ ಮೇಷ್ಟ್ರ ಪತ್ನಿ ಅಲ್ಲಿನ ಸುಂದರ ತಾಣಗಳು, ಹೋಟೆಲ್, ಶಾಪಿಂಗ್ ಮಾಲ್ ಎಲ್ಲೆಡೆ ಸುತ್ತಾಡಿ ಎಂಜಾಯ್ ಮಾಡುತ್ತಿದ್ದಾರೆ. ಮೊದಲ ಬಾರಿ ಅಂಡರ್ವಾಟರ್ನಲ್ಲಿ ಈಜಾಡಿ ಮಜಾ ಮಾಡಿದ್ದಾರೆ. ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ಹಂಚಿಕೊಂಡಿದ್ದಾರೆ.
- View this post on Instagram
#🕊 The gladdest moment in human life is departure into the unknown lands!
">